Asianet Suvarna News Asianet Suvarna News

ಅಮೆರಿಕಾ ವೀಸಾಗೆ ಭಾರತೀಯರು ಇನ್ನು ಹೆಚ್ಚು ಕಾಯಬೇಕಿಲ್ಲ

ಅಮೆರಿಕ ವೀಸಾ ವಿತರಣೆಗೆ ಇರುವ ಕಾಯುವಿಕೆ ಅವಧಿಯು 2023ರ ಬೇಸಿಗೆ ವೇಳೆಗೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ. ಮುಂದಿನ ವರ್ಷದ ಬೇಸಿಗೆಯೊಳಗೆ 12 ಲಕ್ಷ ವೀಸಾ ವಿತರಣೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Indians no longer have to wait for US visa akb
Author
First Published Nov 11, 2022, 8:47 AM IST

ನವದೆಹಲಿ: ಅಮೆರಿಕ ವೀಸಾ ವಿತರಣೆಗೆ ಇರುವ ಕಾಯುವಿಕೆ ಅವಧಿಯು 2023ರ ಬೇಸಿಗೆ ವೇಳೆಗೆ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ. ಮುಂದಿನ ವರ್ಷದ ಬೇಸಿಗೆಯೊಳಗೆ 12 ಲಕ್ಷ ವೀಸಾ ವಿತರಣೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಕಿ ಉರುವ ಅರ್ಜಿಗಳನ್ನು ಗಣನೆಗೆ ತೆಗೆದುಕೊಂಡಾಗ ವೀಸಾ ವಿತರಣೆಯಲ್ಲಿ ಅಮೆರಿಕಕ್ಕೆ ಭಾರತ ನಂ.1 ಆದ್ಯತೆಯ ದೇಶವಾಗಿರಲಿದೆ. ವೀಸಾ ವಿತರಣೆಯನ್ನು ಕೋವಿಡ್‌ ಪೂರ್ವ ಸ್ಥಿತಿಗೆ ತರುವ ನಮ್ಮ ಗುರಿ ಮುಂದಿನ ವರ್ಷದ ಬೇಸಿಗೆ ವೇಳೆಗೆ ಈಡೇರುವ ನಿರೀಕ್ಷೆ ಇದೆ. ವೀಸಾ ವಿತರಣೆಗೆ ಕಾಯುವಿಕೆ ಅವಧಿ (waiting period) ಸುದೀರ್ಘವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ (US government) ಹೆಚ್ಚುವರಿ ಸಿಬ್ಬಂದಿ ನೇಮಕ, ಡ್ರಾಪ್‌ಬಾಕ್ಸ್‌ಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರತಿ ತಿಂಗಳೂ 1 ಲಕ್ಷ ವೀಸಾ ವಿತರಿಸುವ ಗುರಿ ಇದೆ ಎಂದು ತಿಳಿಸಿದ್ದಾರೆ.

ಭಾರತ ಆದ್ಯತೆಯ ದೇಶವಾಗಿರುವ ಕಾರಣ ನಾವು ಈಗಾಗಲೇ ಎಚ್‌ ಮತ್ತು ಎಲ್‌ ಕೆಟಗರಿ ವೀಸಾಗಳನ್ನು (H and L category) ಗುರುತಿಸಿದ್ದೇವೆ. ಈ ಕಾರಣಕ್ಕಾಗಿಯೇ ವೀಸಾ ನವೀಕರಣಕ್ಕಾಗಿ ಕಾದವರಿಗೆಂದೇ 1 ಲಕ್ಷ ಸ್ಲಾಟ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಕೆಲವೊಂದು ವಿಭಾಗಳಲ್ಲಿ ವೀಸಾ ನೀಡಿಕೆ ಅವಧಿಯನ್ನು ಈ ಹಿಂದಿನ 450 ದಿನಗಳಿಂದ 9 ತಿಂಗಳಿಗೆ ಇಳಿಸಲಾಗಿದೆ. ಬಿ1 ಮತ್ತು ಬಿ2 (ಉದ್ಯಮ ಮತ್ತು ಪ್ರವಾಸ) ವೀಸಾ ನೀಡಿಕೆಗೆ ಇದ್ದ ಕಾಯುವಿಕೆ ಅವಧಿ 9 ತಿಂಗಳಿಗೆ ಇಳಿದಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ವೀಸಾ ಪಡೆಯುವಲ್ಲಿ ಹಾಲಿ ಮೆಕ್ಸಿಕೋ (Mexico), ಚೀನಾ ಬಳಿಕ ಮೂರನೇ ಸ್ಥಾನದಲ್ಲಿರುವ ಭಾರತ ಮೊದಲ ಸ್ಥಾನಕ್ಕೆ ಏರಲಿದೆ. ವಿಶೇಷವಾಗಿ ನಾವು ವಿದ್ಯಾರ್ಥಿ ವೀಸಾ ವಿತರಣೆಯಲ್ಲಿನ ಕಾಯುವಿಕೆ ಅವಧಿ ಕಡಿತಕ್ಕೆ ಆಧ್ಯತೆ ನೀಡಿದ್ದೇವೆ. ಅದರಲ್ಲೂ ವೀಸಾ ನವೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಸುದೀಪ್; ಇದರ ಲಾಭವೇನು?

ಕಳೆದ ವರ್ಷ ಭಾರತೀಯರಿಗೆ 82000 ವೀಸಾ ನೀಡಲಾಗಿತ್ತು. ಮುಂದಿನ ಬೇಸಿಗೆ ವೇಳೆ ಅದನ್ನು 11 ರಿಂದ 12 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ಹೇಳಿದ್ದಾರೆ.

ವರ್ಕ್ ಫ್ರಮ್ ಹೋಮ್ ಮಾಡ್ತಿರುವವರಿಗೆ ಗುಡ್‌ನ್ಯೂಸ್‌ : ಸ್ಪೆಷಲ್ ವೀಸಾ ನೀಡಲಿದೆ ಇಂಡೋನೇಷ್ಯಾ

Follow Us:
Download App:
  • android
  • ios