ಪಕ್ಷದೊಳಗೆ ತೀವ್ರ ವಿರೋಧ ಎದುರಿಸುತ್ತಿರುವ ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಬುಧವಾರ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಬಿದ್ದಿದ್ದಾರೆ. ಅವರ ಸಂಪುಟದಲ್ಲಿ ಗೃಹ ಸಚಿವೆಯಾಗಿದ್ದ ಭಾರತೀಯ ಮೂಲದ ಸುಯೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಲಂಡನ್‌: ಪಕ್ಷದೊಳಗೆ ತೀವ್ರ ವಿರೋಧ ಎದುರಿಸುತ್ತಿರುವ ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಬುಧವಾರ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಬಿದ್ದಿದ್ದಾರೆ. ಅವರ ಸಂಪುಟದಲ್ಲಿ ಗೃಹ ಸಚಿವೆಯಾಗಿದ್ದ ಭಾರತೀಯ ಮೂಲದ ಸುಯೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಅಧಿಕೃತ ಮಾಹಿತಿಯೊಂದನ್ನು ವೈಯಕ್ತಿಕ ಇ ಮೇಲ್‌ ಖಾತೆ (Personel E-mail Account)ಮೂಲಕ ಕಳುಹಿಸಿದ ತಪ್ಪಿಗಾಗಿ ರಾಜೀನಾಮೆ ನೀಡಿದ್ದಾಗಿ ಸುಯೆಲ್ಲಾ ಕಾರಣ ನೀಡಿದ್ದರೂ, ಅದು ವಾಸ್ತವವಾಗಿ ಲಿಜ್‌ ವಿರುದ್ಧ ಅಸಮಾಧಾನದ ಪರಿಣಾಮ ಎನ್ನಲಾಗುತ್ತಿದೆ. ಹೀಗಾಗಿ ಲಿಜ್‌ ಅವರನ್ನು ತೆಗೆದು ಹಾಕಿ, ಭಾರತೀಯ ಮೂಲದ ರಿಷಿ ಸುನಕ್‌ (Rishi sunak) ಅವರನ್ನು ಪ್ರಧಾನಿ ಹುದ್ದೆ ಸ್ಥಾನಕ್ಕೆ ಕೂರಿಸಲಾಗುವುದು ಎಂಬ ಸುದ್ದಿಗಳಿಗೆ ಮತ್ತಷ್ಟು ಬಲ ಬಂದಿದೆ. ಈ ಹಿಂದೆ ಪ್ರಧಾನಿ ಹುದ್ದೆಗಾಗಿ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಲಿಜ್‌ ವಿರುದ್ಧ ಸುಯೆಲ್ಲಾ ಸ್ಪರ್ಧಿಸಿದ್ದರು.

ಬ್ರಿಟನ್‌ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ಹಿರಿಯ ನಾಗರೀಕರನ್ನು ವಂಚಿಸಿದ ಪ್ರಕರಣ, ಭಾರತೀಯ ಮೂಲದ ಅಮೆರಿಕ ನಿವಾಸಿಗೆ ಜೈಲು!