Asianet Suvarna News Asianet Suvarna News

ಗರ್ಭಿಣಿ ಎಂದೇ ಅರಿವಿಲ್ಲ, ಸ್ನಾನದ ವೇಳೆ ಹೆರಿಗೆ: ಹೆದರಿ ಮಗು ಎಸೆದಳು!

ಸ್ನಾನ ಮಾಡುವ ವೇಳೆ ಮಹಿಳೆಯೊಬ್ಬರಿಗೆ ಏಕಾಏಕಿ ಹೆರಿಗೆ| ಗರ್ಭ ಧರಿಸಿದ್ದೇ ಗೊತ್ತಿಲ್ಲ| ಹೆದರಿ ಮಗು ಎಸೆದಳು

Indian Origin Woman In The US Gives Birth During Bath, Panic and Throws Newborn pod
Author
Bangalore, First Published Oct 17, 2020, 1:04 PM IST
  • Facebook
  • Twitter
  • Whatsapp

ನ್ಯೂಯಾರ್ಕ್(ಅ.17): ಸ್ನಾನ ಮಾಡುವ ವೇಳೆ ಮಹಿಳೆಯೊಬ್ಬರಿಗೆ ಏಕಾಏಕಿ ಹೆರಿಗೆಯಾಗಿ ಮಗುವೊಂದನ್ನು ಹೆತ್ತ ಘಟನೆ ಅಮೆರಿಕದ ನ್ಯೂಯಾರ್ಕ್ ಕ್ವೀನ್ಸ್‌ನಲ್ಲಿ ನಡೆದಿದೆ.

ವಿಚಿತ್ರವೆಂದರೆ ಭಾರತೀಯ ಮೂಲದ ಸಬಿತಾ ದೂಕ್ರಾಮ್‌ (23) ಎಂಬ ಆ ಮಹಿಳಿಗೆ ತಾನು ಗರ್ಭ ಧರಿಸಿದ್ದೇ ಗೊತ್ತಿಲ್ಲವಂತೆ. ಹೀಗಾಗಿ ಬಾತ್‌ರೂಮ್‌ನಲ್ಲಿ ಮಗು ಕಂಡು ಹೆದರಿದ ಆಕೆ ಮಗುವನ್ನು ಎತ್ತಿ ಕಿಟಕಿಯಿಂದ ಆಚೆ ಎಸೆದಿದ್ದಾಳೆ. ಬಳಿಕ ಸ್ನಾನದ ಕೋಣೆಯನ್ನು ತಾನೇ ಸ್ವಚ್ಛ ಮಾಡಿ, ಸ್ನಾನವನ್ನು ಮುಗಿಸಿ ನಿದ್ದೆ ಮಾಡಿದ್ದಾಳೆ. ಮಗುವಿನ ಚೀರಾಟ ಕೇಳಿದ ನೆರೆಹೊರೆಯವರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

16ನೇ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ, ಮಗು ಇಬ್ಬರೂ ಸಾವು!

ಘಟನೆಗೆ ಸಂಬಂಧಿಸಿದಂತೆ ಸಬಿತಾ ವಿರುದ್ಧ ಕೊಲೆ ಯತ್ನದ ಕೇಸು ದಾಖಲಾಗಿದೆ. ವಿಚಾರಣೆಯ ವೇಳೆ ಮಗು ಹೇಗೆ ಜನಿಸಿತು ಎಂಬುದು ನನಗೆ ಗೊತ್ತೇ ಇಲ್ಲ. ಸ್ನಾನಕ್ಕೆಂದು ಹೋಗಿದ್ದಾಗ ಮಗು ಜನಿಸಿತು. ಏನು ಮಾಡಬೇಕು ಎಂದು ತಿಳಿಯದೇ ಹೀಗೆ ಮಾಡಿದೆ. ಮಗು ಹೇಗಿದೆ ಎಂದು ಕೂಡ ನಾನು ನೋಡಿಲ್ಲ. ತನ್ನನ್ನು ಕ್ಷಮಿಸಿ ಎಂದು ದೂಕ್ರಾಮ್‌ ಕೇಳಿಕೊಂಡಿದ್ದಾಳೆ.

5 ಅಡಿ ಎತ್ತರದಿಂದ ಬಿದ್ದಿದ್ದರಿಂದ ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು, ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Follow Us:
Download App:
  • android
  • ios