ಲಂಡನ್ ಬಹುಪಾಲು ಆಸ್ತಿ ಖರೀದಿಸಿದ ಭಾರತೀಯರು; ಅರ್ಧ ಜಗತ್ತನ್ನಾಳಿದ ಬ್ರಿಟೀಷರೇ ಈಗ ಸ್ವದೇಶದಲ್ಲಿ ಅಲ್ಪಸಂಖ್ಯಾತರು!

200 ವರ್ಷಗಳ ಕಾಲ ಭಾರತವನ್ನಾಳಿದ ಇಂಗ್ಲೀಷರ ರಾಜಧಾನಿ ಲಂಡನ್‌ನಲ್ಲಿ ಭಾರತೀಯರು ಅತಿ ಹೆಚ್ಚು ಆಸ್ತಿ ಹೊಂದಿದವರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮೂಲ ನಿವಾಸಿಗಳಾದ ಇಂಗ್ಲೀಷ್ ಜನರೇ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ನಮ್ಮ ನೆರೆಹೊರೆ ದೇಶದವರಿದ್ದಾರೆ.

Indians Now Own Most Properties in London Surpassing Englishmen sat

ಒಂದು ಕಾಲದಲ್ಲಿ ಜಗತ್ತಿನ ಅರ್ಧ ಭೂ ಭಾಗದ ಮೇಲೆ ಹಿಡಿತ ಹೊಂದಿದ್ದ ಹಾಗೂ 200 ವರ್ಷಗಳ ಕಾಲ ಭಾರತವನ್ನಾಳಿದ ಇಂಗ್ಲೀಷರ ರಾಜಧಾನಿ ಲಂಡನ್‌ನಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿದವರ ಪೈಕಿ ಭಾರತೀಯರು ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮೂಲ ನಿವಾಸಿಗಳಾದ ಇಂಗ್ಲೀಷ್ ಜನರೇ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ನಮ್ಮ ನೆರೆಹೊರೆ ದೇಶದವರಿದ್ದಾರೆ.

ಒಂದು ಕಾಲದಲ್ಲಿ ಹೊಸ ಆಯುಧಗಳು ಮತ್ತು ಯುದ್ಧ ತಂತ್ರಗಳ ಮೂಲಕ ಜಗತ್ತಿನ ಎಲ್ಲಾ ಖಂಡಗಳ ಬಹುಪಾಲು ದೇಶಗಳನ್ನು ವಶಪಡಿಸಿಕೊಂಡು ಶತಮಾನಗಳ ಕಾಲ ಆ ಪ್ರದೇಶಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡವರು ಇಂಗ್ಲೆಂಡಿನವರು. ಹೀಗಾಗಿ, ಇಂಗ್ಲೆಂಡ್ ಅನ್ನು 'ಸೂರ್ಯ ಮುಳುಗದ ಸಾಮ್ರಾಜ್ಯ' ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಆದರೆ, ಇಂದು ಬ್ರಿಟಿಷರು ಆರ್ಥಿಕವಾಗಿಯೂ ರಾಜಕೀಯವಾಗಿಯೂ ಅಷ್ಟೊಂದು ಪ್ರಬಲರಲ್ಲ. ಅಮೆರಿಕ, ಚೀನಾ ಮತ್ತು ಭಾರತದ ನಂತರ ವಿಶ್ವದಲ್ಲಿ ಆರ್ಥಿಕ ಶಕ್ತಿಯಲ್ಲಿ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ. ಜೊತೆಗೆ ಇಂಗ್ಲೆಂಡ್‌ನ ಬಹುಪಾಲು ಆಸ್ತಿ ಇಂದು ಸ್ಥಳೀಯ ಇಂಗ್ಲಿಷ್ ಜನರಿಗಿಂತ ಹೆಚ್ಚಾಗಿ ಇಂಡಿಯನ್ನರ ಕೈಯಲ್ಲಿದೆ ಎಂದು ಕೆಲವು ಅಂಕಿಅಂಶಗಳು ಬಹಿರಂಗಪಡಿಸುತ್ತಿವೆ.

ಲಂಡನ್‌ನಲ್ಲಿ ಆಸ್ತಿ ಹೊಂದಿರುವವರಲ್ಲಿ ಇಂದು ಮೊದಲ ಸ್ಥಾನದಲ್ಲಿ ಭಾರತೀಯರಿದ್ದಾರೆ ಎಂದು ಲಂಡನ್ ಮೂಲದ ಪ್ರಾಪರ್ಟಿ ಡೆವಲಪರ್ ಬ್ಯಾರೆಟ್ ಲಂಡನ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರತೀಯರು ಮತ್ತು ವಿದೇಶಿಯರು ಸೇರಿದಂತೆ ಹಲವರ ಆಸಕ್ತಿದಾಯಕ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಹಲವು ತಲೆಮಾರುಗಳಿಂದ ಯುನೈಟೆಡ್ ಕಿಂಗ್‌ಡಮ್‌ (ಯುಕೆ)ಯಲ್ಲಿ ವಾಸಿಸುವ ಭಾರತೀಯ ಮೂಲದವರು, ಪ್ರವಾಸಿ ಭಾರತೀಯರು, ವಿದೇಶಿ ಹೂಡಿಕೆದಾರರು, ವಿದ್ಯಾರ್ಥಿಗಳು ಹಾಗೂ ಹಲವು ವರ್ಷಗಳಿಂದ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ವಲಸೆ ಬಂದ ಭಾರತೀಯ ಕುಟುಂಬಗಳು ಹೀಗೆ ಹಲವರು ಲಂಡನ್‌ನಲ್ಲಿ ಸ್ವಾಧೀನಪಡಿಸಿಕೊಂಡ ಆಸ್ತಿಗಳು ಇಂದು ಸ್ಥಳೀಯರ ಕೈಯಲ್ಲಿರುವುದಕ್ಕಿಂತ ಹೆಚ್ಚಾಗಿದೆ ಎಂದು ಬ್ಯಾರೆಟ್ ಲಂಡನ್ ಸಂಸ್ಥೆ ಕಳೆದ ತಿಂಗಳು ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿದಿಬಂದಿದೆ.

ಇದನ್ನೂ ಓದಿ: ವಿಮಾನ ಪ್ರಯಾಣಿಕನ ಮೊಬೈಲ‌ನಲ್ಲಿ ಸೆರೆಯಾಯ್ತಾ ಏಲಿಯನ್? ಮೋಡದ ಮೇಲಿತ್ತು ಜೀವಿ!

ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯರು ಇಂದು ಲಂಡನ್ ನಗರದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವವರು ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ಇಂಗ್ಲಿಷ್ (ಸ್ಥಳೀಯ ಇಂಗ್ಲೆಂಡ್ ಮೂಲ ನಿವಾಸಿಗಳು) ಜನರಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ನಮ್ಮ ನೆರೆ ಹೊರೆಯ ಹಾಗೂ ಬದ್ಧ ವೈರಿ ದೇಶವಾದ ಪಾಕಿಸ್ತಾನಿಗಳಿದ್ದಾರೆ. ಲಂಡನ್‌ನಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳನ್ನು ಖರೀದಿಸಲು ಭಾರತೀಯರು ರೂ. 3 ಕೋಟಿಯಿಂದ ರೂ.4.5 ಕೋಟಿವರೆಗೆ ಹೂಡಿಕೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ. ಈ ಅಂಕಿಅಂಶಗಳನ್ನು ಬ್ಯಾರೆಟ್ ಲಂಡನ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಆದರೆ, ಈ ವಿಚಾರದ ಬಗ್ಗೆ ಕೆಲವರು ತಮಾಷೆ ಮತ್ತು ಗಂಭೀರವಾಗಿ ಚರ್ಚೆ ಮಾಡುತ್ತಾ ತಮ್ಮ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅರ್ಧ ಲೋಕದ ಆಸ್ತಿ ಅವರದ್ದಾಗಿತ್ತು. ಆದರೆ, ಈಗ ಲಂಡನ್‌ನ ಅರ್ಧಕ್ಕಿಂತ ಕಡಿಮೆ ಮಾತ್ರ ಅವರ ಸ್ವಂತದ್ದಾಗಿದೆ ಎಂದು ಒಬ್ಬರು ಬರೆದಿದ್ದಾರೆ. ಈ ಪೋಸ್ಟ್‌ಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 'ಕರ್ಮಫಲ, ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನು ಅಕ್ರಮವಾಗಿ ತಮ್ಮದಾಗಿಸಿಕೊಂಡರು. ಈಗ ಭಾರತೀಯರು ಬ್ರಿಟನ್ ಅನ್ನು ಕಾನೂನುಬದ್ಧವಾಗಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಅದೂ ಸ್ಪರ್ಧಾತ್ಮಕ ವಾತಾವರಣದಲ್ಲಿ' ಎಂದು ಮತ್ತೊಬ್ಬ ಭಾರತೀಯರು ಬರೆದಿದ್ದಾರೆ. ಬ್ರಿಟನ್‌ನ ಹಳೆಯ ವಸಾಹತುಶಾಹಿ ಆಡಳಿತದ ವಿರುದ್ಧ ಮತ್ತು ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತದ ಬಗ್ಗೆ ಹಲವರು ಬರೆದಿದ್ದಾರೆ.

ಇದನ್ನೂ ಓದಿ: ನಾಯಿಗಳಿಗೆ ಆಹಾರ ಹಾಕುವ ತಟ್ಟೆಯಲ್ಲಿ ಮಕ್ಕಳಿಗೆ ಊಟ ಕೊಟ್ಟ ಶಾಲಾ ಸಿಬ್ಬಂದಿ!

Latest Videos
Follow Us:
Download App:
  • android
  • ios