ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಿಂದ ಪಲಾಯನ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ. 

ಕರಾಚಿ (ಮೇ.10): ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಿಂದ ಪಲಾಯನ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ. ಅನೇಕ ವರ್ಷಗಳಿಂದ ಪಾಕಿಸ್ತಾನದ ಕರಾಚಿ ನಗರದಲ್ಲಿ ದಾವೂದ್ ಇಬ್ರಾಹಿಂ, ಅವನ ವಿಶೇಷ ಸಹಾಯಕರಾದ ಚೋಟಾ ಶಕೀಲ್ ಮತ್ತು ಮುನ್ನಾ ಜಿಂಗ್ರಾರನ್ನು ಪಾಕ್‌ ಅಡಗಿಸಿಟ್ಟಿದೆ. 

ಆದರೆ ಕರಾಚಿ ಮೇಲೆಯೇ ಭಾರತ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ಮಾಡಿದ ಕಾರಣ, ಮೂಲಗಳು ಹೇಳುವಂತೆ ಮೂವರೂ ಪ್ರಸ್ತುತ ಪಾಕಿಸ್ತಾನವನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ. ಆದಾಗ್ಯೂ ಏಜೆನ್ಸಿ ಮೂಲಗಳು ಈ ಮಾಹಿತಿಯ ಮೇಲೆ ನಿಗಾ ಇಡುತ್ತಿವೆ ಮತ್ತು ದಾವೂದ್ ಮತ್ತು ಅವನ ಬೆಂಬಲಿಗರು ಪಾಕಿಸ್ತಾನದಲ್ಲೇ ಬೇರೆಡೆ ಇರಬಹುದು ಎಂದು ಊಹಿಸುತ್ತಿದ್ದಾರೆ ಮತ್ತು ದಾರಿ ತಪ್ಪಿಸಲು ಇಂತಹ ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದು ಹೇಳಿವೆ.

ಶೆಹಬಾಜ್‌ ಬಂಕರ್‌ಗೆ ಶಿಫ್ಟ್‌: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧಿಕೃತ ನಿವಾಸದಿಂದ 20 ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲದೆ, ಭಾರತವು ಇಸ್ಲಾಮಾಬಾದ್‌ ಮೇಲೆ ವಾಯುದಾಳಿ ನಡೆಸಿದೆ. ಹೀಗಾಗಿ ಷರೀಫ್‌ ಅವರನ್ನು ಸುರಕ್ಷಿತವಾಗಿ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳಿವೆ. ಇಸ್ಲಾಮಾಬಾದ್‌ನ ಹೈ-ಸೆಕ್ಯುರಿಟಿ ವಲಯಗಳ ಬಳಿ ಸ್ಫೋಟಗಳು ವರದಿಯಾದ ನಂತರ ಪ್ರಧಾನಿ ಷರೀಫ್, ಸೇನಾ ಮುಖ್ಯಸ್ಥ ಅಸೀಂ ಮುನೀರ್‌, ಸಚಿವರು ಹಾಗೂ ಪ್ರಮುಖ ಸೇನಾಧಿಕಾರಿಗಳು ಸೇರಿದಂತೆ ಪ್ರಮುಖ ಸರ್ಕಾರಿ ವ್ಯಕ್ತಿಗಳ ಸುತ್ತ ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ತೀವ್ರಗೊಳಿಸಲಾಗಿದೆ.

ರಾತ್ರಿಯಿಡೀ ಪಾಕಿಸ್ತಾನ ದಾಳಿ: 3 ಬಲಿ, 6 ಮಂದಿಗೆ ಗಾಯ, ಕಣಿವೆ ರಾಜ್ಯ ಉದ್ವಿಗ್ನ

ಪ್ರಧಾನಿಯವರ ಪ್ರಸ್ತುತ ಸ್ಥಳದ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಸಂಭವನೀಯ ಪ್ರತೀಕಾರದ ಕ್ರಮಗಳು ಅಥವಾ ಸ್ಥಿತಿ ಬಿಗಡಾಯಿಸುವ ಭೀತಿಯಿಂದ ದೃಷ್ಟಿಯಿಂದ ಮುನ್ನೆಚ್ಚರಿಕೆ ಪ್ರೋಟೋಕಾಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ.