ಭಾರತೀನಗರ(ಜ.28): ಗುರುದೇವರಹಳ್ಳಿಯಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಜೋಡಿಎತ್ತಿನ ಗಾಡಿ ಓಟದ ಸ್ಪರ್ಧೆ ಜರುಗಿತು. ಸ್ಪರ್ಧೆಯಲ್ಲಿ 46 ಜೋಡಿ ಎತ್ತುಗಳು ಭಾಗವಹಿಸಿದ್ದರು. ಜೋಡಿ ಎತ್ತುಗಳ ಓಟ ಎಲ್ಲರನ್ನು ರೋಮಾಂಚನಗೊಳಿಸಿದವು.

ಈ ಮಿಂಚಿನ ಓಟವನ್ನು ನೋಡಲು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಾಳುಗಳು ಗೆಲುವಿನ ಗೆರೆ ದಾಟಲು ಚಾಟಿಬೀಸಿ ಮುನ್ನುಗ್ಗುತ್ತಿದ್ದಾಗ ಸೀಟಿ, ಚಪ್ಪಾಳೆ ಸದ್ದುಗಳು ಕೇಳಿಬರುತ್ತಿದ್ದವು. ಮೊಬೈಲ್‌ಗಳಲ್ಲಿ ಗೇಮ್‌ ಆಡುವ ಮೂಲಕ ರೋಚಕತೆಯ ಅನುಭವ ಪಡೆಯುತ್ತಿದ್ದ ನಗರ ಪ್ರದೇಶದ ಯುವಜನರು ಕೆಲ ಯುವಕರು ಎತ್ತಿನ ಗಾಡಿ ಓಟದ ಸ್ಪರ್ಧೆ ಕಂಡು ರೋಮಾಂಚನಗೊಂಡರು.

ಮೈಸೂರು ಮೇಲ್ ಮಂಜು..! ಚಿಲ್ ಎನ್ನುತ್ತಿದೆ ಸಾಂಸ್ಕೃತಿಕ ನಗರ

ಎತ್ತುಗಳ ಓಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂತಸಪಟ್ಟರು. ಈ ಸ್ಪರ್ಧೆಗೆ ಮಂಡ್ಯ ಜಿಲ್ಲೆ ಸೇರಿದಂತೆ ತುಮಕೂರು, ಚಾಮರಾಜನಗರ, ಬೆಂಗಳೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.