ವಿಮಾನ ಪ್ರಯಾಣಿಕನ ಮೊಬೈಲನಲ್ಲಿ ಸೆರೆಯಾಯ್ತಾ ಏಲಿಯನ್? ಮೋಡದ ಮೇಲಿತ್ತು ಜೀವಿ!
ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರು ಮೋಡ, ಕೆಳಗಿನ ಪರ್ವತ, ಬೆಟ್ಟ, ಸಮುದ್ರಗಳ ವಿಡಿಯೋ ಚಿತ್ರ ಸೆರೆಯುವುದು ಸಾಮಾನ್ಯ. ಹೀಗೆ ಮೋಡದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವಾಗ ವಿಚಿತ್ರ ಜೀವಿಗಳ ದೃಶ್ಯ ಸೆರೆಯಾಗಿದೆ. ಮೋಡ ಮೇಲಿದ್ದ ಈ ಜೀವಿಗಳು ಅನ್ಯಗ್ರಹ ಜೀವಿಗಳೇ? ಈ ವಿಡಿಯೋದಲ್ಲಿ ಏನಿದೆ?
ಅನ್ಯಗ್ರಹ ಜೀವಿಗಳ ಕುರಿತು ಅದೆಷ್ಟೇ ಅಧ್ಯಯನ ನಡೆಸಿದರೂ ಕುತೂಹಲ ಮಾಸಿಲ್ಲ. ನಿಜಕ್ಕೂ ಅನ್ಯಗ್ರಹ ಜೀವಿಗಳು ಇದೆಯಾ? ಕೆಲ ಅಧ್ಯಯನ ಪ್ರಕಾರ ಈಗಾಗಲೇ ಅನ್ಯಗ್ರಹ ಜೀವಿ ಭೂಮಿ ಮೇಲಿದೆ. ಮನುಷ್ಯನ ಆಕಾರದಲ್ಲಿ ಯಾರಿಗೂ ತಿಳಿಯದಂತೆ ವಾಸಿಸುತ್ತಿದೆ ಅನ್ನೋ ವಾದವೂ ಇದೆ. ಏಲಿಯನ್ ಕುರಿತು ಹಲವು ಕತೆಗಳು, ಕುತೂಹಲಗಳಿಗೆ ಕೆಲ ವಿಡಿಯೋಗಳು ಪುಷ್ಠಿ ನೀಡಿದೆ. ಇದೀಗ ವಿಮಾನ ಪ್ರಯಾಣಿಕನೊಬ್ಬ ಮೋಡಗಳ ದೃಶ್ಯ ಸೆರೆ ಹಿಡಿಯುವಾಗ ಅಚ್ಚರಿ ನಡೆದಿದೆ. ಮೋಡಗಳ ಮೇಲೆ ಮನುಷ್ಯನ ರೀತಿಯಲ್ಲಿ ಹಲವು ಜೀವಿಗಳಿರುವುದು ಪತ್ತೆಯಾಗಿದೆ. ಈ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ದಿ ಪ್ಯಾರಾನಾರ್ಮಲ್ ಚಿಕ್ ಅನ್ನೋ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಯಾವ ಪ್ರಯಾಣಿಕ, ವಿಮಾನದಲ್ಲಿ ಸೆರೆ ಹಿಡಿದ ದೃಶ್ಯ ಅನ್ನೋದರ ಕುರಿತು ಸ್ಪಷ್ಟತೆ ಇಲ್ಲ. ಆದರೆ ಈ ವಿಡಿಯೋ ನೋಡಿದರೆ ನಿಮಗೂ ಅಚ್ಚರಿಯಾಗುವುದು ಖಚಿತ. ಜೊತೆಗೆ ಏಲಿಯನ್ ಕುರಿತು ಹಲವು ಪ್ರಶ್ನೆಗಳು, ಅನುಮಾನಗಳು ಮತ್ತಷ್ಟು ಹೆಚ್ಚಾಗುವು ಸಾಧ್ಯತೆಗಳಿವೆ. ವಿಮಾನದ ವಿಂಡೋ ಸೀಟಿನಲ್ಲಿ ಕಳಿತ ಪ್ರಯಾಣಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ.
40 ವರ್ಷದ ಹಿಂದೆ ಏಲಿಯನ್ ಭೂಮಿಗೆ ಕಳುಹಿಸಿದ ಸಂದೇಶವೇನು? ಡಿಕೋಡ್ ಮಾಡಿದ ಸೈಂಟಿಸ್ಟ್!
ವಾಣಿಜ್ಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ತನ್ನ ಮೊಬೈಲ್ ಕ್ಯಾಮೆರಾ ಮೂೂಲಕ ಮೋಡಗಳ ಸುಂದರ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ. ಈ ವೇಳೆ ಪ್ರಯಾಣಿಕನಿಗೆ ದೂರದಲ್ಲಿ ಕೆಲ ಜೀವಿಗಳು ಅದು ಕೂಡ ಮನುಷ್ಯರಂತೆ ಹೋಲುವ ಜೀವಿಗಳು ಮೋಡ ಮೇಲೆ ಇರುವುದು ಗಮನಿಸಿದ್ದಾನೆ. ಮೊಬೈಲ್ ಕ್ಯಾಮೆರಾದಲ್ಲಿ ಕೊಂಚ ಝೂಮ್ ಮಾಡಿ ಈ ಜೀವಿಗಳ ದೃಶ್ಯಗಳನ್ನು ವಿಮಾನದಿಂದ ಸೆರೆ ಹಿಡಿದ್ದಾನೆ. ಮೋಡದ ಮೇಲೆ ಇಬ್ಬರು ಮನುಷ್ಯ ಜೀವಿಗಳು ನಿಂತಿರುವಂತೆ ಭಾಸವಾಗಿದೆ. ಮೊಬೈಲ್ ಬೇರೆಡೆಗೆ ತಿರುಗಿಸಿದಾಗ ಇದ ರೀತಿ ಹೆಲೆವೆಡೆ ಪತ್ತೆಯಾಗಿದೆ.
ಇಬ್ಬರು, ಗುಂಪಾಗಿ ಮನುಷ್ಯನನ್ನೋ ಹೋಲುವ ಜೀವಿಗಳು ನಿಂತಿರುವಂತೆ ಭಾಸವಾಗುತ್ತಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಹಲವರು ಪ್ರಶ್ನಿಸಿದ್ದಾರೆ. ಇದು ಏಲಿಯನ್ ಎಂದು ಹಲವರು ಉತ್ತರಿಸಿದ್ದಾರೆ. ಮೋಡದ ಮೇಲೆ ನಿಂತಿರುವುದು ಯಾರು? ಮೋಡದ ಮೇಲೆ ನಡೆದಾಡಲು ಏಲಿಯನ್‌ಗೆ ಬಿಟ್ಟರೆ ಇನ್ಯಾರಿಗೂ ಸಾಧ್ಯವಿಲ್ಲ. ಅನ್ಯ ಗ್ರಹದ ಜೀವಿ ಇದೀಗ ಬಾಹ್ಯಾಕಾಶದಲ್ಲಿ ವಿಹರಿಸುತ್ತಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಏಲಿಯನ್ ಇವೆ ಅನ್ನೋದಕ್ಕೆ ಇದು ಸಾಕ್ಷಿ ಎಂದು ಮತ್ತೆ ಕೆಲವರು ಉತ್ತರಿಸಿದ್ದಾರೆ. ಆದರೆ ಮತ್ತೆ ಒಂದಷ್ಟು ಮಂದಿ ಇದು ನಕಲಿ ವಿಡಿಯೋ ಎಂದಿದ್ದಾರೆ. ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಈಗನ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಿಂದ ಏನೂ ಬೇಕಾದರು ಮಾಡಲು ಸಾಧ್ಯವಿದೆ. ಈ ವಿಡಿಯೋ ನಕಲಿ. ಮೋಡದ ಮೇಲೆ ಏಲಿಯನ್ ಜೀವಿಗಳು ಇರಲು ಸಾಧ್ಯವಿಲ್ಲ. ಇದು ಅನುಮಾನ, ಗೊಂದಲ ಮತ್ತಷ್ಟು ಹೆಚ್ಚಿಸುವ ಹಾಗೂ ವಿಡಿಯೋ ವೈರಲ್ ಮಾಡುವ ಪ್ರಯತ್ನ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ!
ಆದರೆ ಈ ವಿಡಿಯೋ ಇದೀಗ ಮತ್ತೆ ಏಲಿಯನ್ ಚರ್ಚೆಯನ್ನು ಹುಟ್ಟುಹಾಕಿದೆ. ನಿಜಕ್ಕೂ ಏಲಿಯನ್ ಇದೆಯಾ ಅನ್ನೋ ಕುತೂಹಲ ಹೆಚ್ಚಿಸಿದೆ. ವೈಜ್ಞಾನಿಕ ಸಂಶೋಧನೆಗಳು, ಅಧ್ಯಯನಗಳು ಒಂದೊಂದು ಫಲಿತಾಂಶ ನೀಡಿದೆ. ಹಲವು ಅಧ್ಯಯನಗಳು ಏಲಿಯನ್ ಇಲ್ಲಎಂದಿದ್ದರೆ, ಮತ್ತೆ ಕೆಲ ಅಧ್ಯಯನ ಹಾಗೂ ಸಂಶೋಧನೆ ಏಲಿಯನ್ ಇರುವಿಕೆಯನ್ನು ಅಲ್ಲಗೆಳೆದಿಲ್ಲ. ಈ ಕುರಿತು ಹಲವು ವಿಡಿಯೋಗಳು, ಘಟನೆಗಳು ಲಭ್ಯವಿದೆ. ಈ ಸಾಲಿಗೆ ಇದೀಗ ಮತ್ತೊಂದು ಸೇರಿಕೊಂಡಿದೆ. ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಅಥವಾ ಎಡಿಟ್ ಮಾಡಲಾಗಿದೆಯಾ ಅನ್ನೋದು ಸ್ಪಷ್ಟವಾಗಿಲ್ಲ.