ಚಾಬಹಾರ್‌ ಬಂದರು ನಿರ್ವಹಣೆಗೆ ಭಾರತ- ಇರಾನ್‌ ಒಪ್ಪಂದಕ್ಕೆ ಸಹಿ

ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್‌ನ ಚಾಬಹಾರ್‌ ಬಂದರಿನ ಒಂದು ಟರ್ಮಿನಲ್‌ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್‌ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ. 

India Iran signed an agreement to manage Chabahar port akb

ನವದೆಹಲಿ: ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್‌ನ ಚಾಬಹಾರ್‌ ಬಂದರಿನ ಒಂದು ಟರ್ಮಿನಲ್‌ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್‌ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ. ವಿದೇಶದಲ್ಲಿರುವ ಬಂದರಿನ ನಿರ್ವಹಣೆಗೆ ಭಾರತ ಮುಂದಾದ ಮೊದಲ ಘಟನೆ ಇದಾಗಿದೆ.

ಈ ಒಪ್ಪಂದವು ಪ್ರಾಂತೀಯ ಸಂಪರ್ಕ ಮತ್ತು ವ್ಯಾಪಾರಕ್ಕೆ ಬಹುದೊಡ್ಡ ಕಾಣಿಕೆ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಪಾಕಿಸ್ತಾನವನ್ನು ಸಂಪರ್ಕಿಸದೆಯೇ ಭಾರತ-ಇರಾನ್‌- ಆಫ್ಘಾನಿಸ್ತಾನ ನಡುವಣ ವ್ಯಾಪಾರ ವಹಿವಾಟಿಗೆ ಹೊಸ ಮಾರ್ಗವನ್ನೂ ತೆರೆಯಲಿದೆ. ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್‌ ಸಮ್ಮುಖದಲ್ಲಿ ಶಹೀದ್‌- ಬೆಹೆಷ್ತಿ ಬಂದರು ನಿರ್ವಹಣೆಗಾಗಿ ಭಾರತದ ಇಂಡಿಯನ್‌ ಪೋರ್ಟ್ಸ್‌ ಗ್ಲೋಬಲ್‌ ಲಿ ಹಾಗೂ ಇರಾನ್‌ನ ಪೋರ್ಟ್‌ ಆ್ಯಂಡ್‌ ಮಾರಿಟೈಮ್ ಆರ್ಗನೈಸೇಷನ್‌ ಒಪ್ಪಂದಕ್ಕೆ ಸಹಿ ಹಾಕಿವೆ.

ಅರಬ್ಬಿ ಸಮುದ್ರದಲ್ಲಿ ಭರ್ಜರಿ ಕಾರ್ಯಾಚರಣೆ : ಏಕಕಾಲಕ್ಕೆ 2000 ಕೋಟಿ ಮೌಲ್ಯದ 3300 ಕೇಜಿ ಡ್ರಗ್ಸ್‌ ವಶ

ಸಿಗಲಿದೆ ಚಾಬಹರ್ ಬಂದರು: ಹೆದ್ರೋ ಮಾತೇ ಇಲ್ಲ ಪಾಕ್, ಚೀನಾ ಬಂದ್ರೂ!

Latest Videos
Follow Us:
Download App:
  • android
  • ios