ಜಾಧವ್ ರಕ್ಷಣೆಗಾಗಿ ಪಾಕ್ ಜೊತೆ ಭಾರತ ಹಿಂಬಾಗಿಲ ಮಾತುಕತೆ!
ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ಸೇನಾನಿ ಕುಲಭೂಷಣ್ ಜಾಧವ್| ಜಾಧವ್ ರಕ್ಷಣೆಗಾಗಿ ಪಾಕ್ ಜೊತೆ ಭಾರತ ಹಿಂಬಾಗಿಲ ಮಾತುಕತೆ
ನವದೆಹಲಿ(ಮೇ.04): ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಸೇನಾನಿ ಕುಲಭೂಷಣ್ ಜಾಧವ್ ಅವರ ರಕ್ಷಣೆಗಾಗಿ ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಹಿಂಬಾಗಿಲ ಮೂಲಕ ಮಾತುಕತೆ ನಡೆಸಿತ್ತು ಎಂಬ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಅವರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಬಹಿರಂಗಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಈ ವಿಷಯ ಬಹಿರಂಗಪಡಿಸಿದ ಅವರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸೇರಿದಂತೆ ಹಲವು ಮಾರ್ಗಗಳ ಮೂಲಕ ನಾವು ಜಾಧವ್ ಬಿಡುಗಡೆಗೆ ಮನವಿ ಮಾಡಿದ್ದೆವು. ಆದರೆ ಪಾಕ್ ಇದಕ್ಕೆ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ.
ಗಲ್ಲು ಶಿಕ್ಷೆ ಪ್ರಶ್ನಿಸಲು ಕುಲಭೂಷಣ್‌ಗೆ ಪಾಕ್ ಅಚ್ಚರಿಯ ಅವಕಾಶ!
ಜಾಧವ್ ಕೇಸಿನಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ನಲ್ಲಿ ವಾದಿಸಿದ ಪ್ರಮುಖ ಅಡ್ವೊಕೇಟ್ ಹರೀಶ್ ಸಾಳ್ವೆ ಆಗಿದ್ದರು. ವಿಚಾರಣೆಯನ್ನು ಕಳೆದ ವರ್ಷ ಮುಗಿಸಿದ್ದ ಅಂತಾರಾಷ್ಟ್ರೀಯ ಕೋರ್ಟ್ ಪಾಕಿಸ್ತಾನ ತನ್ನ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದು ಹೇಳಿತ್ತು.