ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ ಪಟೇಲ್ ಅವರನ್ನು ಎಫ್‌ಬಿಐನ ಒಂಬತ್ತನೇ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ. ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ 51-49 ಮತಗಳ ಅಂತರದಿಂದ ಕಾಶ್ ಪಟೇಲ್ ಗೆಲುವು ಸಾಧಿಸಿದ್ದಾರೆ.
ವಾಷಿಂಗ್ಟನ್ (ಫೆ.21): ಸೆನೆಟ್‌ನಲ್ಲಿ 51-49 ಮತಗಳ ಗೆಲುವಿನೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ ಪಟೇಲ್ ಅವರನ್ನು ಎಫ್‌ಬಿಐನ ಒಂಬತ್ತನೇ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ.
ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನ ಒಂಬತ್ತನೇ ನಿರ್ದೇಶಕರನ್ನಾಗಿ ದೃಢೀಕರಿಸುವ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಯುಎಸ್ ಸೆನೆಟ್‌ನಲ್ಲಿ ನಡೆದ ನಿಕಟ ಮತದಾನದ ನಂತರ ಕಾಶ್ ಪಟೇಲ್ ಅವರನ್ನು ಎಫ್‌ಬಿಐ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ದೃಢಪಡಿಸಲಾಯಿತು, ಅವರ ಪರವಾಗಿ 51 ಮತಗಳು ಮತ್ತು ವಿರುದ್ಧ 49 ಮತಗಳು ಚಲಾವಣೆಯಾದವು.
ಅಮೆರಿಕ FBI ನಿರ್ದೇಶಕ ಕಾಶ್ ಪಟೇಲ್‌ನ ಬಾಜಿರಾವ್ ಮಸ್ತಾನಿ ಶೈಲಿಯಲ್ಲಿ ಸ್ವಾಗಸಿತಿದ ವೈಟ್‌ಹೌಸ್
ರಿಪಬ್ಲಿಕನ್ ಸೆನೆಟರ್‌ಗಳಾದ ಸುಸಾನ್ ಕಾಲಿನ್ಸ್ ಮತ್ತು ಲಿಸಾ ಮುರ್ಕೋವ್ಸ್ಕಿ ಅವರು ಕಾಶ್ ಪಟೇಲ್ ಅವರ ನಾಮನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸುವಲ್ಲಿ ಎಲ್ಲಾ 47 ಡೆಮೋಕ್ರಾಟ್‌ಗಳೊಂದಿಗೆ ಸೇರಿಕೊಂಡರು.
