ವಾಷಿಂಗ್ಟನ್‌(ಜೂ.27): ಶೀಘ್ರವೇ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಗೆಲ್ಲುವ ಮುಂಚೂಣಿ ಅಭ್ಯರ್ಥಿ ಎಂಬ ಸುಳಿವು ಹೊಂದಿರುವ ಜೋ ಬೈಡನ್‌, ಬಹಿರಂಗವಾಗಿಯೇ ಭಾರತ ವಿರೋಧಿ ನೀತಿ ಪ್ರದರ್ಶಿಸಿದ್ದಾರೆ.

ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ನಾಗರಿಕತ್ವ ನೋಂದಣಿ ಹಾಗೂ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಬಗ್ಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಆಕ್ರೋಶ ಹೊರ ಹಾಕಿದ್ದಾರೆ.

ಭಾರತ ಜೊತೆಗಿನ ಸಂಬಂಧಕ್ಕೆ ಪ್ರಮುಖ ಆದ್ಯತೆ; ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ !

ಅಮೆರಿಕದ ಮುಸ್ಲಿಂ ಸಮುದಾಯದ ಕುರಿತಾದ ತಮ್ಮ ನೀತಿ ನಿರೂಪಣೆಗಳಲ್ಲಿ ಇಡೀ ವಿಶ್ವಾದ್ಯಂತ ಬಹುಸಂಖ್ಯಾತ ಮುಸ್ಲಿಮರು ಇರುವ ದೇಶಗಳು ಮತ್ತು ಇತರೆ ಭಾಗಗಳಲ್ಲಿ ಮುಸ್ಲಿಮರು ಅನುಭವಿಸುತ್ತಿರುವ ನೋವು ಬೈಡನ್‌ ಅವರಿಗೆ ಗೊತ್ತು ಎಂದು ಉಲ್ಲೇಖಿಸಲಾಗಿದೆ. ಶಾಂತಿಯುತ ಪ್ರತಿಭಟನೆಗೆ ಅಡ್ಡಿ, ಇಂಟರ್ನೆಟ್‌ ಸೇವೆ ಬಂದ್‌ ಸೇರಿದಂತೆ ಇನ್ನಿತರ ವಿಚಾರಗಳು ಯಾವುದೇ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ, ಕಾಶ್ಮೀರದಲ್ಲಿ ಜನರಿಗೆ ಹಕ್ಕುಗಳನ್ನು ಪುನಃ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಭಾರತಕ್ಕೆ ಪಾಠ ಮಾಡುವ ಯತ್ನ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆ: 73ರ ಟ್ರಂಪ್‌ ವರ್ಸಸ್‌ 77ರ ಬೈಡೆನ್‌!

ಅಲ್ಲದೆ, ಭಾರತದ ಅಸ್ಸಾಂನಲ್ಲಿ ಜಾರಿಯಾಗಿರುವ ಎನ್‌ಆರ್‌ಸಿ ಮತ್ತು ಸಿಎಎ ಅನುಷ್ಠಾನದಿಂದ ಭಾರತದ ದೀರ್ಘಕಾಲದ ಜಾತ್ಯತೀತ, ಬಹು ಸಂಸ್ಕೃತಿ ಮತ್ತು ಬಹು ಧಾರ್ಮಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪ್ರತಿಪಾದಿಸಲಾಗಿದೆ. ಭಾರತದ ವಿರೋಧಿ ಹೇಳಿಕೆಯನ್ನು ಹಿಂಪಡೆಯಬೇಕು ಅಥವಾ ಮರುಪರಿಶೀಲನೆ ನಡೆಸಬೇಕು ಎಂದು ಅಮೆರಿಕದಲ್ಲಿರುವ ಹಿಂದು ಸಮುದಾಯ ಬೈಡನ್‌ ಅವರನ್ನು ಒತ್ತಾಯಿಸಿದೆ. ಆದರೆ, ಬೈಡನ್‌ ಪ್ರಚಾರಕರು ಮಾತ್ರ ಪ್ರತಿಕ್ರಿಯೆಯೇ ನೀಡಿಲ್ಲ.