ಗಲ್ಲು ಶಿಕ್ಷೆ ಪ್ರಶ್ನಿಸಲು ಕುಲಭೂಷಣ್‌ಗೆ ಪಾಕ್‌ ಅಚ್ಚರಿಯ ಅವಕಾಶ!

ಗಲ್ಲು ಶಿಕ್ಷೆ ಪ್ರಶ್ನಿಸಲು ಕುಲಭೂಷಣ್‌ಗೆ ಪಾಕ್‌ ಅಚ್ಚರಿಯ ಅವಕಾಶ| ಗಲ್ಲು ಪ್ರಶ್ನಿಸಿ ಪಾಕ್‌ ಕೋರ್ಟಿಗೆ ಹೋಗಲು ಕುಲಭೂಷಣ್‌ಗೆ ಅವಕಾಶ| ಈ ಸಂಬಂಧ ಸೇನಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ

Pakistan To Amend Army Act To Let Kulbhushan Jadhav Appeal In Civilian Court

ಇಸ್ಲಾಮಾಬಾದ್‌[ನ.14]: ‘ಭಾರತದ ಗೂಢಚಾರ’ ಎಂಬ ಆರೋಪ ಹೊತ್ತು ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಭೀತಿ ಎದುರಿಸುತ್ತಿರುವ ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್‌ ಜಾಧವ್‌ ವಿಚಾರದಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ಕೊಂಚ ತಣ್ಣಗಾಗಿದೆ.

ಮತ್ತೊಬ್ಬ ಕುಲಭೂಷಣ್‌ ಜಾಧವ್‌ ಸೃಷ್ಟಿಗೆ ಪಾಕ್‌ ನಡೆಸಿದ್ದ ಹುನ್ನಾರ ವಿಫಲ!

ಸೇನಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಯನ್ನು ನಾಗರಿಕ ನ್ಯಾಯಾಲಯವೊಂದರಲ್ಲಿ ಅರ್ಜಿ ಸಲ್ಲಿಸಲು ಜಾಧವ್‌ಗೆ ಅವಕಾಶ ನೀಡುವ ದೃಷ್ಟಿಯಿಂದ ‘ಸೇನಾ ಕಾಯ್ದೆ’ಗೆ ತಿದ್ದುಪಡಿ ತರಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ಪಾಕ್‌ ಮಿಲಿಟರಿ ಕೋರ್ಟು, ಏಪ್ರಿಲ್‌ 2017ರಲ್ಲಿ ಕುಲಭೂಷಣ್‌ಗೆ ಗೂಢಚರ್ಯೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಆದೇಶಿಸಿತ್ತು. ಆದರೆ ಸೇನಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಪಾಕಿಸ್ತಾನದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ ಹೋಗಿದ್ದ ಭಾರತವು, ಜಾಧವ್‌ಗೆ ನೀಡಿದ್ದ ಗಲ್ಲು ಶಿಕ್ಷೆ ಆದೇಶಕ್ಕೆ ತಡೆ ತಂದಿತ್ತು.

ಸಾಳ್ವೆಗೆ 1 ರೂ. ಸಂಭಾವನೆ ಹಸ್ತಾಂತರ: ಸುಷ್ಮಾ ಕೊನೆ ಆಸೆ ಪೂರೈಸಿದ ಪುತ್ರಿ!

‘ಜಾಧವ್‌ ಭಾರತದ ಗೂಢಚಾರ ಅಲ್ಲ. ಪಾಕಿಸ್ತಾನವು ಇರಾನ್‌ನಿಂದ ಅವರನ್ನು ಅಪಹರಿಸಿ ಪಾಕ್‌ಗೆ ಕರೆತಂದಿದೆ. ಈತ ಭಾರತದ ಗೂಢಚಾರ ಎಂದು ಸುಳ್ಳು ಆರೋಪ ಮಾಡಿದೆ’ ಎಂಬುದು ಭಾರತದ ವಾದ.

Latest Videos
Follow Us:
Download App:
  • android
  • ios