Asianet Suvarna News Asianet Suvarna News

ಭಾರತದ ಸಾಕ್ಷಿ ಸ್ವೀಕರಿಸಿದ ಯುಕೆ ಕೋರ್ಟ್: ಶೀಘ್ರ PNB ವಂಚಕ ನೀರವ್ ಮೋದಿ ಗಡೀಪಾರು..?

ನೀರವ್‌ ಮೋದಿ ವಿರುದ್ಧ ಭಾರತೀಯ ತನಿಖಾ ತಂಡ ಒದಗಿಸಿದ ಸಾಕ್ಷಿ ಸ್ವೀಕರಿಸಿದ ಬ್ರಿಟನ್‌ ನ್ಯಾಯಾಲಯ | ಶೀಘ್ರವೇ ಭಾರತದ ವಶಕ್ಕೆ ಪಿಎನ್‌ಬಿ ವಂಚಕ..?

Indias evidence on Nirav Modi admissible says UK court dpl
Author
Bangalore, First Published Nov 4, 2020, 9:32 AM IST

ಲಂಡನ್‌(ನ.04): ವಿದೇಶಕ್ಕೆ ಪರಾರಿಯಾದ ವಜ್ರೋದ್ಯಮಿ ನೀರವ್‌ ಮೋದಿ ವಿರುದ್ಧ ಭಾರತೀಯ ತನಿಖಾ ತಂಡಗಳು ಒದಗಿಸಿರುವ ಸಾಕ್ಷ್ಯಾಧಾರಗಳು ಸ್ವೀಕಾರಾರ್ಹವಾದದ್ದು ಎಂದು ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಬ್ರಿಟನ್‌ ನ್ಯಾಯಾಲಯದ ನ್ಯಾಯಾಧೀಶರು ಪ್ರತಿಪಾದಿಸಿದ್ದಾರೆ.

ಆದರೆ, ಮದ್ಯದೊರೆ ವಿಜಯ್‌ ಮಲ್ಯರ ಭಾರತಕ್ಕೆ ಗಡೀಪಾರು ಪ್ರಕರಣದಲ್ಲಿ ಬ್ರಿಟನ್‌ ನ್ಯಾಯಾಲಯದ ಆದೇಶಕ್ಕೆ ತಾನು ಬದ್ಧ ಎಂದು ಹೇಳಿದ್ದಾರೆ. ಆದರೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚನೆ ಎಸಗಿದ ವಂಚಕ ನೀರವ್‌ ಮೋದಿ ವಿರುದ್ಧ ಹಣಕಾಸು ವಂಚನೆ, ಸಾಕ್ಷ್ಯಗಳ ನಾಶ, ಸಾಕ್ಷ್ಯಗಳಿಗೆ ಬೆದರಿಕೆ ಸೇರಿದಂತೆ ಗಂಭೀರ ಆರೋಪಗಳಿವೆ ಎಂದಿದ್ದಾರೆ.

ಸ್ವತಃ ಕೊರೋನಾ ಲಸಿಕೆ ಪ್ರಯೋಗಕ್ಕೆ ಒಳಗಾದ ದುಬೈನ ದೊರೆ ರಶೀದ್‌!

ಹೀಗಾಗಿ, ಮಲ್ಯ ಪ್ರಕರಣವನ್ನು ನೀರವ್‌ ಮೋದಿ ಕೇಸ್‌ನಲ್ಲಿ ತಳಕು ಹಾಕುವ ಬಗ್ಗೆ ಭಾರತದ ಪರ ವಾದಿಸುತ್ತಿರುವ ಕ್ರೌನ್‌ ಪ್ರಾಸಿಕ್ಯೂಷನ್‌ ಸವೀರ್‍ಸ್‌ ಅಸಮಾಧಾನ ವ್ಯಕ್ತಪಡಿಸಿತು.

ಸದ್ಯ ವಡ್ರ್ಸ್‌ವತ್ ಜೈಲಿಯಲ್ಲಿರುವ ನೀರವ್ ಮೋದಿ ವಿರುದ್ಧ ಎರಡು ಗಡಿಪಾರು ಅರ್ಜಿಗಳಿವೆ. ಒಂದು ಸಿಬಿಐ ಮತ್ತು ಇನ್ನೊಂದು ಜಾರಿ ನಿರ್ದೇಶನಾಲಯದಿಂದ ಸಲ್ಲಿಸಲ್ಪಟ್ಟಿದೆ.

ತಲಾ 12 ರಾಜ್ಯದಲ್ಲಿ ಗೆದ್ದ ಟ್ರಂಪ್, ಬೈಡೆನ್: ಇಲ್ಲಿದೆ ಅಮೆರಿಕ ಚುನಾವಣೆಯ ಅಪ್ಡೇಟ್ಸ್

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮುಂಬೈ ಬ್ರಾಂಚ್‌ನಲ್ಲಿ ವಂಚನೆ ಮಾಡಿದ್ದರ ಬಗಗ್ಎ ಮೊದಲ ಅರ್ಜಿಯಲ್ಲಿ ಆರೋಪಿಸಲಾಗಿದ್ದು, ಎರಡನೇ ಅರ್ಜಿಯಲ್ಲಿ ಕೊಲೆ ಸೇರಿ, ಬೆದರಿಕೆ, ಸಾಕ್ಷಿ ನಾಶ ಆರೋಪಗಳೂ ಒಳಗೊಂಡಿವೆ.

ಮುಂದಿನ ವಿಚಾರಣೆಯನ್ನು 2021ರ ಜ.7 ಮತ್ತು 8ಕ್ಕೆ ಮುಂದೂಡಲಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಡಿಸೆಂಬರ್ 2018 ರಲ್ಲಿ ಮಲ್ಯ ಅವರ ಹಸ್ತಾಂತರವನ್ನು ಸ್ಪಷ್ಟಪಡಿಸಿದೆ. ಹೈಕೋರ್ಟ್‌ನಲ್ಲಿ ಅವರ ಮೇಲ್ಮನವಿಗಳನ್ನೂ ತಿರಸ್ಕರಿಸಲಾಯಿತು. ಆದರೆ ಪ್ರಸ್ತುತ ಕಾನೂನು ಪ್ರಕ್ರಿಯೆಗಳಿಂದ ಹಸ್ತಾಂತರ ವಿಳಂಬವಾಗಿದೆ.

Follow Us:
Download App:
  • android
  • ios