Asianet Suvarna News Asianet Suvarna News

ಭಾರತ ಬಳಿ 213 ಅಣುಬಾಂಬ್‌ ತಯಾರಿಸುವಷ್ಟು ಕಚ್ಚಾವಸ್ತು ರೆಡಿ!

ಗಡಿಯಲ್ಲಿ ಪದೇಪದೇ ಚೀನಾ ತಗಾದೆ ತೆಗೆಯುತ್ತಿರುವಾಗಲೇ ಭಾರತ ತನ್ನ ಅಣ್ವಸ್ತ್ರಗಳ ಆಧುನೀಕರಣ ಪ್ರಕ್ರಿಯೆಯನ್ನು ಮುಂದುವರಿಸಿದೆ. 138ರಿಂದ 213 ಅಣುಬಾಂಬ್‌ ತಯಾರಿಸುವಷ್ಟು ಕಚ್ಚಾ ಸಾಮಗ್ರಿಯನ್ನು ಹೊಂದಿದೆ ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟದ ವರದಿ ಹೇಳಿದೆ. 

India has enough raw materials to make 213 nuclear bombs akb
Author
First Published Jan 29, 2023, 10:17 AM IST

ನವದೆಹಲಿ: ಗಡಿಯಲ್ಲಿ ಪದೇಪದೇ ಚೀನಾ ತಗಾದೆ ತೆಗೆಯುತ್ತಿರುವಾಗಲೇ ಭಾರತ ತನ್ನ ಅಣ್ವಸ್ತ್ರಗಳ ಆಧುನೀಕರಣ ಪ್ರಕ್ರಿಯೆಯನ್ನು ಮುಂದುವರಿಸಿದೆ. 138ರಿಂದ 213 ಅಣುಬಾಂಬ್‌ ತಯಾರಿಸುವಷ್ಟು ಕಚ್ಚಾ ಸಾಮಗ್ರಿಯನ್ನು ಹೊಂದಿದೆ ಎಂದು ಅಮೆರಿಕದ ವಿಜ್ಞಾನಿಗಳ ಒಕ್ಕೂಟದ ವರದಿ ಹೇಳಿದೆ. ಈವರೆಗೆ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಭಾರತ ತನ್ನ ಅಣ್ವಸ್ತ್ರ ಶಕ್ತಿ ವರ್ಧಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚೆಗೆ ಚೀನಾದ ಮೇಲೆ ಹೆಚ್ಚು ಗಮನ ನೀಡುತ್ತಿರುವಂತಿದೆ ಎಂದು ಹನ್ಸ್‌ ಎಂ. ಕ್ರಿಸ್ಟನ್‌ಸೆನ್‌ ಹಾಗೂ ಮ್ಯಾಟ್‌ ಕೊರ್ಡಾ ಅವರು ಬರೆದಿರುವ ವರದಿ ಹೇಳುತ್ತದೆ.

700 ಕೇಜಿ (150 ಕೇಜಿ ಹೆಚ್ಚೂಕಡಿಮೆ)ಯಷ್ಟು ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ (weapons grade plutonium) ಅನ್ನು ಭಾರತ ಸೃಷ್ಟಿಸಿಕೊಂಡಿದೆ. ಇದನ್ನು ಬಳಸಿ 138ರಿಂದ 213 ಅಣುಬಾಂಬ್‌ಗಳನ್ನು ತಯಾರಿಸಬಹುದು. ಆದರೆ ಈ ಎಲ್ಲ ಕಚ್ಚಾವಸ್ತುವನ್ನು ಭಾರತ ಬಾಂಬ್‌ ತಯಾರಿಸಲು ಈವರೆಗೆ ಬಳಕೆ ಮಾಡಿಕೊಂಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಭಾರತಕ್ಕೆ ಅಣ್ವಸ್ತ್ರ ದಾಳಿ ಬೆದರಿಕೆ ಒಡ್ಡಿದ ಪಾಕ್‌ ಸಚಿವೆ

ಭಾರತದ ಬಳಿ 8 ವಿವಿಧ ಅಣ್ವಸ್ತ್ರ ಸಾಮರ್ಥ್ಯದ ವ್ಯವಸ್ಥೆಗಳು (nuclear capability systems)ಇವೆ. ಎರಡು ವಿಮಾನ, 4 ನೆಲದಿಂದ ಚಿಮ್ಮುವ ಬ್ಯಾಲಿಸ್ಟಿಕ್‌ ಕ್ಷಿಪಣಿ (ballistic missiles), 2 ಸಮುದ್ರದಿಂದ ಹಾರಿಸಬಹುದಾದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಭಾರತ ಹೊಂದಿದೆ. ಇದಲ್ಲದೆ ಇನ್ನೂ 4 ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಗಿಯುವ ಹಂತಕ್ಕೆ ಬಂದಿದೆ. ಭಾರತದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ದಾಳಿ ಸಾಮರ್ಥ್ಯ ವಲಯದಲ್ಲಿ ಚೀನಾ ಕೂಡ ಇದೆ ಎಂದು ವಿವರಿಸಿದೆ.

ಭಾರತದ ಬಳಿ 160 ಅಣ್ವಸ್ತ್ರ ಸಿಡಿತಲೆಗಳು ಇವೆ. ಹೊಸ ಕ್ಷಿಪಣಿಗಳಿಗೆ ಅಳವಡಿಸಲು ಹೆಚ್ಚುವರಿ ಸಿಡಿತಲೆಗಳು ಬೇಕು. ಪಾಕಿಸ್ತಾನ 165, ಚೀನಾ 350, ಅಮೆರಿಕ 5428 ಹಾಗೂ ರಷ್ಯಾ (Russia)5977 ಸಿಡಿತಲೆಗಳನ್ನು ಇಟ್ಟುಕೊಂಡಿವೆ ಎಂದು ವಿವರಿಸಿದೆ.

ಚೀನಾ, ಪಾಕ್‌ ಮೇಲೆರಗಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ!

Follow Us:
Download App:
  • android
  • ios