MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ನನ್ನಷ್ಟು ಖ್ಯಾತಿ ಯಾರಿಗೂ ಸಿಗಲ್ಲ, ನಾನೇ ಕೊನೆಯ ಸೂಪರ್​ ಸ್ಟಾರ್​ ಎಂದ Shah Rukh Khan- ಭಾರಿ ಚರ್ಚೆ

ನನ್ನಷ್ಟು ಖ್ಯಾತಿ ಯಾರಿಗೂ ಸಿಗಲ್ಲ, ನಾನೇ ಕೊನೆಯ ಸೂಪರ್​ ಸ್ಟಾರ್​ ಎಂದ Shah Rukh Khan- ಭಾರಿ ಚರ್ಚೆ

ನಟ ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು, ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಅನುಪಮ್ ಖೇರ್ ಅವರ ಶೋನಲ್ಲಿ 'ನಾನೇ ಕೊನೆಯ ಸ್ಟಾರ್' ಎಂದು ಹೇಳಿಕೊಂಡಿದ್ದು, ಈ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಟ ಕಾರ್ತಿಕ್ ಆರ್ಯನ್ ಕೂಡ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

2 Min read
Suchethana D
Published : Nov 02 2025, 06:38 PM IST
Share this Photo Gallery
  • FB
  • TW
  • Linkdin
  • Whatsapp
16
ಶಾರುಖ್​ಗೆ ಹುಟ್ಟುಹಬ್ಬದ ಸಂಭ್ರಮ
Image Credit : Social Media

ಶಾರುಖ್​ಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಅರ್ಥಾತ್​ ನವೆಂಬರ್​ 2 ನಟ ಶಾರುಖ್​ ಖಾನ್​ ಅವರಿಗೆ 60ನೇ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲಿ ಶಾರುಖ್​ ಖಾನ್​ ಅವರು ನನ್ನನ್ನು ಖ್ಯಾತಿ ಬೇರೆಯವರಿಗೆ ಸಿಗುವುದಿಲ್ಲ. ನಾನೇ ಕೊನೆಯ ಸ್ಟಾರ್​ ಎಂದಿದ್ದಾರೆ!

26
ಬಿರುದು ಕೊಡೋರು ಯಾರು?
Image Credit : Getty

ಬಿರುದು ಕೊಡೋರು ಯಾರು?

ಅಷ್ಟಕ್ಕೂ, ಸಿನಿ ತಾರೆಯರಿಗೆ ಕೆಲವೊಂದು ಬಿರುದುಗಳನ್ನು ಅವರ ಅಭಿಮಾನಿಗಳೇ ಕೊಡುತ್ತಾರೆ. ಅವು ಆ ನಟ ನಟಿಯರ ಜೊತೆಗೆ ಮಿಳಿತವಾಗಿ ಬಿಡುತ್ತವೆ. ಅದೇ ಹೆಸರಿನಿಂದ ಅವರು ಸದಾ ಕರೆಯಲ್ಪಡುತ್ತಾರೆ. ಆದರೆ ಕೆಲವೊಂದು ಬಿರುದುಗಳು ಒಬ್ಬರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವು ಕಾಲಕ್ಕೆ ತಕ್ಕಂತೆ ಬೇರೆ ಬೇರೆ ನಟ ನಟಿಯರಿಗೂ ಅನ್ವಯ ಆಗುತ್ತಾ ಹೋಗುತ್ತದೆ. ಅಂಥವುಗಳಲ್ಲಿ ಒಂದು ಇಂಥ ಸ್ಟಾರ್​ ಪಟ್ಟ. ಅದರ ಬಗ್ಗೆ ಶಾರುಖ್​ ಮಾತನಾಡಿರುವುದು ಚರ್ಚೆ ಹುಟ್ಟುಹಾಕಿದೆ.

Related Articles

Related image1
ಸ್ಮಾರ್ಟೂ ಇಲ್ಲ, ಟ್ಯಾಲೆಂಟೂ ಇಲ್ಲ ಫೇಮಸ್​ ಆಗಿದ್ಹೇಗೆ? ಶಾರುಖ್​ಗೆ ಎದುರಾಯ್ತು ಪ್ರಶ್ನೆ! ನಟನ ಉತ್ತರ ಕೇಳಿ
Related image2
Shah Rukh Khan Bday: ಖುರ್ಚಿ ಹಾಕಿ 50 ರೂ. ಗಳಿಸುತ್ತಿದ್ದ ನಟ 13 ಸಾವಿರ ಕೋಟಿಯ ಒಡೆಯನಾದದ್ದು ಹೇಗೆ?
36
ಶಾರುಖ್​ ಮಾತು ಚರ್ಚೆಗೆ ಗ್ರಾಸ
Image Credit : instagram

ಶಾರುಖ್​ ಮಾತು ಚರ್ಚೆಗೆ ಗ್ರಾಸ

ನಟ ಶಾರುಖ್​ ಖಾನ್​ ಅವರನ್ನು ಅಭಿಮಾನಿಗಳು ಸೂಪರ್​ಸ್ಟಾರ್​ ಎಂದು ಇತರ ಕೆಲವು ನಟರಿಗೆ ಕರೆದಂತೆ ಕರೆಯುತ್ತಾರೆ. ಆದರೆ ಕೆಲ ದಿನಗಳ ಹಿಂದೆ ಶಾರುಖ್​ ಅವರು ತಾವೇ ಕೊನೆಯ ಸೂಪರ್​ ಸ್ಟಾರ್​ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಡಿಯೋ ವೈರಲ್​ ಆಗುತ್ತಿದೆ.

46
ನಾನೇ ಕೊನೆಯ ಸ್ಟಾರ್​
Image Credit : Twitter

ನಾನೇ ಕೊನೆಯ ಸ್ಟಾರ್​

ಇದು ಬಾಲಿವುಡ್​ ನಟ ಅನುಪಮ್​ ಖೇರ್​ ಅವರ ಷೋನಲ್ಲಿ ಹೇಳಿದ ಮಾತು. ಅನುಪಮ್​ ಖೇರ್​ ಅವರು ಈ ಸ್ಟಾರ್​ ಪಟ್ಟ ಬೇರೆಯವರು ಪಡೆದುಕೊಳ್ಳುತ್ತಾರೆ, ಬೇರೆ ನಾಯಕರ ಹೆಸರು ಚಾಲ್ತಿಯಲ್ಲಿ ಇರುತ್ತದೆ, ಆಗ ಏನು ಮಾಡುವುದು ಎಂಬ ಯೋಚನೆ ಬರುತ್ತದಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್​ ಖಾನ್​, ಒಂದು ವಿಷ್ಯ ಹೇಳಲಾ? ನಾನೇ ಕೊನೆಯ ಸ್ಟಾರ್​. ನನ್ನನ್ನು ಖ್ಯಾತಿ ಬೇರೆಯವರಿಗೆ ಸಿಗುವುದಿಲ್ಲ ಎಂದಿದ್ದಾರೆ (ಇದರ ವಿಡಿಯೋ ಲಿಂಕ್​ ಕೊನೆಯಲ್ಲಿ ಇದೆ)

56
 ಪರ-ವಿರೋಧದ ನಿಲುವು
Image Credit : Twitter

ಪರ-ವಿರೋಧದ ನಿಲುವು

ಶಾರುಖ್​ ಅವರ ಈ ಮಾತಿಗೆ ಇದಾಗಲೇ ಹಲವರು ಪರ-ವಿರೋಧದ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟ ಕಾರ್ತಿಕ್ ಆರ್ಯನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಾರ್ತಿಕ್​ ಅವರಿಗೆ ಶಾರುಖ್​ ಅವರ ಈ ಮಾತಿನ ಬಗ್ಗೆ ಪ್ರಶ್ನಿಸಲಾಗಿತ್ತು.

66
ಟಾಂಗ್​ ಕೊಟ್ಟ ಕಾರ್ತಿಕ್​ ಆರ್ಯನ್​
Image Credit : @Kartik Aaryan

ಟಾಂಗ್​ ಕೊಟ್ಟ ಕಾರ್ತಿಕ್​ ಆರ್ಯನ್​

ಆಗ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದ ಕಾರ್ತಿಕ್​ ಅವರು, 'ನಾನು ಯಾರೊಂದಿಗೂ ಹೋಲಿಕೆ ಮಾಡಲು ಇಷ್ಟಪಡುವುದಿಲ್ಲ. ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ನಾನು ಶಾರುಖ್​ ಅಭಿಮಾನಿ ಎನ್ನುತ್ತಲೇ ಸೂಪರ್‌ಸ್ಟಾರ್‌ಗಳನ್ನು ಸಾರ್ವಜನಿಕರು ಮಾಡುತ್ತಾರೆ. ನಮ್ಮನ್ನು ನಾವೇ ಸೂಪರ್​ಸ್ಟಾರ್​ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಈ ಬಗ್ಗೆ ನಾನು ಏನೂ ಹೇಳುವುದಿಲ್ಲ' ಎಂದಿದ್ದರು.

ಶಾರುಖ್ ಮಾತು ಕೇಳಲು ಇದರ ಮೇಲೆ ಕ್ಲಿಕ್ ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಶಾರುಖ್ ಖಾನ್
ಹುಟ್ಟುಹಬ್ಬ
ಮನರಂಜನಾ ಸುದ್ದಿ
ಬಾಲಿವುಡ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved