Asianet Suvarna News Asianet Suvarna News

264 ಎಲೆಕ್ಟೋರಲ್‌ ಮತದೊಂದಿಗೆ ಗೆಲುವಿನತ್ತ ಬೈಡೆನ್ ದಾಪುಗಾಲು, ಟ್ರಂಪ್‌ಗೆ ಶಾಕ್!

ಬೈಡೆನ್, ಟ್ರಂಪ್ ನಡುವೆ ಭಾರೀ ಪೈಪೋಟಿ| ವಿಶ್ವದ ದೊಡ್ಡಣ್ಣನ ಅಧ್ಯಕ್ಷರಾಗೋರು ಯಾರು?| ಮತ ಎಣಿಕೆ ಕಾರ್ಯ ಅಂತಿಮ ಹಂತದತ್ತ| ಇಲ್ಲಿದೆ ನೋಡಿ ಕ್ಷಣ ಕ್ಷಣದ ಅಪ್ಡೇಟ್ಸ್

Donald Trump Vs Joe Biden US Election 2020 Result Updates pod
Author
Bangalore, First Published Nov 4, 2020, 8:12 AM IST

ವಾಷಿಂಗ್ಟನ್(ನ.05): ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತ ತುರುಸಿನಿಂದ ನಡೆದಿದ್ದು, ಮತ ಎಣಿಕೆಯು ಇಂದು ಮುಕ್ತಾಯವಾಗುವ ನಿರೀಕ್ಷೆಯಿದೆ. ಮತ ಎಣಿಕೆ ಆರಂಭದಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಬೋ ಬೈಡನ್‌ ಹೆಚ್ಚೂ ಕಡಿಮೆ ಸಮ-ಸಮ ಹೋರಾಟ ನಡೆಸುತ್ತಿದ್ದರೂ, ಬಳಿಕ ಈ ಅಂತರ ಹೆಚ್ಚಾಗಿದೆ. ಸದ್ಯ ಬೈಡೆನ್ ಮ್ಯಾಜಿಕ್ ನಂಬರ್‌ನತ್ತ ಸಮೀಪಿಸುತ್ತಿದ್ದಾರೆ.  

ಗುರುವಾರಬೆಳಗ್ಗೆ 08.00 ಗಂಟೆಗೆ ಲಭ್ಯವಾದ ಫಲಿತಾಂಶ ಹೀಗಿದೆ. ಒಟ್ಟು 538 ಪ್ರತಿನಿಧಿ ಸ್ಥಾನಗಳ ಪೈಕಿ ಜೋ ಬೈಡನ್‌ ಪರ 264 ಪ್ರತಿನಿಧಿಗಳು ಆಯ್ಕೆಯಾಗಿದ್ದರೆ, ಟ್ರಂಪ್‌ ಪರ 214 ಪ್ರತಿನಿಧಿಗಳು ಗೆದ್ದಿದ್ದರು. ಬೈಡನ್‌ ಪರ ಶೇ. 50.4 ಹಾಗೂ ಟ್ರಂಪ್‌ ಪರ ಶೇ. 48% ಮತಗಳು ಬಂದಿವೆ.

ಆದರೆ ಇನ್ನೂ 60 ಪ್ರತಿನಿಧಿ ಸ್ಥಾನಗಳ ಮತ ಎಣಿಕೆ ಪ್ರಗತಿಯಲ್ಲಿದೆ. ಆದರೆ ಈ ಸ್ಥಾನಗಳ ರಾಜ್ಯಗಳು ಬಹುತೇಕ ರಿಪಬ್ಲಿಕನ್‌ ಪಕ್ಷದ ಪರ ಬೆಂಬಲ ಹೊಂದಿರುವ ರಾಜ್ಯಗಳು ಎಂಬುವುದು ಉಲ್ಲೇಖನೀಯ. ಹೀಗಾಗಿ ಟ್ರಂಪ್ ಬಹುಮತದ ಗೆರೆಯಾದ 270 ದಾಟುವ ಸಾಧ್ಯತೆ ಇದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ. ಪೆನ್ಸಿಲ್ವೇನಿಯಾ, ಮಿಶಿಗನ್‌, ವಿಸ್ಕಾನ್ಸಿನ್‌, ಉತ್ತರ ಕರೋಲಿನಾ- ಇವು ಮತ ಎಣಿಕೆ ಪ್ರಗತಿಯಲ್ಲಿರುವ ರಾಜ್ಯಗಳಾಗಿವೆ.

ಒಟ್ಟು 500 ಸ್ಥಾನಗಳ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೇಕಾದ ಮ್ಯಾಜಿಕ್ ನಂಬರ್ 270 ಆಗಿದ್ದು, ಇದನ್ನು ಗಳಿಸಿದವರು ಅಮೆರಿಕದ ಸಾರಥಿಯಾಗಬಲ್ಲರು. 

"

ಅಮೆರಿಕ ಚುನಾವಣೆ ಬಳಿಕ ಹಿಂಸಾಚಾರ ಭೀತಿ: ಶ್ವೇತ ಭವನದಲ್ಲಿ ಹೆಚ್ಚಿದ ಭದ್ರತೆ!

ಇದೇ ವೇಳೆ ಕೊರೋನಾ ಕಾರಣ ಜನರು ಚುನಾವಣೆಗೂ ಮೊದಲೇ ಮತ ಚಲಾವಣೆ ಮಾಡಿದ್ದಾರೆ. ಅಂಚೆ ಮತಗಳು ಸಾಕಷ್ಟು ಚಲಾವಣೆ ಆಗಿವೆ. ಹೀಗಾಗಿ ಈ ಮತಗಳ ಎಣಿಕೆಗೆ ದಿನಗಳೇ ಹಿಡಿಯಬಹುದು. ತಕ್ಷಣಕ್ಕೆ ಫಲಿತಾಂಶ ಲಭಿಸದೇ ಕಾಯಬೇಕಾಗಬಹುದು ಎಂದು ಮಾಧ್ಯಮ ವರದಿಗಳು ಹೇಳಿವೆ.

"

ಎಲ್ಲಿ ಯಾರಿಗೆ ಜಯ?:

ಟ್ರಂಪ್‌ ಅವರು ಅಲಬಾಮಾ, ಕೆಂಟುಕಿ, ಅರ್ಕನ್‌ಸಾಸ್‌, ಲೂಸಿಯಾನಾ, ಮಿಸಿಸಿಪ್ಪಿ, ನೆಬ್ರಾಸ್ಕಾ, ನಾತ್‌ರ್‍ ಡಕೋಟಾ, ಒಕ್ಲಾಹೋಮಾ, ಸೌತ್‌ ಡಕೋಟಾ, ಟೆನೆಸ್ಸಿ, ವೆಸ್ಟ್‌ ವರ್ಜಿನಿಯಾ, ಇಂಡಿಯಾನಾ, ವ್ಯೋಮಿಂಗ್‌, ದಕ್ಷಿಣ ಕರೊಲಿನಾ ರಾಜ್ಯಗಳನ್ನು ಜಯಿಸಿದ್ದಾರೆ.

ಇನ್ನು ಕೊಲೊರಾಡೋ, ಕನೆಕ್ಟಿಕಟ್‌, ಡೆಲಾವೇರ್‌, ಇಲಿನಾಯ್‌್ಸ, ಮಸಾಶುಸೆಟ್ಸ್‌, ನ್ಯೂ ಮೆಕ್ಸಿಕೋ, ವೆನ್ಮಾಂಟ್‌ ಮತ್ತು ವರ್ಜಿನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿಗಳಲ್ಲಿ ಬೈಡನ್‌ ಜಯಗಳಿಸಿದ್ದಾರೆ.

ಜಮ್ಮು ಕಾಶ್ಮೀರ ಪಾಕ್‌ ಭಾಗ, ವಿವಾದಾತ್ಮಕ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್ ಮಗ!

ಇನ್ನು ಹಿಂಸಾಚಾರ ಭೀತಿ ಎದುರಾದ ಹಿನ್ನೆಲೆ ವೈಟ್‌ಹೌಸ್‌ ಆವರಣದಲ್ಲಿ ತೀವ್ರ ಭದ್ರತೆ ಏರ್ಪಡಿಸಲಾಗಿದೆ. ಈ ವರ್ಷ ಸುಮಾರು 23.9 ಕೋಟಿ ಮತತದಾರರಿದ್ದಾರೆ. ಅಮೆರಿಕದಲ್ಲಿ ಬರೋಬ್ಬರಿ 40 ಲಕ್ಷ ಭಾರತೀಯರಿದ್ದು, ಇವರಲ್ಲಿ  25 ಲಕ್ಷ ಮಂದಿ ಮತದಾರರಿದ್ದಾರೆ. ಇವರಲ್ಲಿ 13 ಲಕ್ಷಕ್ಕೂ ಅಧಿಕ ಮಂದಿ ಟೆಕ್ಸಾಸ್, ಮಿಚಿಗನ್, ಫ್ಲೋರಿಡಾ ಹಾಗೂ ಪೆನ್ಸಿಲ್ವೇನಿಯಾದ ಮತದಾರರಾಗಿದ್ದಾರೆ.

Follow Us:
Download App:
  • android
  • ios