ದುಬೈ(ನ.04):  ಹೊಸ ಲಸಿಕೆ ಪ್ರಯೋಗದ ವೇಳೆ ಜನಸಾಮಾನ್ಯರನ್ನು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ದುಬೈನಲ್ಲಿ ಸ್ವತಃ ದೊರೆ ಶೇಖ್‌ ಮಹಮ್ಮದ್‌ ಬಿನ್‌ ರಶೀದ್‌ ತಾವೇ ಇನ್ನೂ ಅನುಮೋದನೆ ಪಡೆಯದ ಕೊರೋನಾ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದಾರೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಬರೆದುಕೊಂಡಿರುವ ಅವರು, ‘ನಾನು ಇಂದು ಕೊರೋನಾ ಲಸಿಕೆ ಪಡೆದಿದ್ದೇನೆ. ಯುಎಇಯಲ್ಲಿ ಲಸಿಕೆ ಲಭ್ಯವಾಗುವಂತೆ ಶ್ರಮಿಸುತ್ತಿರುವ ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ. ಆದರೆ ತಾವು ಪಡೆದುಕೊಂಡ ಲಸಿಕೆ ಯಾವುದು ಎಂದು ತಿಳಿಸಿಲ್ಲ.

ಸದ್ಯ ಯುಎಇಯಲ್ಲಿ ಚೀನಾದ ಸಿನೋಫಾಮ್‌ರ್‍ ಮತ್ತು ರಷ್ಯಾದ ಸ್ಪುಟ್ನಿಕ್‌-5 ಕೊರೋನಾ ಲಸಿಕೆಗಳ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ರಾಜ ಶೇಖ್‌ ರಶೀದ್‌ ಮಾತ್ರವಲ್ಲದೆ ವಿದೇಶಾಂಗ ಸಚಿವ ಶೇಖ್‌ ಅಬ್ದುಲ್ಲಾ ಬಿನ್‌ ಜಾಯೇದ್‌ ಅಲ್‌-ನಹ್ಯಾನ್‌ ಮತ್ತು ಉಪ ಪ್ರಧಾನಿ ಶೇಖ್‌ ಸೈಫ್‌ ಬಿನ್‌ ಜಾಯೇದ್‌ ಅಲ್‌-ನಹ್ಯಾನ್‌ ಕೂಡ ಪ್ರಯೋಗ ಹಂತದ ಲಸಿಕೆ ಪಡೆದಿದ್ದಾರೆ.