ಅಮೆರಿಕದ ಅಂಗಡಿಯೊಂದರಲ್ಲಿ ಭಾರತ ಮೂಲದ ಮಹಿಳೆಯೊಬ್ಬಳು ಪುರುಷರ ಬಟ್ಟೆಗಳನ್ನು ಕದ್ದು ಸಿಕ್ಕಿಬಿದ್ದಿದ್ದಾಳೆ. ತನ್ನ ಸಹೋದರನ ಆಸೆ ಈಡೇರಿಸಲು ಈ ಕೃತ್ಯ ಎಸಗಿರುವುದಾಗಿ ಆಕೆ ಹೇಳಿಕೊಂಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿರುವ ವಿಡಿಯೋ ವೈರಲ್ ಆಗಿದೆ.
ಕಳೆದ ವಾರವಷ್ಟೇ ಭಾರತದ ಮಹಿಳೆಯೊಬ್ಬಳು ಅಮೆರಿಕದಲ್ಲಿನ ವಿವಿಧ ಅಂಗಡಿಗಳಿಂದ ಸುಮಾರು ಸುಮಾರು 1.1 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದು ಸಿಕ್ಕಿಹಾಕಿಕೊಂಡಿರೋ ಬೆನ್ನಲ್ಲೇ ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ. ಭಾರತ ಮೂಲದ ಮಹಿಳೆಯೊಬ್ಬಳು 5 ಜೊತೆ ಪುರುಷರ ಒಳ ಉಡುಪುಗಳು, 3 ಜೊತೆ ಶಾರ್ಟ್ಸ್ ಮತ್ತು 4 ಟಿ-ಶರ್ಟ್‌ಗಳನ್ನು ಕದ್ದು ಸಿಕ್ಕಿಬಿದ್ದಿದ್ದಾಳೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ತನ್ನನ್ನು ಬಿಟ್ಟುಬಿಡಿ, ನಾನು ಬಿಲ್ ಪಾವತಿ ಮಾಡುವುದನ್ನು ಮರೆತೆ. ಈಗ ದುಡ್ಡು ಕೊಡುತ್ತೇನೆ. ಬಿಟ್ಟುಬಿಡಿ ಎಂದು ಮಹಿಳೆ ಅಂಗಲಾಚುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಆಕೆಯನ್ನು ಅರೆಸ್ಟ್ ಮಾಡಲಾಗಿದೆ.
ವಿರೋಧಿಸ್ತಿರೋ ಭಾರತೀಯರು
ಇದರ ವಿಡಿಯೋ ವೈರಲ್ ಆಗುತ್ತಲೇ ಭಾರಿ ವಿರೋಧ ವ್ಯಕ್ತವಾಗಿದೆ. ಭಾರತದ ಮಾನವನ್ನು ಕೆಲವು ರಾಜಕಾರಣಿಗಳು ಹೋಗಿ ಹರಾಜು ಮಾಡುವುದು ಸಾಲಲ್ಲ ಎಂದು ಈ ರೀತಿಯಾಗಿ ವಸ್ತುಗಳನ್ನು ಕದ್ದು ಭಾರತಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಬೈಯುತ್ತಿದ್ದಾರೆ. ಆದರೆ ಕೆಲವರು ಮಾತ್ರ ಈ ಮಹಿಳೆ ತಾನು ಪುರುಷರ ಒಳ ಉಡುಪುಗಳನ್ನು ಕದ್ದಿರುವ ಕಾರಣ ಹೇಳಿದಾಗ ಅಯ್ಯೋ ಪಾಪ ಎನ್ನುತ್ತಿದ್ದಾರೆ.
ಒಳ ಉಡುಪು ಕದದ್ದು ಏಕೆ?
ಅಷ್ಟಕ್ಕೂ ಈ ಮಹಿಳೆ, ತನ್ನ ಸಹೋದರನಿಗಾಗಿ ಈ ಒಳ ಉಡುಪುಗಳನ್ನು ಕದ್ದದ್ದಂತೆ. ತನ್ನ ಅಕ್ಕ ಅಮೆರಿಕದಲ್ಲಿ ಇರುವ ಕಾರಣ, ಮೇಡ್ ಇನ್ ಅಮೆರಿಕದ ಬಟ್ಟೆ ಹಾಕಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದನಂತೆ. ಆದರೆ ಅಷ್ಟು ದುಬಾರಿ ಬೆಲೆ ಬಾಳುವ ಬಟ್ಟೆ ಕೊಳ್ಳಲು ಈಕೆಯ ಬಳಿ ಹಣ ಇಲ್ಲದೇ ಇರುವ ಕಾರಣ, ತಮ್ಮನ ಆಸೆ ಈಡೇರಿಸಲು ಬಟ್ಟೆ ಕದ್ದಿರುವುದಾಗಿ ವರದಿಯಾಗಿದೆ. ಇದೇ ಕಾರಣಕ್ಕೆ ಆಕೆ, 5 ಜೊತೆ ಪುರುಷರ ಒಳ ಉಡುಪುಗಳು, 3 ಜೊತೆ ಶಾರ್ಟ್ಸ್ ಮತ್ತು 4 ಟಿ-ಶರ್ಟ್‌ಗಳನ್ನು ಕದ್ದಿದ್ದಾಳೆ ಎಂದು ವರದಿಯಾಗಿದೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ಹಣ ನೀಡದೆ ಬಟ್ಟೆಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಪೊಲೀಸರು ಪ್ರಶ್ನಿಸಿದಾಗ, ಅಧಿಕಾರಿಗಳಿಗೆ ಅಳುತ್ತಾ ಕ್ಷಮೆಯಾಚಿಸುತ್ತಿರುವುದು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಪೊಲೀಸ್ ಠಾಣೆಗೆ ಕರೆದೊಯ್ದರು
ಈ ವಿಡಿಯೋದಲ್ಲಿ ಪೊಲೀಸರ ಬಳಿ ಮಹಿಳೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾಳೆ. ನನ್ನ ಪತಿಗೆ ಕರೆ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾಳೆ. ಆದರೆ ಪೊಲೀಸರು ಅದನ್ನು ಕೇಳದೇ ಆಕೆಗೆ ಕೈಕೋಳ ಹಾಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಎಂದು ಆಕೆ ಪ್ರಶ್ನಿಸಿದಾಗ, ಪೊಲೀಸ್ ಸಿಬ್ಬಂದಿಯೊಬ್ಬರು ಪೊಲೀಸ್ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಲಾಗುವುದು ಎಂದರು. ಇಡೀ ಪ್ರಕ್ರಿಯೆಯು ಒಂದೆರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಅವಳಿಗೆ ಹೇಳಿದರು. ಸದ್ಯ ಆಕೆಯ ಸಹೋದರ ಗುಜರಾತ್ನಲ್ಲಿ ಇರುವುದು ಎಂದು ವರದಿಯಾಗುತ್ತಿದ್ದರೂ, ಮಹಿಳೆಯ ಗುರುತು, ಅಂಗಡಿಯ ನಿಖರವಾದ ಸ್ಥಳ ಮತ್ತು ಕದ್ದ ವಸ್ತುಗಳ ಮೌಲ್ಯ ಮುಂತಾದ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ತನಿಖೆ ಮುಂದುವರೆದಿದೆ.
ಪಾಪ್ಕೀಡಾದಲ್ಲಿ ಶೇರ್ ಮಾಡಲಾದ ಮಹಿಳೆಯ ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ:ಹಿಂದಿವಾಲನಿಗೆ Niveditha Gowda ಕನ್ನಡ ಪಾಠ! 'ಹೇಳು' ಎನ್ನೋದನ್ನ ಸರಿಯಾಗಿ ಹೇಳಮ್ಮಾ ಎಂದ ಫ್ಯಾನ್ಸ್
