ನ್ಯೂಯಾರ್ಕ್(ಜು.02): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಯುತ್ತಿದೆ. ಇತ್ತ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿಗಾಗಿ ಹಲವು ಕಸರತ್ತು ನಡೆಸುತ್ತಿದ್ದಾರೆ. ಇದೀಗ ಭಾರತದ ಜೊತೆಗಿನ ಸಂಬಂಧ ಪ್ರಸ್ತಾಪಿಸಿ, ಪ್ರಚಂಡ ಗೆಲುವಿನ ತಂತ್ರ ಹೆಣೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜೋ ಬೈಡನ್, ತಾವು ಗೆಲುವು ಸಾಧಿಸಿದರೆ, ಭಾರತದ ಜೊತೆಗಿನ ಉತ್ತಮ ಸಂಬಂಧಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಬೈಡನ್‌ ಭಾರತ ವಿರೋಧಿ ನೀತಿ!...

ಕಳೆದ 8 ವರ್ಷಗಳಲ್ಲಿ ಅಮೆರಿಕದ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ನನಗೆ ಅಮೆರಿಕ-ಭಾರತದ ಸಂಬಂಧ ಸ್ಪಷ್ಟ ಚಿತ್ರಣವಿದೆ. ಅದರಲ್ಲೂ ಇಂಡೋ-ಅಮೆರಿಕನ್ ನ್ಯೂಕ್ಲೀಯರ್ ಡೀಲ್ ಒಪ್ಪಂದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದೇನೆ. ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಹಲವು ಒಪ್ಪಂದಗಳು ಒಬಾಮ ಕಾಲದಲ್ಲಿ ಆಗಿವೆ. ಇದೀಗ ಇದೇ ಸಂಬಂಧ ನಾನು ಗೆಲುವು ಸಾಧಿಸಿದರೆ ಮುಂದುವರಿಯಲಿದೆ. ಇಷ್ಟೇ ಅಲ್ಲ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಬೈಡನ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆ: 73ರ ಟ್ರಂಪ್‌ ವರ್ಸಸ್‌ 77ರ ಬೈಡೆನ್‌!

ಭಾರತದ ಸಂಬಂಧ ಅಮೆರಿಕಾಗೆ ಮುಖ್ಯ ಎಂದು ಬೈಡನ್, ಡೋನಾಲ್ಡ್ ಟ್ರಂಪ್ ಆಡಳಿತವನ್ನು ಟೀಕಿಸಿದ್ದಾರೆ. ಟ್ರಂಪ್ ಆಡಳಿತದಲ್ಲಿ ಅಮೆರಿಕ ಹಲವು ಕುಸಿತ ಕಂಡಿದೆ. ಕೊರೋನಾ ವೈರಸ್ ನಿರ್ವಹಣೆಯಲ್ಲಿ ಟ್ರಂಪ್ ಸಂಪೂರ್ಣ ವೈಫಲ್ಯರಾಗಿದ್ದಾರೆ. ಜನಾಂಗೀಯ ನಿಂದನೆ ಸೇರಿದಂತೆ ಹಲವು ಪ್ರತಿಭಟನೆಗಳಿಗೆ ಅಮೆರಿಕ ಸಾಕ್ಷಿಯಾಗಿದೆ. ಇವೆಲ್ಲ ಟ್ರಂಪ್ ಅಸಮರ್ಪಕ ಆಡಳಿತವೇ ಕಾರಣ ಎಂದಿದ್ದಾರೆ

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"