ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತೀಯ ಮೂಲದ ಕಾಶ್ ಪಟೇಲ್‌ರನ್ನು ಅಮೆರಿಕ ಅತ್ಯುನ್ನತ ತನಿಖಾ ಎಜೆನ್ಸಿ ಎಫ್‌ಬಿಐ ನಿರ್ದೇಶಕನಾಗಿ ನೇಮಕ ಮಾಡಿದ್ದರು. ಇದೀಗ ಅಮೆರಿಕದ ವೈಟ್‌ಹೌಸ್ ಡೆಪ್ಯೂಟಿ ಚೀಫ್, ಕಾಶ್ ಪಟೇಲ್‌ರನ್ನು ಬಾಲಿವುಡ್ ಸ್ಟೈಲ್‌ನಲ್ಲಿ ಸ್ವಾಗತಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ವಾಶಿಂಗ್ಟನ್(ಫೆ.21) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದಾರೆ. ದ್ವಿಪಕ್ಷೀಯ ಮಾತುಕತೆ, ಅಮೆರಿಕವನ್ನು ಮರಳಿ ಉತ್ಪಾದಕ ರಾಷ್ಟ್ರ ಮಾಡುವ ಗುರಿ, ರಾಷ್ಟ್ರೀಯತೆ, ಸುರಕ್ಷತೆ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಟ್ರಂಪ್ ನಿರ್ಧಾರ ಭಾರಿ ಚರ್ಚೆಯಾಗುತ್ತಿದೆ. ಇದರ ಜೊತೆಗೆ ಟ್ರಂಪ್ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿರುವ ಮುಖ್ಯಸ್ಥರ ಕುರಿತು ಚರ್ಚೆಗಳಾಗುತ್ತಿದೆ. ಇತ್ತೀಚೆಗೆ ಟ್ರಂಪ್ ಅಮೆರಿಕ ಅತ್ಯುನ್ನತ ತನಿಖಾ ಎಜೆನ್ಸಿ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್(ಎಫ್‌ಬಿಐ) ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್ ಪಟೇಲ್(ಕಾಶ್ ಪಟೇಲ್) ಅವರನ್ನು ನೇಮಕ ಮಾಡಿದೆ. ಇದೀಗ ಅಮೆರಿಕ ಅಧ್ಯಕ್ಷರ ವೈಟ್‌ಹೌಸ್‌ನ ಡೆಪ್ಯೂಟಿ ಚೀಫ್ ಆಫ್ ಸ್ಟಾಫ್, ಡೋನಾಲ್ಡ್ ಟ್ರಂಪ್ ಆಪ್ತ, ಡ್ಯಾನ್ ಸ್ಕಾವಿನೋ ವಿಶೇಷ ರೀತಿಯಲ್ಲಿ ಟ್ವೀಟ್ ಮಾಡಿ ಭಾರತೀಯರ ಗಮನಸೆಳೆದಿದ್ದಾರೆ. ಕಾಶ್ ಪಟೇಲ್ ಸ್ವಾಗತಿಸಲು ಬಾಲಿವುಡ್ ಸ್ಟೈಲ್ ಬಳಕೆ ಮಾಡಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ರಣವೀರ್ ಸಿಂಗ್ ಅಭಿನಯದ ಬಾಜಿರಾವ್ ಮಸ್ತಾನಿ ಚಿತ್ರದ ಸೂಪರ್ ಹಿಟ್ ಹಾಡು ಮಲ್ಹಾರಿ ನೃತ್ಯದ ತುಣುಕವನ್ನು ಮಾರ್ಫ್ ಮಾಡಿ ಅದ್ಭುತವಾಗಿ ಕಾಶ್ ಪಟೇಲ್‌ರನ್ನು ವೈಟ್ ಹೌಸ್ ಸ್ವಾಗತಿಸಿದೆ. ಮಲ್ಹಾರಿ ಹಾಡಿನ ಡ್ಯಾನ್ಸ್‌ನಲ್ಲಿರುವ ರಣವೀರ್ ಸಿಂಗ್ ಮುಖವನ್ನು ಮಾರ್ಪ್ ಮಾಡಿ ಕಾಶ್ ಪಟೇಲ್ ಮುಖ ಬಳಸಲಾಗಿದೆ. ಇಷ್ಟೇ ಅಲ್ಲ ನೂತನ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್‌ಗೆ ಅಭಿನಂದನೆಗಳು ಎಂದು ಬರೆದಿದ್ದಾರೆ.
Watch | US ಸೆನೆಟ್‌ನಲ್ಲಿ 'ಜೈ ಶ್ರೀಕೃಷ್ಣ' ಎಂದ ವಿಡಿಯೋ ವೈರಲ್, ಭಾರತೀಯ ಮೂಲದ ಈ ಕಾಶ್ ಪಟೇಲ್ ಯಾರು?
ಪಟೇಲ್ ಈ ಹಿಂದೆ ಟ್ರಂಪ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ರಕ್ಷಣಾ ಇಲಾಖೆಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ ಎಫ್‌ಬಿಐ ಮುಖ್ಯಸ್ಥರಾಗಿ ಅವರ ಹೊಸ ಜವಾಬ್ದಾರಿಯ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ. ಭಾರತೀಯ ಮೂಲದ ಕಾಶ್ ಪಟೇಲ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮತ್ತು ನಂಬಿಕಸ್ಥ ಸಹವರ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅವರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಕಾಶ್ ಪಟೇಲ್ ಭಾರತೀಯ ಮೂಲದ ಅಮೆರಿಕನ್ ಪ್ರಜೆ. ಅವರು ನ್ಯೂಯಾರ್ಕ್‌ನ ಹೇಗರ್ಡನ್ ಸಿಟಿಯಲ್ಲಿ ಜನಿಸಿದರು. ಅವರ ಪೋಷಕರು ಮೂಲತಃ ಗುಜರಾತ್‌ನವರು, ಆದರೆ 1970 ರ ದಶಕದಲ್ಲಿ ಅವರು ವಿದೇಶಕ್ಕೆ ತೆರಳಿದರು. ಮೊದಲಿಗೆ ಅವರ ಕುಟುಂಬ ಉಗಾಂಡಾದಲ್ಲಿ ವಾಸಿಸುತ್ತಿತ್ತು, ಆದರೆ ಅಲ್ಲಿ ಜನಾಂಗೀಯ ತಾರತಮ್ಯದಿಂದಾಗಿ ಅವರು ದೇಶವನ್ನು ತೊರೆಯಬೇಕಾಯಿತು. ನಂತರ ಅವರು ಕೆನಡಾದಲ್ಲಿ ನೆಲೆಸಿದರು ಮತ್ತು ನಂತರ ಅವರ ತಂದೆಗೆ ಏವಿಯೇಷನ್ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿಯಾಗಿ ಕೆಲಸ ಸಿಕ್ಕಿತು. ಇದರ ನಂತರ ಇಡೀ ಕುಟುಂಬ ಅಮೆರಿಕಕ್ಕೆ ಹೋಯಿತು.ಪಟೇಲ್ ಅವರ ಕುಟುಂಬ ಹಿಂದೂ, ಮತ್ತು ಅವರು ಇನ್ನೂ ಅವಿವಾಹಿತರು ಎಂದು ನಂಬಲಾಗಿದೆ. ಅವರು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹವರ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಅವರ ನೀತಿಗಳ ಬಲವಾದ ಬೆಂಬಲಿಗರಾಗಿದ್ದಾರೆ. ಅವರು ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು, ಅಲ್ಲಿ ಅವರು ಇತಿಹಾಸ ಮತ್ತು ಕ್ರಿಮಿನಲ್ ನ್ಯಾಯ (ಕ್ರಿಮಿನಲ್ ಜಸ್ಟಿಸ್) ಅಧ್ಯಯನ ಮಾಡಿದರು.
ಎಫ್‌ಬಿಐನ 10 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗುಜರಾತ್ ವ್ಯಕ್ತಿ: ಸುಳಿವು ನೀಡಿದವರಿಗೆ 2 ಕೋಟಿ ಬಹುಮಾನ
