Asianet Suvarna News Asianet Suvarna News

ಭಾರತೀಯ ಮೂಲದ ನತಾಶಾ ವಿಶ್ವದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿ!

* ಭಾರತೀಯ ಮೂಲದ ಅಮೆರಿಕನ್‌ ಬಾಲಕಿ, 11 ವರ್ಷದ ನತಾಶಾ ಪೆರಿ

* ಭಾರತೀಯ ಮೂಲದ ನತಾಶಾ ವಿಶ್ವದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿ

* ಅದ್ವಿತೀಯ ಸಾಧನೆ ಮಾಡಿದ ನತಾಶಾ

Indian American girl declared 'one of the brightest students in world by top US university pod
Author
Bangalore, First Published Aug 4, 2021, 8:33 AM IST
  • Facebook
  • Twitter
  • Whatsapp

ವಾಷಿಂಗ್ಟನ್‌(ಅ.04): ಭಾರತೀಯ ಮೂಲದ ಅಮೆರಿಕನ್‌ ಬಾಲಕಿ, 11 ವರ್ಷದ ನತಾಶಾ ಪೆರಿ ವಿಶ್ವದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬಳು ಎಂದು ಗುರುತಿಸಿಕೊಂಡಿದ್ದಾಳೆ.

ನ್ಯೂಜೆರ್ಸಿಯಲ್ಲಿ ವಿದ್ಯಾರ್ಥಿನಿಯಾಗಿರುವ ನತಾಶಾ ಕಾಲೇಜು ಪ್ರವೇಶಾತಿಗಾಗಿ ನಡೆದ ಸ್ಕಾಲಸ್ಟಿಕ್‌ ಅಸ್ಸೆಸ್ಸೆಮೆಂಟ್‌ ಟೆಸ್ಟ್‌ (ಎಸ್‌ಎಟಿ), ಅಮೇರಿಕನ್‌ ಕಾಲೇಜ್‌ ಟೆಸ್ಟಿಂಗ್‌ (ಎಸಿಟಿ)ಗೆ ಹಾಜರಾಗಿದ್ದಳು. ಇದರಲ್ಲಿ ಅದ್ವಿತೀಯ ಸಾಧನೆ ಮಾಡಿದ ನತಾಶಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಮಾನ್ಯತೆ ಪಡೆದಿದ್ದಾಳೆ. ಜಾನ್‌ ಹಾಪ್ಕಿನ್ಸ್‌ ಸೆಂಟರ್‌ ಫಾರ್‌ ಟ್ಯಾಲೆಂಟೆಡ್‌ ಯೂತ್‌ ಟ್ಯಾಲೆಂಟ್‌(ಸಿಟಿವೈ) ಆಯೋಜಿಸಿದ ಈ ಟೆಸ್ಟ್‌ನಲ್ಲಿ ಜಗತ್ತಿನ 84 ದೇಶಗಳ 19 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನತಾಶಾ, ಇದು ಇನ್ನಷ್ಟುಸಾಧನೆ ಮಾಡಲು ಪ್ರೇರಣೆ ಎಂದು ತಿಳಿಸಿದ್ದಾಳೆ.

Follow Us:
Download App:
  • android
  • ios