ಭಾರತೀಯರ ಜೊತೆ ಟರ್ಕಿ, ಪಾಕಿಸ್ತಾನಿ ವಿದ್ಯಾರ್ಥಿಗಳನ್ನೂ ರಕ್ಷಿಸಿದ ಭಾರತದ ರಾಷ್ಟ್ರಧ್ವಜ

  • ಭಾರತೀಯ ಧ್ವಜ ಹಿಡಿದು ಪಾರಾದ ಪಾಕ್‌, ಟರ್ಕಿ ವಿದ್ಯಾರ್ಥಿಗಳು
  • ಯುದ್ಧಪೀಡಿತ ಉಕ್ರೇನ್‌ನಲ್ಲಿ ಭಾರತದ ರಾಷ್ಟ್ರಧ್ವಜದ ಪರಾಕ್ರಮ
  • ಉಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬರಲು ತ್ರಿವರ್ಣ ನೆಚ್ಚಿದ ವಿದೇಶಿಗರು
India flag helped Pakistani Turkish students to escape from Ukraine akb

ನವದೆಹಲಿ(ಮಾ.2): ನಮ್ಮ ದೇಶದ ಹೆಮ್ಮೆಯ ರಾಷ್ಟ್ರಧ್ವಜವೀಗ ನಮ್ಮ ದೇಶದ ಪ್ರಜೆಗಳನ್ನು ಮಾತ್ರವಲ್ಲದೇ ಟರ್ಕಿ ದೇಶದ ಹಾಗೂ ಪಕ್ಕದ ಶತ್ರುರಾಷ್ಟ್ರ ಪಾಕಿಸ್ಥಾನದ ವಿದ್ಯಾರ್ಥಿಗಳನ್ನು ಕೂಡ ಯುದ್ಧಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದೆ. ರಷ್ಯಾ ಆಕ್ರಮಣದಿಂದ ಯುದ್ಧ ಪೀಡಿತವಾಗಿರುವ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಆಪರೇಷನ್‌ ಗಂಗಾ ಹೆಸರಿನ ಮೂಲಕ ರಕ್ಷಣೆ ಮಾಡುತ್ತಿದೆ. ಉಕ್ರೇನ್‌ನಲ್ಲಿ ಕೇವಲ ಭಾರತದ ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರಂಪಂಚದ ವಿವಿಧ ದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಎಲ್ಲಾ ದೇಶಗಳು ಭಾರತದಂತೆ ತಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಮುತುವರ್ಜಿ ವಹಿಸಿಲ್ಲ. ಇದರಿಂದಾಗಿ ಹಲವು ದೇಶಗಳ ವಿದ್ಯಾರ್ಥಿಗಳ ಸ್ಥಿತಿ ಅಲ್ಲಿ ಶೋಚನೀಯವಾಗಿದೆ. 

ಈ ಮಧ್ಯೆ ಆಶಾಭಾವ ಮೂಡಿಸಿದ ಹಾಗೂ ಭಾರತೀಯರಾಗಿ ಹೆಮ್ಮೆಪಡುವ ವಿಷಯವೆಂದರೆ ಭಾರತದ ತ್ರಿವರ್ಣ ರಾಷ್ಟ್ರಧ್ವಜ ಕೇವಲ ಭಾರತೀಯರನ್ನು ಮಾತ್ರವಲ್ಲದೇ ಅಲ್ಲಿ ಸಿಲುಕಿರುವ ಟರ್ಕಿ ಹಾಗೂ ಪಾಕಿಸ್ತಾನದ ವಿದ್ಯಾರ್ಥಿಗಳನ್ನು ಕೂಡ ರಕ್ಷಿಸುವಲ್ಲಿ ನೆರವಾಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ದೇಶ ಹಾಗೂ ಪ್ರಪಂಚದಾದ್ಯಂತ ಇರುವ ಭಾರತೀಯರಿಗೆ ನಮ್ಮ ರಾಷ್ಟ್ರಧ್ವಜದ  ಘನತೆ ಏನು ಎನ್ನುವುದು ಈ ಮೂಲಕ ಗೊತ್ತಾಗಿದೆ. ಸ್ವತಃ ಭಾರತೀಯ ವಿದ್ಯಾರ್ಥಿಗಳೇ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

 

ಉಕ್ರೇನ್‌ನಿಂದ ರೊಮೇನಿಯಾದ(Romania) ಬುಕಾರೆಸ್ಟ್ (Bucharest) ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು ನಮ್ಮ ರಾಷ್ಟ್ರೀಯ ತ್ರಿವರ್ಣ ಧ್ವಜವು ನಮಗೆ ಮತ್ತು ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ಹೇಳಿದರು.  ದಕ್ಷಿಣ ಉಕ್ರೇನ್‌ನ(Ukraine) ಒಡೆಸಾದಿಂದ(Odesa) ಆಗಮಿಸಿದ ಮೆಡಿಕಲ್‌ ವಿದ್ಯಾರ್ಥಿಯೊಬ್ಬ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, ಭಾರತೀಯರು ಹಾಗೂ ಭಾರತೀಯ ರಾಷ್ಟ್ರಧ್ವಜವನ್ನು ಹಿಡಿದಿರುವರಿಗೆ ಯಾವುದೇ ತೊಂದರೆಯಾಗದು ಎಂದು ಹೇಳಲಾಗಿತ್ತು. ಹೀಗಾಗಿ ಭಾರತೀಯ ರಾಷ್ಟ್ರಧ್ವಜವನ್ನು ತಯಾರಿಸಲು ತಾವು ಸ್ಪ್ರೇ ಪೈಂಟ್‌ ತಂದು ಭಾರತೀಯ ರಾಷ್ಟ್ರಧ್ವಜವನ್ನು ಹೇಗೆ ತಯಾರಿಸಿದೆವು ಎಂದು ವಿವರಿಸಿದರು.

ಸ್ವಯಂ ಬಾಂಬ್‌ ತಯಾರಿಸಿಟ್ಟುಕೊಂಡ ವೃದ್ಧೆ: ಬರಲಿ ರಷ್ಯಾದವರು ಕಲಿಸುವೆ ಎಂದ ಉಕ್ರೇನ್ ಅಜ್ಜಿ
 

ನಾನು ಮಾರುಕಟ್ಟೆಗೆ ಓಡಿದೆ. ಕೆಲವು ಬಣ್ಣದ ಸ್ಪ್ರೇಗಳನ್ನು ಮತ್ತು ಕರ್ಟನ್‌ ಅನ್ನು ಖರೀದಿಸಿದೆ. ನಂತರ ನಾನು  ಕರ್ಟನ್‌  ಕತ್ತರಿಸಿ ಅದನ್ನು ಭಾರತೀಯ ತ್ರಿವರ್ಣ ಧ್ವಜವನ್ನು ಮಾಡಲು ಸ್ಪ್ರೇ-ಪೇಂಟ್ ಮಾಡಿದೆ. ಇದರ ವಿಡಿಯೋ ಕೂಡ ನನ್ನ ಬಳಿ ಇದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು. ಇದೇ ವೇಳೆ ಭಾರತದ ಧ್ವಜವನ್ನು ಬಳಸಿಕೊಂಡು ಚೆಕ್‌ಪೋಸ್ಟ್‌ಗಳನ್ನು ಹಾದುಹೋದ ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ ಎಂದು ಅವರು ಹೇಳಿದರು. ಟರ್ಕಿ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳೂ ಭಾರತದ ಧ್ವಜವನ್ನು ಬಳಸುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ಉಕ್ರೇನ್‌ನಿಂದ ಮೊಲ್ಡೊವ (Moldova) ದೇಶವನ್ನು ಪ್ರವೇಶಿಸಿದ ಅನುಭವವನ್ನು ಹಂಚಿಕೊಂಡ ಭಾರತೀಯ ವಿದ್ಯಾರ್ಥಿಗಳು  ಮೊಲ್ಡೊವ ನಾಗರಿಕರನ್ನು ತುಂಬಾ ಒಳ್ಳೆಯವರು ಎಂದು ಹೊಗಳಿದರು. ಅವರು ನಮಗೆ ಉಚಿತ ವಸತಿ ಮತ್ತು ಟ್ಯಾಕ್ಸಿಗಳು ಮತ್ತು ರೊಮೇನಿಯಾಗೆ ಹೋಗಲು ಬಸ್ಸುಗಳನ್ನು ಒದಗಿಸಿದರು ಎಂದು ಹೇಳಿದರು. ಭಾರತೀಯ ರಾಯಭಾರ ಕಚೇರಿಯು ಆಗಲೇ ಅಲ್ಲಿ ವ್ಯವಸ್ಥೆಗಳನ್ನು ಮಾಡಿದ್ದರಿಂದ ಮೊಲ್ಡೊವಾದಲ್ಲಿ ನಾವು ಹೆಚ್ಚಿನ ಸಮಸ್ಯೆಯನ್ನು ಎದುರಿಸಲಿಲ್ಲ. ಅಲ್ಲದೇ ಭಾರತಕ್ಕೆ ಹಿಂದಿರುಗುವ ವಿಮಾನಗಳಿಗಾಗಿ ಕಾಯುತ್ತಿರುವಾಗ ಅವರ ಆಹಾರ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿದ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.

Ukraine Crisis ರೋಬೋಟ್ ಟ್ಯಾಂಕ್ ಸೇರಿ ಉಕ್ರೇನ್ ಮೇಲೆ ಅತ್ಯಂತ ಅಪಾಯಕಾರಿ ಅಸ್ತ್ರ ಪ್ರಯೋಗಿಸಿದ ರಷ್ಯಾ!
 

ಯುದ್ಧಪೀಡಿತ ಉಕ್ರೇನ್‌ನಿಂದ ಎಲ್ಲಾ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ, ಭಾರತ ಸರ್ಕಾರವು ನಾಲ್ಕು ಕೇಂದ್ರ  ಸಂಪುಟ ಸಚಿವರಾದ ಹರ್ದೀಪ್ ಪುರಿ(Hardeep Puri), ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಕಿರಣ್ ರಿಜಿಜು (Kiren Rijiju)  ಮತ್ತು ವಿಕೆ ಸಿಂಗ್ (VK Singh) ಅವರನ್ನು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಸಲುವಾಗಿ ಸೋಮವಾರ  ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಕಳುಹಿಸಿದ್ದಾರೆ.

Latest Videos
Follow Us:
Download App:
  • android
  • ios