ಶ್ರೀಲಂಕಾ ಏರ್‌ಲೈನ್ಸ್ ಶ್ರೀರಾಮಾಯಣ ಜಾಹೀರಾತಿಗೆ ಭಾರತೀಯರ ಭಾರಿ ಮೆಚ್ಚುಗೆ!

ರಾಮಾಯಣವನ್ನು ಸರಳವಾಗಿ ಸುಂದರವಾಗಿ ಹಾಗೂ  ಐತಿಹಾಸಿಕ, ಪೌರಾಣಿಕ ಸ್ಥಳಗಳ ಮೂಲಕ ವಿವರಿಸುವ ಶ್ರೀಲಂಕಾ ಏರ್‌ಲೈನ್ಸ್ ನೀಡಿದ ಜಾಹೀರಾತು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.

Indian praise SriLankan airlines advertisement on Ramayana Trail linked to ancient Hindu epic ckm

ಕೊಲೊಂಬೊ(ನ.11) ಭಾರತ ಹಾಗೂ ಶ್ರೀಲಂಕಾ ನಡುವಿನ ಸಂಬಂಧ ಕುರಿತು ರಾಮಾಯಣ ಕಾಲದಿಂದಲೂ ಉಲ್ಲೇಖವಾಗಿದೆ. ಸೀತೆ ಅಪಹರಣ, ರಾಮ ಸೇತು, ಲಂಕಾ ದಹನ ಸೇರಿದಂತೆ ಹಲವು ಘಟನೆಗಳು ಭಾರತ ಹಾಗೂ ಶ್ರೀಲಂಕಾ ನಡುವಿನ ಪೌರಾಣಿಕ ಮಹತ್ವವನ್ನು ಹೆಚ್ಚಿಸಿದೆ. ಇದೀಗ ರಾಮಾಯಣದಲ್ಲಿ ಉಲ್ಲೇಖಿಸಿರುವ ಶ್ರೀಲಂಕಾದಲ್ಲಿ ಐತಿಹಾಸಿಕ, ಪೌರಣಿಕ ಸ್ಥಳಗಳಿಗೆ ಭೇಟಿ ನೀಡುವ ಶ್ರೀಲಂಕಾ ಏರ್‌ಲೈನ್ಸ್ ಜಾಹೀರಾತು ಇದೀಗ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಶ್ರೀಲಂಕಾ ಏರ್‌ಲೈನ್ಸ್ ನೀಡಿರುವ ಈ ಜಾಹೀರಾತಿನಲ್ಲಿ ಶ್ರೀರಾಮಾಯ ಪ್ರಮುಖ ಘಟ್ಟ, ಶ್ರೀಲಂಕಾದಲ್ಲಿರುವ ಸ್ಥಳಗಳ ಕುರಿತು ಅದ್ಭುತವಾಗಿ ವಿವರಿಸಲಾಗಿದೆ. 

ರಾಮಾಯಣ ಟ್ರೈಲ್ ಹೆಸರಿನ ಈ ಜಾಹೀರಾತು ಮೂಲಕ ಶ್ರೀಲಂಕಾ ಏರ್‌ಲೈನ್ಸ್ ಲಂಕಾ ಪ್ರವಾಸದ ಜಾಹೀರಾತು ನೀಡಿದೆ. ಪ್ರಮುಖವಾಗಿ ಭಾರತೀಯ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಈ ಜಾಹೀರಾತು ನೀಡಲಾಗಿದೆ. ಆದರೆ ಈ ಜಾಹೀರಾತು ಭಾರತೀಯರ ಮನ ಗೆದ್ದಿದೆ. ಈ ಜಾಹೀರಾತನಲ್ಲಿ ಶ್ರೀಲಂಕಾ ಶ್ರೇಷ್ಠ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗಿದೆ.

ಲಂಕೆಯಿಂದ ಆಯೋಧ್ಯೆಗೆ ಶ್ರೀರಾಮ ತೆಗೆದುಕೊಂಡಿದ್ದು 21 ದಿನ, ಹೌದು ಎನ್ನುತ್ತಿದೆ ಗೂಗಲ್ ಮ್ಯಾಪ್!

ಶ್ರೀಲಂಕಾ ಏರ್‌ಲೈನ್ಸ್ ಶ್ರೀರಾಮಾಯಣ ಮಹಕಾವ್ಯವನ್ನು ಅಷ್ಟು ಸುಂದರವಾಗಿ ಚಿತ್ರಿಸಿದ್ದಾರೆ. ರಾಮಾಯಣದಲ್ಲಿ ಉಲ್ಲೇಖಿಸಿರುವ ಪೌರಾಣಿಕ ಸ್ಥಳಗಳನ್ನು, ಅದಕ್ಕೆ ಸಂಬಂಧಿಸಿದ ಕತೆಯನ್ನು ಅಜ್ಜಿ ಮೊಮ್ಮಗನಿಗೆ ಹೇಳುವ ಈ ಜಾಹೀರಾತು ಮತ್ತಷ್ಟು ಆಪ್ತವಾಗಿದೆ.  5 ನಿಮಿಷದ ವಿಡಿಯೋದಲ್ಲಿ ಇಡೀ ರಾಮಯಾಣ ಕತೆಯನ್ನು ಹೇಳಲಾಗಿದೆ. ಜೊತೆಗೆ ಸೀತಾ ದೇವಿ ಮಂದಿರ, ಹನುಮಾನ ಮಂದಿರ, ರಾವಣನ ಅರಮನೆ, ಲಂಕಾ ದಹನ, ಸಂಜೀವಿನ ಬೆಟ್ಟವನ್ನು ಇರಿಸಿದ ಸ್ಥಳ ಸೇರಿದಂತೆ ಎಲ್ಲಾ ಘಟನೆಗಳ ಪೌರಾಣಿಕ ಸ್ಥಳಗಳನ್ನು ಈ ಜಾಹೀರಾತಿನಲ್ಲಿ ತೋರಿಸಲಾಗಿದೆ. 

 

 

ಅಜ್ಜಿ ಪುಸ್ತಕ ಹಿಡಿದು ಮೊಮ್ಮನಿಗೆ ರಾಮಾಯಣ ಕತೆ ವವರಿಸುತ್ತಾ ಹೋಗುತ್ತಿದ್ದಾರೆ. ರಾವಣ ಆಯೋಧ್ಯೆಗೆ ತೆರಳಿ ಸೀತೆಯನ್ನು ಅಪಹರಿಸಿ ಲಂಕೆಗೆ ತಂದು ಸೀತಾವನದಲ್ಲಿದ್ದ ಘಟನೆಯಿಂದ ಹಿಡಿದು, ಹನುಮಾನ್ ಸೀತೆಯನ್ನು ಪತ್ತೆ ಹಚ್ಚಿ ಬಂದ ಘಟನೆ,  ಆಯೋಧ್ಯೆಯಿಂದ ಶ್ರೀರಾಮ ಧನುಷ್ಕೋಡಿಗೆ ಆಗಮಿಸಿ ರಾಮಸೇತು ನಿರ್ಮಿಸಿ ಲಂಕೆಗೆ ಪ್ರವಾಸ ಮಾಡಿದ ಘಟನೆ, ರಾವಣನ ಜೊತೆಗೆ ಯುದ್ಧ, ಸೀತಾ ಮಾತೆಯನ್ನು ಮತ್ತೆ ಆಯೋಧ್ಯೆಗೆ ಕರೆದುಕೊಂಡು ಹೋದ ಎಲ್ಲಾ ಘಟನೆಯನ್ನು ಅಜ್ಜಿ ಮೊಮ್ಮನಿಗೆ ವಿವರಿಸಿದ್ದಾರೆ. ಇದರ ನಡುವೆ ಬರವು ಶ್ರೀಲಂಕಾದ ಸ್ಥಳಗಳನ್ನು ತೋರಿಸುತ್ತಾ ಶ್ರೀಲಂಕಾ ಏರ್‌ಲೈನ್ಸ್ ಜಾಹೀರಾತು ನೀಡಿದೆ.

ಈ ಪೈಕಿ ಸೀತಾ ಅಮ್ಮನ್ ದೇವಸ್ಥಾನದ ಉಲ್ಲೇಖವಿದೆ. ಶ್ರೀಲಂಕಾದಲ್ಲಿರುವ ಸೀತಾ ದೇವಿಯ ಈ ಮಂದಿರವನ್ನು ಭಾರತೀಯ ತಮಿಳಿಗರು ನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಮಗುವ ಈಗಲೂ ರಾಮ ಸೇತು ಇದೆಯಾ ಎಂದು ಪ್ರಶ್ನಿಸುತ್ತದೆ. ಅದರ ಕುರುಹುಗಳನ್ನು ಈಗಲೂ ನೋಡಬಹುದು ಎಂದು ಅಜ್ಜಿ ಹೇಳುವ ಮೂಲಕ ಐತಿಹಾಸಿಕ ಸ್ಥಳಗಳ ಪೌರಾಣಿಕ ಮಹತ್ವವನ್ನೂ ಹೇಳಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಭಾರತೀಯರು ಈ ಜಾಹೀರಾತನ್ನು ಭಾರಿ ಮೆಚ್ಚುಕೊಂಡಿದ್ದಾರೆ. 

ಶ್ರೀಲಂಕಾದಲ್ಲಿ ವೈಲ್ಡ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಮಂಗಳೂರು ಹುಡುಗಿ ಪೂಜಾ ಹೆಗ್ಡೆ
 

Latest Videos
Follow Us:
Download App:
  • android
  • ios