* ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಗಡಿಯಲ್ಲಿ ಶಾಂತಿ ನೆಲೆಸಲು ಭಾರತದ ಶ್ರಮ* ಪಾಕಿಸ್ತಾನದ ಜೊತೆಗಿನ ಸಂಬಂಧ ವೃದ್ಧಿಗಾಗಿ ಭಾರತ ನಿರಂತರವಾಗಿ ಕಾರ್ಯ* ಪಾಕ್‌ ಸ್ವಾತಂತ್ರ್ಯ ದಿನ: ಉಭಯ ದೇಶಗಳ ಯೋಧರ ಸಿಹಿ ವಿನಿಮಯ

ಶ್ರೀನಗರ/ಅಟ್ಟಾರ(ಆ.15): ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಹಾಗೂ ಪಂಜಾಬ್‌ನ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವದ ನಿಮಿತ್ತ, ಭಾರತೀಯ ಸೇನಾ ಸಿಬ್ಬಂದಿಯು ಶನಿವಾರ ಪಾಕಿಸ್ತಾನದ ಸೇನಾ ಸಿಬ್ಬಂದಿಗೆ ಸಿಹಿ ಹಂಚಿ ಶುಭ ಕೋರಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಯೋಧರೂ ಸಿಹಿ ನೀಡಿದರು.

ಈ ಸಂಬಂಧ ಶನಿವಾರ ಟ್ವೀಟ್‌ ಮಾಡಿದ ಭಾರತೀಯ ಸೇನಾ ಅಧಿಕಾರಿಯೊಬ್ಬರು, ‘ಆ.14ರಂದು ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿರುವ ನೆರೆಯ ಪಾಕಿಸ್ತಾನದ ಯೋಧರಿಗೆ ಭಾರತೀಯ ಸೇನೆ ಕುಪ್ವಾರ ಜಿಲ್ಲೆಯ ತಂಗ್ಧಾರ್‌ ಸೆಕ್ಟರ್‌ನಲ್ಲಿರುವ ಚಿಲೆಹನಾ ತಿಥ್ವಾಲ್‌ ಎಂಬಲ್ಲಿ ಸಿಹಿ ತಿಂಡಿ ಹಂಚುವ ಮುಖಾಂತರ ಸಂತೋಷ ಹಂಚಿಕೊಂಡಿತು’ ಎಂದಿದ್ದಾರೆ.

ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಗಡಿಯಲ್ಲಿ ಶಾಂತಿ ನೆಲೆಸಬೇಕೆಂಬ ಕಾರಣಕ್ಕಾಗಿ ಪಾಕಿಸ್ತಾನದ ಜೊತೆಗಿನ ಸಂಬಂಧ ವೃದ್ಧಿಗಾಗಿ ಭಾರತ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲೇ ಬಂದಿದೆ.