ನವದೆಹಲಿ (ಜೂ.12) 'ಸುಮ್ಮನೆ ಇರಲಾರದವರು ಇರುವೆ ಬಿಟ್ಟುಕೊಂಡರು' ಎಂಬ ಗಾದೆಯಂತಾಗಿದೆ ಪಾಕಿಸ್ತಾನದ ಸ್ಥಿತಿ. ಲಾಕ್ ಡೌನ್ ಸಂದರ್ಭ ಬಡ ಜನರಿಗೆ ಹೇಗೆ ಹಣ ವರ್ಗಾವಣೆ ಮಾಡಿದೆವು ಎಂಬುದನ್ನು ಬೇಕಾದರೆ ಹೇಳಿ ಕೊಡುತ್ತೇವೆ ಎಂದು ಪಾಕಿಸ್ತಾನ ಭಾರತದ ಮುಂದೆಯೇ ಆಫರ್ ಇಟ್ಟಿದೆ!

ಬಡ ಜನತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಭಾರತ ಬಯಸಿದರೆ ಈ ಯೋಜನೆಯ ಅನುಷ್ಠಾನ ಹೇಗೆಂಬುದರ ಕುರಿತು ತಾವು ಮಾಹಿತಿ ಹಂಚಿಕೊಳ್ಳಲು ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಟ್ವೀಟ್ ಭಿನ್ನ-ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಮೋದಿ ಇಪ್ಪತ್ತು ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್, ಯಾರಿಗೆ ಎಷ್ಟು?

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ,  ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಪಾಕಿಸ್ತಾನ ದೇಶದ ಹೊರಗೆ ಅಕ್ರಮವಾಗಿ ಹಣ ಸಾಗಾಟ ಮಾಡುವುದರಲ್ಲಿ ಭಾರೀ ನಿಪುಣ, ಜನರಿಗೆ ಸಹಾಯ ನೀಡಲು ಅಲ್ಲ ಎಂದಿದ್ದಾರೆ.

ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿರುವ ಇಮ್ರಾನ್ ಖಾನ್  ಒಬ್ಬರು ಹೊಸ ಸಲಹೆಗಾರರನ್ನು ಇಟ್ಟುಕೊಳ್ಳುವುದು  ಒಳ್ಳೆಯದು. ಭಾರತದ ವಿಶೇಷ ಆರ್ಥಿಕ ಪ್ಯಾಕೇಜ್ ಪಾಕಿಸ್ತಾನದ ಜಿಡಿಪಿಗಿಂತ ದೊಡ್ಡದು ಎಂಬುದು ಅವರಿಗೆ ಗೊತ್ತಿಲ್ಲವೆನೋ ಎಂದು ವ್ಯಂಗ್ಯವಾಡಿದ್ದಾರೆ.