Asianet Suvarna News Asianet Suvarna News

IPT: ಕೀನ್ಯಾದಲ್ಲಿ ಭಾರತದಿಂದ ವಿದ್ಯುತ್‌ ಮಾರ್ಗ ನಿರ್ಮಾಣ!

* ಭಾರತದ ಪವರ್‌ಗ್ರಿಡ್‌, ‘ಆಫ್ರಿಕಾ 50 ಒಡಂಬಡಿಕೆ

* ಕೀನ್ಯಾದಲ್ಲಿ ಭಾರತದಿಂದ ವಿದ್ಯುತ್‌ ಮಾರ್ಗ ನಿರ್ಮಾಣ

India POWERGRID to set up first Independent Power Transmission in Kenya pod
Author
Bangalore, First Published Jan 18, 2022, 7:46 AM IST

ಗುರುಗ್ರಾಮ(ಜ.18): ಭಾರತದ ಪವರ್‌ ಗ್ರಿಡ್‌ ಕಾರ್ಪೊರೇಶನ್‌ ಹಾಗೂ ಆಫ್ರಿಕನ್‌ ಮೂಲಸೌಕರ್ಯ ಅಭಿವೃದ್ಧಿ ವೇದಿಕೆಯಾದ ‘ಆಫ್ರಿಕಾ50’, ಕೀನ್ಯಾದಲ್ಲಿ ವಿದ್ಯುತ್‌ ಪ್ರಸರಣ ಮಾರ್ಗ ಅಭಿವೃದ್ಧಿಗಾಗಿ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಯೋಜನೆಯು ವಿದ್ಯುತ್‌ ಪ್ರಸರಣ ಮಾರ್ಗಗಳನ್ನು ಲೆಸ್ಸೊಸ್‌-ಲುಸುಕ್‌ (400 ಕಿಲೋ ವ್ಯಾಟ್‌) ಹಾಗೂ ಕಿಸುಮು-ಮುಸುಗಾ (220 ಕಿಲೋವ್ಯಾಟ್‌)ನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿಯಲ್ಲಿ ನಿರ್ಮಾಣ ಮಾಡಲಿದ್ದು, ಅದರ ಹಣಕಾಸು, ಅಭಿವೃದ್ಧಿ, ನಿರ್ವಹಣೆಯ ಕಾರ್ಯವನ್ನು ಒಳಗೊಂಡಿದೆ. ಈ ಅಭಿವೃದ್ಧಿ ಪಾಲುಗಾರಿಕೆಯಲ್ಲಿ ವಿಶ್ವದ ಪ್ರಮುಖ ವಿದ್ಯುತ್‌ ಪ್ರಸರಣ ಕಂಪನಿಯಾದ ಪವರ್‌ ಗ್ರಿಡ್‌ ತಂತ್ರಜ್ಞಾನ ಹಾಗೂ ಕಾರ್ಯಚರಣೆಯಲ್ಲಿ ನೆರವು ನೀಡಲಿದೆ ಅದೇ ಆಫ್ರಿಕಾ 50 ಕೀನ್ಯಾ ಸರ್ಕಾರ ಹಾಗೂ ಖಾಸಗಿ ಹೂಡಿಕೆದಾರರೊಂದಿಗೆ ಸಮನ್ವಯ ಸಾಧಿಸಿ ಯೋಜನೆಯ ಅಭಿವೃದ್ಧಿ ಹಾಗೂ ಹಣಕಾಸಿನ ಜವಾಬ್ದಾರಿ ವಹಿಸಿಕೊಳ್ಳಲಿದೆ.

ಈ ಯೋಜನೆಯಿಂದ ಕೀನ್ಯಾ ತನ್ನ ಮೊದಲ ಸ್ವತಂತ್ರ ವಿದ್ಯುತ್‌ ಪ್ರಸರಣ ಘಟಕವನ್ನು ಹೊಂದಲಿದೆ. ಇದರಿಂದ ಪಶ್ಚಿಮ ಕೀನ್ಯಾದಲ್ಲಿ ವಿದ್ಯುತ್‌ ಪ್ರಸರಣದ ಪೂರೈಕೆ ಹಾಗೂ ವಿಶ್ವಾಸಾರ್ಹತೆಯನ್ನು ಸುಧಾರಿಸಲಿದೆ. ಖಾಸಗಿ ವಲಯದ ಹೂಡಿಕೆಯ ಮುಖಾಂತರ ಆಫ್ರಿಕಾದ ವಿದ್ಯುತ್‌ ಪ್ರಸರಣ ಜಾಲವನ್ನು ವಿಸ್ತರಿಸಲು ನೆರವಾಗುವುಕ್ಕೆ ಈ ಯೋಜನೆ ಉತ್ತಮ ನಿದರ್ಶನವಾಗಲಿದೆ ಎನ್ನಲಾಗಿದೆ.

Follow Us:
Download App:
  • android
  • ios