ಭಾರತ ಮೂಲದ ಕಾಶ್ ಪಟೇಲ್ ಅಮೆರಿಕದ ಎಫ್‌ಬಿಐ ನಿರ್ದೇಶಕರಾಗಿ ಭಗವದ್ಗೀತೆ ಮೇಲೆ ಪ್ರಮಾಣ ಸ್ವೀಕರಿಸಿದ್ದಾರೆ. ಟ್ರಂಪ್ ಆಡಳಿತದಲ್ಲಿ ನೇಮಕಗೊಂಡಿದ್ದ ಸೇನಾ ಮುಖ್ಯಸ್ಥರನ್ನು ವಜಾಗೊಳಿಸಲಾಗಿದೆ.
ವಾಷಿಂಗ್ಟನ್: ಅಮೆರಿಕ ಗುಪ್ತಚರ ಸಂಸ್ಥೆ ಒಂದಾದ ಎಫ್‌ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ನ ನಿರ್ದೇಶಕರಾಗಿ ನೇಮಕಗೊಂಡಿರುವ ಭಾರತ ಮೂಲದ ಕಾಶ್ ಪಟೇಲ್ ಭಗವದ್ಗೀತೆ ಮೇಲೆ ಕೈ ಇರಿಸಿ ಪ್ರಮಾಣ ಸ್ವೀಕರಿಸಿದ್ದಾರೆ. ಸೆನೆಟ್‌ನಲ್ಲಿ 51-49 ಮತಗಳಿಂದ ಎಫ್‌ಬಿಐ ನಿರ್ದೇಶಕನ ಹುದ್ದೆಗೆ ಆಯ್ಕೆಯಾದ ಕಾಶ್ ಅವರಿಗೆ ಅಟಾರ್ನಿ ಜನರಲ್ ಪಾಮ್ ಬೊಂದಿ, ಶ್ವೇತ ಭವನದ ಆವರಣದಲ್ಲಿರುವ ಇಇಒಬಿ ಭವನದಲ್ಲಿ ಪ್ರಮಾಣ ಬೋಧಿಸಿದರು. ಈ ವೇಳೆ ಅವರ ಪರಿವಾರ ಹಾಗೂ ಪ್ರೇಯಸಿ ಉಪಸ್ಥಿತರಿದ್ದರು.
ಪ್ರಮಾಣ ಸ್ವೀಕರಿಸಿ ಮಾತನಾಡಿದ ಪಟೇಲ್, ‘ಮೊದಲ ತಲೆಮಾರಿನ ಭಾರತೀಯನಾದ ನಾನು ಅಮೆರಿಕದ ಕನಸನ್ನು ಈಡೇರಿಸುವೆ ಹಾಗೂ ಅಮೆರಿಕದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲಿದ್ದೇನೆ. ಇದು ಬೇರೆಲ್ಲೂ ಆಗಲು ಸಾದ್ಯವಿಲ್ಲ’ ಎಂದರು. ಜೊತೆಗೆ ಟ್ರಂಪ್ ಹಾಗೂ ತಮ್ಮ ಪರವಾಗಿ ಮತ ಚಲಾಯಿಸಿದ ಸಂಸದರಿಗೆ ಧನ್ಯವಾದ ಸಲ್ಲಿಸಿದರು.ಪಟೇಲ್ ಅವರು ನ್ಯೂ ಯಾರ್ಕ್‌ನಲ್ಲಿ ಹುಟ್ಟಿದವರಾದರೂ, ಗುಜರಾತ್ ಮೂಲ ಹೊಂದಿದ್ದಾರೆ. ಇವರ ತಾಯಿ ತಾಂಜಾನಿಯಾ ಹಾಗೂ ತಂದೆ ಉಗಾಂಡಾದವರಾಗಿದ್ದು, 1970ಯಲ್ಲಿ ಅಮೆರಿಕಕ್ಕೆ ಬಂದು ನೆಲೆಸಿದ್ದರು.
ಇದನ್ನು ಓದಿ: ಚುನಾವಣೆಯಲ್ಲಿ ಮೋದಿ ಸೋಲಿಸಲು ಭಾರತಕ್ಕೆ ಬೈಡನ್ ನೀಡಿದ್ದು ಕಿಕ್ ಬ್ಯಾಕ್; ಟ್ರಂಪ್ ಬಾಂಬ್!
ಅಮೆರಿಕ: ಸಶಸ್ತ್ರ ಪಡೆ ಮುಖ್ಯಸ್ಥ ಸೇರಿ 2 ಸೇನಾ ಅಧಿಕಾರಿಗಳು ವಜಾ
ವಾಷಿಂಗ್ಟನ್: ಅಮೆರಿಕ ಸೇನೆಯ ಅತ್ಯನ್ನತ ಶ್ರೇಣಿಯಾದ ಸೇನೆಯ ಜಂಟಿ ಮುಖ್ಯಸ್ಥರ ಅಧ್ಯಕ್ಷ ಹುದ್ದೆಯಿಂದ ವಾಯುಪಡೆಯ ಜನರಲ್ ಸಿ.ಕ್ಯು. ಬ್ರೌನ್ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾಗೊಳಿಸಿದ್ದಾರೆ.ಇದೇ ವೇಳೆ, ಇನ್ನೂ ಇಬ್ಬರು ಹಿರಿಯ ಅಧಿಕಾರಿಗಳಾದ, ನೌಕಾ ಕಾರ್ಯಾಚರಣೆಯ ಮುಖ್ಯಸ್ಥೆಯಾದ ಮೊದಲ ಮಹಿಳೆ ಅಡ್ಮ್ ಫ್ರಾಂಚೆಟ್ಟಿ ಹಾಗೂ ವಾಯುಪಡೆಯ ಮುಖ್ಯಸ್ಥ ಜನರಲ್ ಜಿಮ್ ಸ್ಲೈಫ್ ಅವರನ್ನೂ ವಜಾಗೊಳುಸಿರುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಘೋಷಿಸಿದ್ದಾರೆ. ಇವರೆಲ್ಲ ಮಾಜಿ ಅಧ್ಯಕ್ಷ ಬೈಡೆನ್ ಅವಧಿಯಲ್ಲಿ ನೇಮಕಗೊಂಡದ್ದು ಗಮನಾರ್ಹ.
ಇದನ್ನೂ ಓದಿ: ಬಾಂಗ್ಲಾಕ್ಕಷ್ಟೇ ಅಲ್ಲ, ಭಾರತಕ್ಕೂ 180 ಕೋಟಿ ರೂ. ಹಣ, ಟ್ರಂಪ್ ಹೇಳಿಕೆ ಬೆನ್ನಲ್ಲೇ ಕೇಂದ್ರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್!
