ಭಾರತೀಯ ಮೂಲದ ದೇವ್ ಶಾ ಎಂಬ 14 ವರ್ಷದ ಬಾಲಕ ಪ್ರತಿಷ್ಠಿತ 'ಸ್ಕ್ರಿಫ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ 2023 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತನಾಗಿದ್ದಾನೆ.
ನ್ಯೂಯಾರ್ಕ್: ಭಾರತೀಯ ಮೂಲದ ದೇವ್ ಶಾ ಎಂಬ 14 ವರ್ಷದ ಬಾಲಕ ಪ್ರತಿಷ್ಠಿತ 'ಸ್ಕ್ರಿಫ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ 2023 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತನಾಗಿದ್ದಾನೆ. ಗುರುವಾರ ಅಮೆರಿಕದ ಮಾರ್ಯಾಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಕೊನೆಯ ಸುತ್ತಿನಲ್ಲಿPsammophilus (ಪ್ಸಾಮ್ಮೊಫೈಲ್) ಎಂಬ ಇಂಗ್ಲಿಷ್‌ನ 11 ಸ್ಪೆಲ್ಲಿಂಗ್ ಅನ್ನು ದೇವ್ ಸರಿಯಾಗಿ ಉಚ್ಚರಿಸಿ ವಿಜೇತನಾಗಿದ್ದು, 41 ಲಕ್ಷ ರು. ನಗದು ಬಹುಮಾನ ಸ್ವೀಕರಿಸಿದ್ದಾನೆ. ‘ಪ್ಸಾಮ್ಮೊಫೈಲ್’ ಎಂಬುದು ಮರಳು ಪ್ರದೇಶದಲ್ಲಿ ಬೆಳೆಯುವ ಸಸ್ಯವಾಗಿದೆ. ಸ್ಪೆಲ್ಲಿಂಗ್ ಬೀ ಎಂಬುದು ಪದಗಳ ಸ್ಪೆಲ್ಲಿಂಗ್ (ಅಕ್ಷರಗಳನ್ನು) ಸರಿಯಾಗಿ ಉಚ್ಚರಿಸುವ ಸ್ಫರ್ಧೆಯಾಗಿದೆ. ವರ್ಜೀನಿಯಾದ ಚಾರ್ಲೋಟ್ ವಾಲ್ಶ್ ಎಂಬ 14 ವರ್ಷದ ಹುಡುಗ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾನೆ.
ಪ್ರತಿಷ್ಠಿತ Spelling Bee ಪ್ರಶಸ್ತಿ ಮುಡಿಗೇರಿಸಿಕೊಂಡ ಹರಿಣಿ
2021ರ ಸ್ಪರ್ಧೆಯಲ್ಲೂ ಭಾರತೀಯ ಮೂಲದ ಹರಿಣಿ ಲೋಗನ್ ಎಂಬ ಬಾಲಕಿ ವಿಜೇತಳಾಗಿದ್ದಳು. ನಾಲ್ಕನೇ ಬಾರಿಗೆ ಸ್ಪೆಲಿಂಗ್ ಬೀ ಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಹರಿಣಿ ಮೇರಿಲ್ಯಾಂಡ್‌ನ ನ್ಯಾಷನಲ್ ಹಾರ್ಬರ್‌ನಲ್ಲಿ 90 ಸೆಕೆಂಡ್‌ಗಳ ಕ್ಷಿಪ್ರ ಅವಧಿಯಲ್ಲಿ 21 ಪದಗಳನ್ನು ಸರಿಯಾಗಿ ಉಚ್ಚರಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.. ಈ ಸ್ಪರ್ಧೆಯಲ್ಲಿ ಹರಿಣಿಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಮತ್ತೋರ್ವ ಭಾರತ ಮೂಲದ ವಿದ್ಯಾರ್ಥಿ (Student) ಕೊಲೊರಾಡೋದ 12 ವರ್ಷದ ವಿಕ್ರಮ್ ರಾಜು, 15 ಪದಗಳನ್ನು ಸರಿಯಾಗಿ ಉಚ್ಚರಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಟೆಕ್ಸಾಸ್‌ನ ಮೆಕ್‌ಗ್ರೆಗರ್‌ನ 13 ವರ್ಷದ ವಿಹಾನ್ ಸಿಬಲ್ ಮೂರನೇ ಸ್ಥಾನ ಗಳಿಸಿದ್ದರೆ, ಇನ್ನೊಂದು ವರ್ಷದ ಅರ್ಹತೆಯನ್ನು ಸಹ ಹೊಂದಿದ್ದಾರೆ. ವಾಷಿಂಗ್ಟನ್‌ನ ಬೆಲ್ಲೆವ್ಯೂನಿಂದ ಎಂಟನೇ ತರಗತಿಯಲ್ಲಿ ಓದುತ್ತಿರುವ 13 ವರ್ಷದ ಸಹರ್ಶ್ ವುಪ್ಪಲಾ ನಾಲ್ಕನೇ ಸ್ಥಾನ ಪಡೆದಿದ್ದರು. ಇನ್ನು ಈ ಜಯದೊಂದಿಗೆ ಹರಿಣಿ 50,000 ಡಾಲರ್ ಗಿಂತ ನಗದು ಮತ್ತು ಬಹುಮಾನ ಗೆದ್ದಿದ್ದಾರೆ. ಮಾಜಿ ಸ್ಪೆಲ್ಲರ್ ಗ್ರೇಸ್ ವಾಲ್ಟರ್ಸ್ ಅವರಿಂದ ತರಬೇತಿ ಪಡೆದ ಐದನೇ ಸ್ಕ್ರಿಪ್ಸ್ ಚಾಂಪಿಯನ್ ಆಗಿದ್ದಾರೆ.
ಸ್ಪೆಲ್ಲಿಂಗ್ ಮಿಸ್ಟೇಕ್ : ದುಬೈ ವಿಮಾನ ಪ್ರಯಾಣವೇ ರದ್ದು
ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಹರಿಣಿ ಎರಡು ದಶಕಗಳಿಂದ ಮುಂದುವರಿದಿರುವ ಪರಂಪರೆ ಮುಂದುವರೆಸಿದ್ದಾರೆ. ಕಳೆದ 23 ಚಾಂಪಿಯನ್ ಷಿಪ್ ಗಳಲ್ಲಿ ಪ್ರಶಸ್ತಿ ಜಯಿಸಿದವರ ಪೈಕಿ 21 ಮಂದಿ ದಕ್ಷಿಣ ಏಷ್ಯಾದ ಮೂಲದವರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ, ಭಾರತ ಮೂಲದ ಅಮೆರಿಕನ್ನರು ಅಮೆರಿಕ ಜನಸಂಖ್ಯೆಯ ಸುಮಾರು 1 ಪ್ರತಿಶತವನ್ನು ಹೊಂದಿದ್ದರೂ ಸಹ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅಮೆರಿಕ ಸ್ಪೆಲ್ಲಿಂಗ್ ಬೀ ಸಣ್ಣ ಜನಾಂಗೀಯ ಸಮುದಾಯದ ಯುವ ಮಕ್ಕಳು ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ.
