Asianet Suvarna News Asianet Suvarna News

Covovax : ಸೀರಮ್ ಸಂಸ್ಥೆಯ ಕೋವಿಡ್ 19 ಲಸಿಕೆಗೆ WHO ಅನುಮತಿ

ತುರ್ತುಬಳಕೆಗೆ ಅನುಮೋದನೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ನೊವಾವ್ಯಾಕ್ಸ್ ಲೈಸೆನ್ಸ್ ನ ಅಡಿಯಲ್ಲಿ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಲಸಿಕೆ
ಬಡ ದೇಶಗಳಿಗೆ ಲಸಿಕೆಯ ಪ್ರಮಾಣವನ್ನು ಏರಿಸುವ ಗುರಿ

India Serum Institute's Covid Vaccine Covovax, Cleared By World Health Organization san
Author
Genève, First Published Dec 17, 2021, 9:14 PM IST

ಜಿನೆವಾ (ಡಿ. 17): ನೊವಾವ್ಯಾಕ್ಸ್ ನೊಂದಿಗೆ (Novavax)ಭಾರತದ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ (Serum Institute of India ) ಸಂಶೋಧಿಸಿ, ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್ (Covovax) ಕೋವಿಡ್-19 ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಕೊವೊವ್ಯಾಕ್ಸ್ ಹೆಸರಿನ ಲಸಿಕೆ ನೊವಾವ್ಯಾಕ್ಸ್ ಪರವಾನಗಿ ಅಡಿಯಲ್ಲಿ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ತಯಾರಿಸಲ್ಪಟ್ಟಿದ್ದು, ಕೋವ್ಯಾಕ್ಸ್ ಪೋರ್ಟ್‌ಫೋಲಿಯೊದ ಭಾಗವಾಗಿದೆ, ಕಡಿಮೆ-ಆದಾಯದ ದೇಶಗಳಲ್ಲಿ ಹೆಚ್ಚಿನ ಜನರಿಗೆ ಲಸಿಕೆ ತಲುಪಿಸುವ ಉದ್ದೇಶದೊಂದಿಗೆ ಡಬ್ಲ್ಯುಎಚ್ಓ (World Health Organization) ಈ ಅನುಮೋದನೆ ನೀಡಿದೆ.

ನೊವಾವ್ಯಾಕ್ಸ್  ಸ್ವತಃ ತಾನು ತಯಾರು ಮಾಡಿರುವ ನುವಾಕ್ಸೊವಿಡ್ ಲಸಿಕೆಯು ಯುರೋಪಿಯನ್ ಮೆಡಿಸಿನ್ ಏಜೆನ್ಸಿಯ (ಇಎಂಎ) (European Medicines Agency)ಮೌಲ್ಯಮಾಪನದಲ್ಲಿದೆ. ಇಎಂಎ (EMA)ತನ್ನ ಶಿಫಾರಸನ್ನು ನೀಡಿದ ನಂತರ ಈ ಲಸಿಕೆಯು ತನ್ನ ಮೌಲ್ಯಮಾಪನವನ್ನು ಪೂರ್ಣಗೊಳಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.  ಅಮೆರಿಕ ಮೂಲದ ನೋವಾವ್ಯಾಕ್ಸ್ ನಿಂದ ಪರವಾನಿಗಿ ಪಡೆದು ಅದರ ಅಡಿಯಲ್ಲಿ ಭಾರತದ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಲಸಿಕೆಯನ್ನು ಜಾಗತಿಕ ಲಸಿಕಾ ವ್ಯವಸ್ಥೆ ಕೋವ್ಯಾಕ್ಸ್ ನ (COVAX)ಭಾಗವಾಗಿ ವಿತರಣೆ ಮಾಡಲಾಗುತ್ತದೆ. "ಬಡ ಹಾಗೂ ಆದಾಯ ಕಡಿಮೆ ಇರುವ ದೇಶಗಳಲ್ಲಿ ಹೆಚ್ಚಿನ ಜನರಿಗೆ ಲಸಿಕೆ ಸಿಗಬೇಕು ಎನ್ನುವ ಕಾರಣಕ್ಕೆ ಪ್ರಯತ್ನಗಳು ಜಾರಿಯಲ್ಲಿವೆ. ಅದರ ಭಾಗವಾಗಿ ಈ ಅನುಮೋದನೆ ನೀಡಲಾಗಿದೆ ಎಂದು ಡಬ್ಲ್ಯುಎಚ್ ಓ (WHO) ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಹೊಸ ರೂಪಾಂತರಗಳು ಹೊರಹೊಮ್ಮುತ್ತಿದ್ದರೂ ಸಹ, ಕೋವಿಡ್-19 ನಿಂದ ಗಂಭೀರ ಅನಾರೋಗ್ಯಮತ್ತು ಸಾವುಗಳ ವಿರುದ್ಧ ಜನರನ್ನು ರಕ್ಷಣೆ ಮಾಡಲು ಲಸಿಕೆಗಳು ಅತ್ಯಂತ ಪರಿಣಾಮಕಾರಿ ಸಾಧನೆಗಳಲ್ಲಿ ಒಂದಾಗಿದೆ ಎಂದು ಡಬ್ಲ್ಯುಎಚ್ ಓ ಅಲ್ಲಿ ಲಸಿಕೆಗಳ ವಿಭಾಗದ ಮುಖ್ಯಸ್ಥರಾಗಿರುವ ಮರಿಯಂಜೆಲಾ ಸಿಮಾವೋ (Mariangela Simao) ಹೇಳಿದ್ದಾರೆ.
 


ಬಡ ದೇಶಗಳಲ್ಲಿ ಜನರಿಗೆ ಲಸಿಕೆ ನೀಡಿರುವ ಪ್ರಮಾಣವನ್ನು ಏರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರಸ್ತುತ ವಿಶ್ವದಲ್ಲಿ 41 ದೇಶಗಳೂ ಒಟ್ಟಾರೆ ತಮ್ಮ ಜನಸಂಖ್ಯೆ ಶೇ.10ರಷ್ಟು ಜನರಿಗೆ ಲಸಿಕೆ ವಿತರಿಸಲು ಸಾಧ್ಯವಾಗಿಲ್ಲ. ಇನ್ನು 98 ದೇಶಗಳಲ್ಲಿ ಲಸಿಕೆ ಹಾಕಿರುವ ಪ್ರಮಾಣ ಶೇ. 40 ರಷ್ಟು ಮುಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ವಿರುದ್ಧ ಕೊವೊವ್ಯಾಕ್ಸ್ ನ ಎರಡು ಡೋಸ್ ಗಳನ್ನು ನೀಡಲಾಗುತ್ತಿದ್ದು, 2 ರಿಂದ 8 ಡಿಗ್ರಿ ತಾಪಮಾನದಲ್ಲಿ ಇದನ್ನು ಇಡಬೇಕಾಗಿರುತ್ತದೆ. ನೋವಾವ್ಯಾಕ್ಸ್ ಮತ್ತು ಸೀರಮ್ ಇನ್ಸ್ ಟಿಟ್ಯೂಟ್, ವಿಶ್ವದ ಅತೀ ದೊಡ್ಡ ಲಸಿಕೆ ಉತ್ಪಾದಕರಾಗಿದ್ದು, ಕೋವ್ಯಾಕ್ಸ್ ವ್ಯವಸ್ಥೆಯಲ್ಲಿ 1.1 ಬಿಲಿಯನ್ ಗೂ ಅಧಿಕ ಡೋಸ್ ಗಳನ್ನು ನೀಡಲು ಬದ್ಧವಾಗಿದ್ದಾಗಿ ಘೋಷಣೆ ಮಾಡಿದೆ. 

Coronavirus; ತುರ್ತು ಬಳಕೆಗೆ ಅನುಮತಿ ಕೇಳಿದ ನೋವಾವ್ಯಾಕ್ಸ್.. ಪರಿಣಾಮಕಾರಿ ಲಸಿಕೆ!
ನೊವಾವ್ಯಾಕ್ಸ್ ಸ್ವತಃ ತಾನು ತಯಾರು ಮಾಡಿರುವ ನುವಾಕ್ಸೊವಿಡ್ ಹೆಸರಿನ ಲಸಿಕೆಗೆ ಕಳೆದ ತಿಂಗಳು ಇಂಡೋನೇಷ್ಯಾ (Indonesia) ಅನುಮೋದನೆ ನೀಡಿತ್ತು. ಜಪಾನ್ (Japan) ದೇಶದಿಂದ ಅನುಮೋದನೆಗಾಗಿ ಕಾಯುತ್ತಿದೆ. ಜಪಾನ್ ನಲ್ಲಿ ನುವಾಕ್ಸೊವಿಡ್ ಉತ್ಪಾದನೆ ಆಗುತ್ತಿದ್ದು, ತಾಕಡಾ ಫಾರ್ಮಾಸ್ಯುಟಿಕಲ್ ಇದನ್ನು ವಿತರಣೆ ಮಾಡುತ್ತಿದೆ. ಇನ್ನು ಒಮಿಕ್ರಾನ್ ( Omicron) ರೂಪಾಂತರ ವೈರಸ್ ವಿರುದ್ಧವೂ ಹೋರಾಟ ಮಾಡಲು ಶಕ್ತವಾಗುವ ಲಸಿಕೆಯನ್ನು ಉತ್ಪಾದನೆ ಮಾಡುತ್ತಿರುವುದಾಗಿ ಹೇಳಿದ್ದು, ಒಮಿಕ್ರಾನ್ ವಿರುದ್ಧ ಎರಡು ಡೋಸ್ ಲಸಿಕೆಯು ಎಷ್ಟು ಮಟ್ಟದಲ್ಲಿ ಪರಿಣಾಮಕಾರಿ ಎನ್ನುವುದನ್ನು ಪರೀಕ್ಷೆ ಮಾಡುತ್ತಿದೆ.

Omcricon ಆತಂಕ, ವಿಶೇಷ ಲಸಿಕೆ ತಯಾರಿಸುತ್ತಿದೆ ಅಮೆರಿಕ, ಜನವರಿಯಿಂದ ಲಭ್ಯ ಸಾಧ್ಯತೆ!
NVX-CoV2373 ಅಥವಾ ನೊವಾವ್ಯಾಕ್ಸ್ (ನುವಾಕ್ಸೊವಿಡ್) ನ್ಯಾನೊ ಪಾರ್ಟಿಕಲ್ ಪ್ರೋಟೀನ್ ಆಧಾರಿತ ಕೊರೋನಾ ಲಸಿಕೆ ಇದಾಗಿದೆ.  3ನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ರೂಪಾಂತರಿ ಹಾಗೂ ಕೊರೋನಾದಿಂದ ತೀವ್ರವಾಗಿ ಅಸ್ವಸ್ಥಗೊಂಡವರಿಗೆ ಶೇ. 100 ರಷ್ಟು ರಕ್ಷಣೆ ಒದಗಿಸಿದೆ. 3ನೇ ಹಂತದ ಕ್ಲಿನಿಕಲ್ ಪ್ರಯೋಗದ ಸರಾಸರಿ ಫಲಿತಾಂಶದಲ್ಲಿ ಕೋವಿಡ್ ವಿರುದ್ಧ ನೊವಾವ್ಯಾಕ್ಸ್ ಶೇಕಡಾ 90.4 ರಷ್ಟು ಪರಿಣಾಮಕಾರಿ ಅನ್ನೋದು ದಾಖಲಾಗಿತ್ತು.

Follow Us:
Download App:
  • android
  • ios