* 12 ವರ್ಷದ ಮೇಲ್ಪಟ್ಟ ಎಲ್ಲರಿಗೂ ಈ ಲಸಿಕೆ ನೀಡಬಹುದು* ಇಡೀ ವಿಶ್ವಕ್ಕೇ ಲಸಿಕೆ ನೀಡಲು ಭಾರತ ರೆಡಿ* ಭಾರತದಲ್ಲೇ ಲಸಿಕೆ ಉತ್ಪಾದಿಸಿ: ಜಾಗತಿಕ ಕಂಪನಿಗಳಿಗೆ ಮನವಿ* ಸೇವೆಯೇ ಪರಮ ಧರ್ಮ ಎಂಬುದು ಭಾರತದ ಸಿದ್ಧಾಂತ
ವಿಶ್ವಸಂಸ್ಥೆ(ಸೆ.26): ಭಾರತವು(India) ಕೊರೋನಾ ವೈರಸ್(Coronavirus) ವಿರುದ್ಧದ ವಿಶ್ವದ ಮೊದಲ ಡಿಎನ್‌ಎ ಲಸಿಕೆಯನ್ನು(DNA Vaccine) ಅಭಿವೃದ್ಧಿಪಡಿಸಿದ್ದು, ಅದನ್ನು 12 ವರ್ಷ ಮೇಲ್ಪಟ್ಟಎಲ್ಲರಿಗೂ ನೀಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(narendra Modi) ಅವರು ಹೇಳಿದ್ದಾರೆ. ಅಲ್ಲದೆ, ಭಾರತಕ್ಕೆ ಬಂದು ಭಾರತದಲ್ಲೇ ಲಸಿಕೆ ಉತ್ಪಾದಿಸುವಂತೆ ವಿಶ್ವದ ಔಷಧ ಉತ್ಪಾದಕ ಕಂಪನಿಗಳಿಗೆ ಅವರು ಮುಕ್ತ ಆಹ್ವಾನ ನೀಡಿದ್ದು, ವಿಶ್ವದ ಯಾವುದೇ ದೇಶಗಳ ಪ್ರಜೆಗಳಿಗೆ ಲಸಿಕೆ ಪೂರೈಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಶನಿವಾರ ಸಂಜೆ ವಿಶ್ವಸಂಸ್ಥೆಯ(United nations) ಅಧಿವೇಶನದಲ್ಲಿ ಮಾತನಾಡಿದ ಅವರು, ‘ಸೇವೆಯೇ ಪರಮ ಧರ್ಮ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿರುವ ಭಾರತವು ಲಭ್ಯವಿರುವ ವಿರಳ ಸಂಪನ್ಮೂಲಗಳನ್ನೇ ಕೊರೋನಾ ಲಸಿಕೆಯ(Coronavirus) ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಬಳಸಿಕೊಳ್ಳಲಾಗಿತ್ತು. ತನ್ಮೂಲಕ ಭಾರತವು 12 ವರ್ಷ ಮೇಲ್ಪಟ್ಟಎಲ್ಲರಿಗೂ ನೀಡಬಹುದಾದ ಝೈಡಸ್ ಕ್ಯಾಡಿಲಾ ಸಂಸ್ಥೆಯು ವಿಶ್ವದ ಮೊದಲ ಝೈಕೋವ್-ಡಿ ಹೆಸರಿ ಡಿಎನ್‌ಎ ಲಸಿಕೆಯನ್ನು(DNA vaccine) ಅಭಿವೃದ್ಧಿಪಡಿಸಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಲು ಇಚ್ಛಿಸುತ್ತೇನೆ’ ಎಂದು ಹೇಳಿದರು.
ಅಲ್ಲದೆ ಮೂಗಿನ ಮುಖಾಂತರ ನೀಡಲಾಗುವ ಲಸಿಕೆಯ ಅಭಿವೃದ್ಧಿಯಲ್ಲಿ ನಮ್ಮ ದೇಶದ ವಿಜ್ಞಾನಿಗಳು ಸಕ್ರಿಯವಾಗಿ ತೊಡಗಿದ್ದಾರೆ ಎಂದು ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದಲ್ಲೇ ಲಸಿಕೆ ಉತ್ಪಾದಿಸಲು ಬನ್ನಿ:
ಕೊರೋನಾ ವೈರಸ್‌ಗೆ(Coronavirus) ಬಲಿಯಾದ ಕುಟುಂಬಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ ಅವರು, ವಿಶ್ವದ ಯಾವುದೇ ದೇಶಗಳ ಪ್ರಜೆಗಳಿಗೆ ಲಸಿಕೆ ಪೂರೈಸಲು ಸಿದ್ಧವಿರುವುದಾಗಿ ಹೇಳಿದರು. ಅಲ್ಲದೆ ಭಾರತಕ್ಕೆ ಬಂದು ಭಾರತದಲ್ಲೇ ಲಸಿಕೆ ಉತ್ಪಾದಿಸುವಂತೆ ವಿಶ್ವದ ಔಷಧ ಉತ್ಪಾದಕ ಕಂಪನಿಗಳಿಗೆ ಅವರು ಮುಕ್ತ ಆಹ್ವಾನ ನೀಡಿದರು.
ಭಾರತದಲ್ಲಿರುವ ಹೆಚ್ಚುವರಿ ಲಸಿಕೆಗಳನ್ನು 2021ರ ನಾಲ್ಕನೇ ತ್ರೈಮಾಸಿಕ ಅವಧಿಯಿಂದ ‘ವ್ಯಾಕ್ಸಿನ್ ಮೈತ್ರಿ’ ಅಗತ್ಯವಿರುವ ರಾಷ್ಟ್ರಗಳಿಗೆ ಪೂರೈಸಲಾಗುತ್ತದೆ ಎಂದು ಭರವಸೆ ನೀಡಿದರು.
ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವವೇ 100 ವರ್ಷಗಳಲ್ಲಿ ಕಂಡುಕೇಳರಿಯದ ಸಾಂಕ್ರಮಿಕ ಕೊರೋನಾ ವೈರಸ್‌ಗೆ ತತ್ತರಿಸಿದೆ. ಇಂಥ ಮಹಾಮಾರಿ ವೈರಸ್‌ಗೆ ಬಲಿಯಾದವರಿಗೆ ಗೌರವ ಹಾಗೂ ಸಂತಾಪ ಸೂಚಿಸುವುದಾಗಿ ಹೇಳಿದರು.
