Asianet Suvarna News Asianet Suvarna News

'ಜಗತ್ತಲ್ಲೇ ಅತಿಹೆಚ್ಚು ಮುಸ್ಲಿಮರಿರುವ ದೇಶವಾಗಲಿದೆ ಭಾರತ, ಹಿಂದೂಗಳೇ ಬಹುಸಂಖ್ಯಾತರು'!

* ಭಾರತ ಧರ್ಮ ಸಹಿಷ್ಣು ದೇಶ: ಸಮೀಕ್ಷೆ

* ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ

* ಅಮೆರಿಕದ ‘ಪ್ಯೂ’ ಚಿಂತಕರ ಚಾವಡಿ ಅಭಿಮತ

* ಜಗತ್ತಲ್ಲೇ ಅತಿಹೆಚ್ಚು ಮುಸ್ಲಿಮರಿರುವ ದೇಶವಾಗಲಿದೆ ಭಾರತ, ಆದರೂ ಹಿಂದುಗಳೇ ಬಹುಸಂಖ್ಯಾತರು

India is a religion tolerant country Key findings of Survey by Pew pod
Author
Bangalore, First Published Aug 22, 2021, 7:56 AM IST

ನವದೆಹಲಿ(ಆ.22): ದೇಶದಲ್ಲಿನ ಧಾರ್ಮಿಕ ಸಹಿಷ್ಣುತೆ ಬಗ್ಗೆ ಆಗಾಗ್ಗೆ ಅಪಸ್ವರಗಳು ಏಳುತ್ತಿರುವ ಹೊತ್ತಿನಲ್ಲಿಯೇ, ಭಾರತೀಯರು ಧರ್ಮ ಸಹಿಷ್ಣುಗಳಾಗಿದ್ದಾರೆ. ಇತರ ಧರ್ಮಗಳನ್ನು ಗೌರವಿಸುತ್ತಾರೆ. ಇತರ ಧರ್ಮಗಳನ್ನು ಗೌರವಿಸುವುದು ಭಾರತೀಯ ತತ್ವಗಳ ಮೂಲವಾಗಿದೆ. ಭಾರತದಲ್ಲಿನ ಎಲ್ಲ ಧರ್ಮೀಯರು ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ ಎಂದು ಅಮೆರಿಕದ ಚಿಂತಕರ ಚಾವಡಿ ‘ಪ್ಯೂ’ ತನ್ನ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ಹೇಳಿದೆ.

ಭಾರತದಲ್ಲಿರುವ 6 ಪ್ರಮುಖ ಧರ್ಮಗಳಾದ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್‌ ಹಾಗೂ ಬೌದ್ಧರು ತಾವು ಭಾರತದಲ್ಲಿ ಸಾಕಷ್ಟುಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ಅಯೋಧ್ಯೆಯ ಗ್ರಾಮದಲ್ಲಿ ಗೆಲುವಿನ ನಗೆ ಬೀರಿದ ಮುಸ್ಲಿಂ ಅಭ್ಯರ್ಥಿ!

ಇದೇ ವೇಳೆ, ಕ್ರೈಸ್ತ ಧರ್ಮವು ಈಗಲೂ ದೊಡ್ಡ ಧರ್ಮವಾಗಿಯೇ ವಿಶ್ವದಲ್ಲಿ ಉಳಿದಿದೆ. ಆದರೆ ಇಸ್ಲಾಂ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿದೆ. 2050ರಲ್ಲಿ ಕ್ರೈಸ್ತರ ಜನಸಂಖ್ಯೆ ಹಾಗೂ ಮುಸ್ಲಿಮರ ಜನಸಂಖ್ಯೆ ಒಂದೇ ಆಗುತ್ತದೆ. (ತಲಾ ಸುಮಾರು 30%). ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಇನ್ನೆಲ್ಲಾ ಧರ್ಮದ ಜನಸಂಖ್ಯೆಗಿಂತ ವೇಗವಾಗಿ ಬೆಳೆದು, ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಮುಸ್ಲಿಮರಿರುವ ದೇಶ (ಈಗ ಇಂಡೋನೇಷ್ಯಾ) ಆಗಲಿದೆ. ಆಗಲೂ ಭಾರತದಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿರುತ್ತಾರೆ ಎಂದೂ ಅದು ವಿವರಿಸಿದೆ.

2019 ಹಾಗೂ 2020ರಲ್ಲಿ 29,999 ವಿವಿಧ ಧರ್ಮದ, 17 ಭಾಷೆಗಳ ಹಾಗೂ ವಿವಿಧ ವಯಸ್ಸಿನ ಜನರನ್ನು ಭಾರತದಲ್ಲಿ ಸಂದರ್ಶಿಸಿ ಈ ಅಧ್ಯಯನ ನಡೆಸಲಾಗಿದೆ.

ನನ್ನ ಭಾರತ: ದೇಗುಲ ರಕ್ಷಿಸಿದ ಮುಸಲ್ಮಾನರು, ಮಸೀದಿಗೆ ಕಾವಲು ನಿಂತ ಹಿಂದೂಗಳು!

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ:

ಭಾರತದಲ್ಲಿ ತಾವು ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದು ಸಂದರ್ಶನಕ್ಕೆ ಒಳಪಟ್ಟಹಿಂದೂ, ಬೌದ್ಧ, ಸಿಖ್‌, ಮುಸ್ಲಿಂ, ಕ್ರೈಸ್ತ ಹಾಗೂ ಜೈನರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಎಲ್ಲ ರ್ಮದ ಜನರು ಪ್ರತ್ಯೇಕವಾಗಿ ವಾಸಿಸಲು ಬಯಸುತ್ತೇವೆ ಎಂದಿದ್ದಾರೆ. ಇದೇ ವೇಳೆ ಭವಿಷ್ಯದಲ್ಲಿ ಭಾರತದಲ್ಲಿ ಇತರೆ ಧರ್ಮಗಳ ಜನರ ಸಂಖ್ಯೆ ಹೆಚ್ಚಾದರೂ, ಹಿಂದೂಗಳೇ ಪ್ರಮುಖ ಧರ್ಮೀಯರಾಗಿ ಉಳಿಯಲಿದ್ದಾರೆ ಎಂದು ವರದಿ ಹೇಳಿದೆ.

ಸಮೀಕ್ಷೆ ಏನನ್ನುತ್ತದೆ?

97% ಭಾರತೀಯರು ತಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ ಎನ್ನುತ್ತಾರೆ

72% ಹಿಂದೂಗಳು ಗೋಮಾಂಸ ತಿನ್ನುವವರು ಹಿಂದೂಗಳಲ್ಲ ಎನ್ನುತ್ತಾರೆ

66% ಹಿಂದೂಗಳು ಅಂತರ್‌ ಧರ್ಮಿಯ ವಿವಾಹ ವಿರೋಧಿಸಿದ್ದಾರೆ

78% ಭಾರತೀಯ ಮುಸ್ಲಿಮರು ಅಂತರ್‌ ಧರ್ಮೀಯ ವಿವಾಹಕ್ಕೆ ವಿರುದ್ಧ

74% ಭಾರತೀಯ ಮುಸ್ಲಿಮರು ಧಾರ್ಮಿಕ ಕೋರ್ಟ್‌ ಬೇಕೆಂದಿದ್ದಾರೆ

95% ಹಿಂದೂಗಳು ದೀಪಾವಳಿಯೇ ತಮಗೆ ದೊಡ್ಡ ಹಬ್ಬ ಎಂದಿದ್ದಾರೆ

ಅಷ್ಘಾನಿಸ್ತಾನದಲ್ಲೂ ಸಮೀಕ್ಷೆ ನಡೆಸಿತ್ತು

ಈ ಹಿಂದೆ ಅಷ್ಘಾನಿಸ್ತಾನದಲ್ಲೂ ‘ಪ್ಯೂ’ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಶೇ.99ರಷ್ಟುಜನರು ಶರಿಯಾ ಕಾನೂನು ಜಾರಿಗೆ ಒಲವು ವ್ಯಕ್ತಪಡಿಸಿದ್ದರು. ಶೇ.99 ಜನರು ಇತರರನ್ನು ಇಸ್ಲಾಂಗೆ ಮತಾಂತರ ಮಾಡುವುದು ತಮ್ಮ ಕರ್ತವ್ಯ ಅಂದಿದ್ದರು. ಶೇ.94 ಜನರು ಪತಿಯ ಮಾತನ್ನು ಪಾಲಿಸುವುದು ಪತ್ನಿಯ ಧರ್ಮ ಎಂದಿದ್ದರು. ಶೇ.85 ಜನರು ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವುದೇ ಸರಿ ಅಂದಿದ್ದರು. ಈಗ ತಾಲಿಬಾನ್‌ ಉಗ್ರರು ಇದೇ ಶರಿಯಾ ಕಾನೂನು ಜಾರಿಗೆ ತಂದಿದ್ದಾರೆ.

ಅಧ್ಯಯನದ ಅಂದಾಜುಗಳು

- ವಿಶ್ವದಲ್ಲಿ ವಿವಿಧ ಧರ್ಮಗಳ ಜನಸಂಖ್ಯೆ ಏರುಪೇರಾಗುತ್ತಿದೆ. ಈಗಿನ ಮಟ್ಟಿಗೆ ಕ್ರೈಸ್ತ ಧರ್ಮವೇ ವಿಶ್ವದ ಅತಿದೊಡ್ಡ ಧರ್ಮ.

- 2050ರಲ್ಲಿ ಮುಸ್ಲಿಮರ ಸಂಖ್ಯೆ 280 ಕೋಟಿ (ವಿಶ್ವದ ಜನಸಂಖ್ಯೆಯ ಶೇ.30) ಹಾಗೂ ಕ್ರೈಸ್ತರ ಜನಸಂಖ್ಯೆ 290 ಕೋಟಿ (ಶೇ.31) ಆಗಬಹುದು. ಇದು ಇತಿಹಾಸದಲ್ಲೇ ಮೊದಲು.

- ನಾಸ್ತಿಕರ ಸಂಖ್ಯೆ ಅಮೆರಿಕ, ಫ್ರಾನ್ಸ್‌ ನಂಥ ದೇಶಗಳಲ್ಲಿ ಹೆಚ್ಚು. ಆದರೆ ವಿಶ್ವದ ವಿವಿಧ ದೇಶಗಳಲ್ಲಿ ಒಟ್ಟಾರೆ ಸಂಖ್ಯೆ ಕುಸಿಯತೊಡಗಿದೆ.

- ಯುರೋಪ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಒಟ್ಟಾರೆ ಜನಸಂಖ್ಯೆಯಲ್ಲಿ ಇನ್ನು ಮುಂದೆ ಶೇ.10ರಷ್ಟಾಗಲಿದೆ.

- ಅಮೆರಿಕದಲ್ಲಿ ಕ್ರೈಸ್ತರ ಜನಸಂಖ್ಯೆ 2010ರಲ್ಲಿನ ಶೇ.75ರಿಂದ 2050ರಲ್ಲಿ ಶೇ.66ಕ್ಕೆ ಕುಸಿಯಬಹುದು.

- ಬೌದ್ಧರ ಜನಸಂಖ್ಯೆ 2010ರಲ್ಲಿ ಇದ್ದಷ್ಟೇ ಇದೆ. ಆದರೆ ಮುಂದೆ ಹಿಂದೂ ಹಾಗೂ ಯೆಹೂದಿಗಳ ಜನಸಂಖ್ಯೆ ಏರಲಿದೆ.

- ಚೀನಾ, ಥಾಯ್ಲೆಂಡ್‌ ಹಾಗೂ ಜಪಾನ್‌ನಲ್ಲಿ ವೃದ್ಧರ ಹೆಚ್ಚು ಸಾವು ಹಾಗೂ ಜನನ ಪ್ರಮಾಣ ಕುಸಿತದಿಂದ ಬೌದ್ಧ ಧರ್ಮದ ಜನಸಂಖ್ಯೆ ಏರಿಕೆ ಆಗದೇ ಹೋಗಬಹುದು.

Follow Us:
Download App:
  • android
  • ios