ಟೆಲಿಮಾರ್ಕೆಂಟಿಂಗ್ ಯೋಜನೆ ಮೂಲಕ ಹಿರಿಯ ನಾಗರೀಕರನ್ನು ವಂಚಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕ ನಿವಾಸಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.  

ವಾಶಿಂಗ್ಟನ್(ಆ.01): ಹಿರಿಯ ನಾಗರೀಕರಿಗೆ ಹಣ ವಂಚಿಸಿದ ಪ್ರಕರಣದಡಿಯಲ್ಲಿ ಭಾರತೀಯ ಮೂಲಕ ಅಮೆರಿಕ ನಿವಾಸಿ ಹಿರೇನ್ ಕುಮಾರ್ ಪಿ ಚೌಧರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಟೆಲಿ ಮಾರ್ಕೆಂಟಿಂಗ್ ಯೋಜನೆಯಡಿ ಹಿರಿಯ ನಾಗರೀಕರಿಂದ ಹಣ ಪಡೆದು ಅಕ್ರಮವಾಗಿ ವರ್ಗಾವಣೆ ಮಾಡಿದ ಹೀರೇನ್ ಕುಮಾರ್ ಪಿ ಚೌಧರಿ ಆರೋಪ ಸಾಬೀತಾಗಿದೆ. ಹೀಗಾಗಿ ಅಮೆರಿಕ ನ್ಯಾಯಾಲಯದ ಅಟಾರ್ನಿ ಜಾನ್ ಆರ್ ಲಾಶ್ ಶಿಕ್ಷೆ ಪ್ರಕಟಿಸಿದ್ದಾರೆ. ಹಿರಿಯ ಸಂತ್ರಸ್ತರಿಂದ ಹಣ ಪಡೆಯಲು ಹೀರೆನ್ ಕುಮಾರ್ ಪಿ ಚೌಧರಿ ನಕಲಿ ಭಾರತೀಯ ಪಾಸ್‌ಪೋರ್ಟ್ ನೀಡಿ ಹಲವು ನಕಲಿ ಖಾತೆಗಳನ್ನು ತೆರೆದಿದ್ದಾರೆ. ಈ ಖಾತೆಗಳಲ್ಲಿರುವ ವಿಳಾಸ, ಹೆಸರು ಬೇರೆ ಬೇರೆಯಾಗಿದೆ. ಅಮೆರಿಕದ ಪ್ರತಿಷ್ಠಿತ ಸಂಸ್ಥೆಗಳ ಹೆಸರು ಹೇಳಿ ಫೋನ್ ಕರೆ ಮಾಡಲಾಗಿದೆ. ಬಳಿಕ ಹಿರಿಯ ನಾಗರೀಕರಿಂದ ಹಣ ಪಡೆಯಲಾಗಿದೆ. ಈ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಈ ಕುರಿತು ನ್ಯಾಯಾಲಾಯದಲ್ಲಿ ಹಿರೇನ್ ಕುಮಾರ್ ತಪ್ಪೋಪ್ಪಿಕೊಂಡಿದ್ದರು.

ಹಿರೇನ್ ಕುಮಾರ್ ಮೋಸದ ಬಲೆಗೆ ಬಿದ್ದ ನಿವೃತ್ತ ನರ್ಸ್, ತಮ್ಮ ಖಾತೆಯಿಂದ 900,000 ಅಮೆರಿಕನ್ ಡಾಲರ್ ಮೊತ್ತವನ್ನು ಹಿರೇನ್ ಕುಮಾರ್ ಪಿ ಚೌಧರಿಗೆ ವರ್ಗಾಯಿಸಿದ್ದರು. ಈ ರೀತಿ ಹಲವರಿಂದ ಹಲವು ಯೋಜನೆಯ ಹೆಸರಿನಲ್ಲಿ ಹಣ ಪಡೆದುಕೊಂಡ ಹಿರೇನ್ ಕುಮಾರ್ ವಂಚಿಸಿದ್ದಾರೆ. 2018ರ ಎಪ್ರಿಲ್ 19ರಂದು ಹಿರೇನ್ ಕುಮಾರ್ ಪಿ ಚೌಧರಿ ಹೊಸ ಖಾತೆ ತೆರೆದಿದ್ದಾರೆ. ಬಳಿಕ ಹಿರಿಯ ನಾಗರೀಕರೊಬ್ಬರಿಂದ 7,000 ಅಮೆರಿಕನ್ ಡಾಲರ್ ಮೊತ್ತವನ್ನು ಪಡೆದುಕೊಂಡಿದ್ದಾರೆ. ಸಂತ್ರಸ್ತರು ಹಿರೇನ್ ಕುಮಾರ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಹಣ ವರ್ಗಾವಣೆ ಆದ ಮರುದಿನ ಚಿಕಾಗೋದಲ್ಲಿ ಬ್ಯಾಂಕ್ ಶಾಖೆಗೆ ತೆರಳಿ 6,500 ರೂಪಾಯಿ ಹಿಂತೆಗದುಕೊಂಡಿದ್ದಾರೆ. ಹೀಗೆ ಪ್ರತಿ ಸಂತ್ರಸ್ತರು ವರ್ಗಾವಣೆ ಮಾಡಿದ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ದೊಡ್ಡ ಮೊತ್ತವನ್ನು ತಮ್ಮ ಬೇರೆ ಖಾತೆಗೆ ವರ್ಗಾಯಿಸಿದ್ದಾರೆ.

ಪಿಎನ್‌ಬಿ, ಮಲ್ಯಗಿಂತ ದೊಡ್ಡ ಗೋಲ್ಮಾಲ್‌: 34,615 ಕೋಟಿ ರು. ಮತ್ತೊಂದು ಮಹಾ ಬ್ಯಾಂಕಿಂಗ್‌ ವಂಚನೆ..!

ಬ್ಯಾಂಕ್‌ ಮ್ಯಾನೆಜರ್‌ಗೆ ವಂಚಿಸಿ . 62 ಲಕ್ಷ ವರ್ಗಾವಣೆ
ಬ್ಯಾಂಕ್‌ ವ್ಯವಸ್ಥಾಪಕರಿಗೆ ಬ್ಯಾಂಕ್‌ ಗ್ರಾಹಕನ ಸೋಗಿನಲ್ಲಿ ಕರೆ ಮಾಡಿ ಇ-ಮೇಲ್‌ ಸಂದೇಶ ಕಳುಹಿಸಿದ ವಂಚಕ, ಅವರಿಂದಲೇ ಉದ್ಯಮಿಯೊಬ್ಬರ ಖಾತೆಯಲ್ಲಿದ್ದ . 62.30 ಲಕ್ಷ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ. ಇಲ್ಲಿನ ಕೆನರಾ ಬ್ಯಾಂಕ್‌ನ ಶಂಕರ ಮಿಶ್ರಾ ಮೋಸ ಹೋಗಿ, ಬೇರೆಯವರ ಖಾತೆಯಲ್ಲಿದ್ದ ಹಣವನ್ನು ವಂಚಕನಿಗೆ ವರ್ಗಾವಣೆ ಮಾಡಿದ್ದಾರೆ. ಇಲ್ಲಿನ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ವಂಚಕ ಕರೆ ಮಾಡಿ ತಾನು ಸುಭಾಸ್‌ ಜವಳಿ, ವ್ಯವಹಾರದಲ್ಲಿ ಹಣದ ಅಗತ್ಯವಿದ್ದು, ತುರ್ತಾಗಿ ವರ್ಗಾಯಿಸಬೇಕು ಎಂದು ಹೇಳಿದ್ದಾನೆ. ಅಲ್ಲದೆ, ನಕಲಿ ಜಿ-ಮೇಲ್‌ ಐಡಿಯಿಂದ ಹಣದ ಅಗತ್ಯವಿರುವ ಕುರಿತು ಸಂದೇಶ ಕಳುಹಿಸಿದ್ದ. ಅದನ್ನು ಪರಿಶೀಲಿಸಿದಾಗ ಅದರಲ್ಲಿರುವ ಸುಭಾಸ್‌ ಅವರ ಸಹಿಗೂ, ಬ್ಯಾಂಕ್‌ನಲ್ಲಿರುವ ಸಹಿಗೂ ಹೋಲಿಕೆಯಾಗಿತ್ತು. ಅದನ್ನು ನಂಬಿ ಅವರು ವಂಚಕ ಕೇಳಿದಂತೆ . 62,30,649 ಹೇಳಿದ್ದ ಖಾತೆಗೆ ವರ್ಗಾಯಿಸಿದ್ದಾರೆ ಎಂದು ದೂರಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.