ಪ್ಯಾಲೆಸ್ತಿನ್ ರಾಯಭಾರ ಅಧಿಕಾರಿ ಭೇಟಿಯಾಗಿ ಬೆಂಬಲ ಘೋಷಿಸಿದ ವಿಪಕ್ಷ ಸಂಸದರು!
ಹಮಾಸ್ ಉಗ್ರು ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಭಾರತ ಖಂಡಿಸಿದೆ. ಇತ್ತ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಿಸಿದೆ. ಇದೀಗ ವಿಪಕ್ಷಗಳ ಸಂಸದರು ದೆಹಲಿಯಲ್ಲಿ ಪ್ಯಾಲೆಸ್ತಿನ್ ರಾಯಭಾರ ಅಧಿಕಾರಿ ಭೇಟಿಯಾಗಿ ಬೆಂಬಲ ಘೋಷಿಸಿದ್ದಾರೆ.
ನವದೆಹಲಿ(ಅ.16) ಇಸ್ರೇಲ್ ಮೇಲೆ ನಡೆಸಿದ ಹಮಾಸ್ ಉಗ್ರ ಭೀಕರ ದಾಳಿ, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಉಗ್ರರ ಅಡಗುತಾಣ ಗಾಜಾ ಮೇಲೆ ನಡೆಸುತ್ತಿರುವ ಪ್ರತಿದಾಳಿಯಿಂದ ಕೆಲ ದೇಶಗಳು ಇಕ್ಕಟ್ಟಿಗೆ ಸಿಲುಕಿದೆ. ಮತ್ತೆ ಕೆಲ ದೇಶಗಳು ತಮ್ಮ ತಮ್ಮೊಳಗೆ ಬೆಂಬಲ ವಿಚಾರದಲ್ಲಿ ಬಡಿದಾಡಿಕೊಳ್ಳುತ್ತಿದೆ. ಹಮಾಸ್ ಉಗ್ರರ ದಾಳಿಯನ್ನು ಭಾರತ ಸರ್ಕಾರ ಖಂಡಿಸಿ ಇಸ್ರೇಲ್‌ಗೆ ಬೆಂಬಲ ನೀಡಿತ್ತು. ಇತ್ತ ಕಾಂಗ್ರೆಸ್ ಸೇರಿದಂತೆ ವಿಪತ್ರಗಳು ಪ್ಯಾಲೆಸ್ತಿನ್‌ಗೆ ಬೆಂಬಲ ಘೋಷಣೆ ಮಾಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ವಿಪಕ್ಷಗಳು ನವದೆಹಲಿಯಲ್ಲಿ ಪ್ಯಾಲೆಸ್ತಿನ್ ರಾಯಭಾರ ಅದಿಕಾರಿಗಳನ್ನು ಭೇಟಿಯಾಗಿ ಬೆಂಬಲ ಘೋಷಿಸಿದೆ.
ಪಾಲೆಸ್ತಿನ್ ಬೆಂಬಲ ವಿಚಾರವಾಗಿ ವಿಪಕ್ಷಗಳು ಒಗ್ಗಟ್ಟಾಗಿದೆ. ಭಾರತ ಒಕ್ಕೊರಲ ಧ್ವನಿಯಿಂದ ಪ್ಯಾಲೆಸ್ತಿನ್ ಬೆಂಬಲ ನೀಡುತ್ತಿದೆ ಎಂಬುದನ್ನು ತೋರ್ಪಡಿಸಲು ಇಂದು ವಿಪಕ್ಷಗಳು ಸಂಸದರು ರಾಯಭಾರ ಕಚೇರಿಗೆ ಭೇಟಿ ನೀಡಿತ್ತು. ಸಾಂಪ್ರದಾಯಿಕವಾಗಿ ಭಾರತ ಪ್ಯಾಲೆಸ್ತಿನ್ ಜೊತೆ ಉತ್ತಮ ಸಂಬಂಧ ಹೊಂದಿದೆ. ಮಹಾತ್ಮಾಗಾಂಧಿಯಿಂದ ಹಿಡಿದು ಹಲವು ನಾಯಕರು ಪ್ಯಾಲೆಸ್ತಿನ್ ವಿಚಾರದಲ್ಲಿ ನಿಲುವು ವ್ಯಕ್ತಪಡಿಸಿ ಬೆಂಬಲ ನೀಡಿದ್ದರು. ಇದೀಗ ಇಸ್ರೇಲ್ ದಾಳಿ ಖಂಡಿಸುತ್ತಾ ಪ್ಯಾಲೆಸ್ತಿನ್ ಹಕ್ಕಗಳು ಪುನರ್ ಸ್ಥಾಪನೆಗೆ ವಿಪಕ್ಷಗಳು ಒತ್ತಾಯಿಸಲಿದೆ. ಹೀಗಾಗಿ ಸಂಸದರು ಇಂದು ಪ್ಯಾಲೆಸ್ತಿನ್ ಅಧಿಕಾರಿಯನ್ನು ಭೇಟಿಯಾಗಿ ಒಗ್ಗಟ್ಟು ಪ್ರದರ್ಶಿಸಲು ಆಗಮಿಸಿದ್ದೇವೆ ಎಂದು ರಾಜ್ಯಸಭಾ ಸಂಸದ ಜಾವೇದ್ ಆಲಿ ಖಾನ್ ಹೇಳಿದ್ದಾರೆ.
ಇಸ್ರೇಲ್ ದಾಳಿಗೆ ಕಂಗಾಲಾದ ಹಮಾಸ್, ಏರ್‌ಸ್ಟ್ರೈಕ್ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ ಸೂತ್ರ!
ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ವಿಶ್ವಸಂಸ್ಥೆ ನಿಯಮ ಉಲ್ಲಂಘನೆಯಾಗಿದೆ. ಪ್ಯಾಲೆಸ್ತಿನ್ ನಾಗರೀಕರಿಗೆ ತಮ್ಮ ದೇಶ ಪಡೆಯುವ ಹಕ್ಕಿದೆ. ತಮ್ಮ ದೇಶದಲ್ಲಿ ನೆಮ್ಮದಿಯ ಜೀವನ ಸಾಗಿಸು ಹಕ್ಕಿದೆ. ಆದರೆ ಇಸ್ರೇಲ್ ದಾಳಿ ಮೂಲಕ ಪ್ಯಾಲೆಸ್ತಿನಿಯರ ಎಲ್ಲಾ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಲೋಕದಳ ಸಂಸದ ಶಾಹಿದಿ ಸಿದ್ದಿಕಿ ಹೇಳಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ನಡೆಸಿರುವುದು ಮಾರಣಹೋಮ. ಗಾಜಾ ಪಟ್ಟಿ ಮೇಲೆ ನಿರಂತರವಾಗಿ ದಾಳಿ ನಡೆಸುವ ಮೂಲಕ ಅಮಾಯಕ ಪ್ಯಾಲೆಸ್ತಿನ್ ನಾಗರೀಕರು ಬಲಿಯಾಗಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶ ಇಸ್ರೇಲ್ ಮುಂದಿತ್ತು. ಆದರೆ ಇಸ್ರೇಲ್ ನರಮೇಧದ ದಾರಿ ಆಯ್ಕೆ ಮಾಡಿಕೊಂಡಿದೆ. ಇದನ್ನು ವಿಪಕ್ಷಗಳು ಒಪ್ಪುವುದಿಲ್ಲ ಎಂದು ಸಿಪಿಎಂ ಮುಖ್ಯ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಭಾರತ ಮೂಲದ 2 ಇಸ್ರೇಲಿ ಮಹಿಳಾ ಯೋಧರ ಸಾವು