ಅಮೆರಿಕಾದಲ್ಲಿ ಏಳು  ವರ್ಷದ ಬಾಲಕಿಯ ಕೈಗೆ 2.95 ಕ್ಯಾರೆಟ್‌ ಮೌಲ್ಯದ ಅಪ್ಪಟ ವಜ್ರ ಸಿಕ್ಕಿದೆ. ಚಿನ್ನದ ಬಣ್ಣದಿಂದ ಕೂಡಿದ ವಜ್ರ ಇದಾಗಿದೆ. 

ನವದೆಹಲಿ (ಸೆ.7): ತನ್ನ ಬರ್ತ್‌ಡೇ ಪಾರ್ಟಿಗಾಗಿ ಕ್ರೇಟರ್‌ ಆಫ್‌ ಡೈಮಂಡ್ಸ್‌ ಸ್ಟೇಟ್‌ ಪಾರ್ಕ್‌ಗೆ ಬಂದಿದ್ದ 7 ವರ್ಷದ ಬಾಲಕಿಗೆ ಅದೃಷ್ಟ ಖುಲಾಯಿಸಿದೆ. ಅಮೆರಿಕದ ಅರ್ಕಾನ್ನಸ್‌ ರಾಜ್ಯದ ಪ್ಯಾರಾಗೋಲ್ಡ್‌ನ ಏಳು ವರ್ಷದ ಬಾಲಕಿ ಆಸ್ಪೆನ್‌ ಬ್ರೌನ್‌ ಸೆ.1 ರಂದು ತನ್ನ ಬರ್ತ್‌ಡೇ ಆಚರಿಸುವ ಸಲುವಾಗಿ ಪೋಷಕರೊಂದಿಗೆ ಕ್ರೇಟರ್‌ ಆಫ್‌ ಡೈಮಂಡ್ಸ್ ಸ್ಟೇಟ್ಸ್‌ಗೆ ಬಂದಿದ್ದಳು. ಈ ವೇಳೆ ಆಕೆಗೆ 2.95 ಕ್ಯಾರೆಟ್‌ ಗೋಲ್ಡನ್‌ ಬ್ರೌನ್‌ ಡೈಮಂಡ್‌ ಸಿಕ್ಕಿದೆ. ಕಳೆದ ಶುಕ್ರವಾರ ತನ್ನ ತಂದೆ, ಅಜ್ಜಿಯೊಂದಿಗೆ ಆಸ್ಪೆನ್‌ ಬ್ರೌನ್‌ ಅಂದಾಜು 4 ಗಂಟೆ ಪ್ರಯಾಣದ ಬಳಿಕ ಮರ್ಫ್ರೀಸ್ಬೊರೊದಲ್ಲಿರುವ ಡೈಮಂಡ್ಸ್‌ ಸ್ಟೇಟ್‌ ಪಾರ್ಕ್‌ಗೆ ಬಂದಿದ್ದಳು. ಪಾರಕ್‌ನ ನಾರ್ತ್‌ ಸರ್ಚ್‌ ಏರಿಯಾಕ್ಕೆ ಹೋಗಿದ್ದ ವೇಳೆ ಆಸ್ಪೆನ್‌ ತನ್ನ ತಂದೆಗೆ ನನಗೆ ಕೆಲ ಸಮಯ ವಿಶ್ರಾಂತಿ ಬೇಕು ಎಂದು ಹೇಳಿದ್ದಾಳೆ. ಬಿಸಿಲಿನಿಂದಾಗಿ ಆಕೆ ಸಂಪೂರ್ಣವಾಗಿ ಬಳಲಿ ಹೋಗಿದ್ದಳು. ಒಂದು ನಿಮಿಷ ಸುಮ್ಮನೆ ಕುಳಿತ ಆಕೆ, ನಾವಿದ್ದ ಪ್ರದೇಶದದಲ್ಲಿ ಹಾಕಲಾಗಿದ್ದ ಗಡಿ ಬೇಲಿಯ ಬಳಿಯ ದೊಡ್ಡ ಬಂಡೆಗಳ ಬಳಿ ನಡೆದಾಡುತ್ತಿದ್ದಳು ಎಂದು ಆಕೆಯ ತಂದೆ ಲೂಥರ್‌ ಬ್ರೌನ್‌ ತಿಳಿಸಿದ್ದಾರೆ. ಅದಾದ ಕೆಲ ಸಮಯದಲ್ಲಿಯೇ ನನ್ನ ಬಳಿ ಓಡಿ ಒಂದ ಆಕೆ, ಅಪ್ಪಾ, ಅಪ್ಪಾ., ನನಗೇನೋ ಸಿಕ್ಕಿದೆ ನೋಡಿ ಎಂದು ತನ್ನ ಕೈಯಲ್ಲಿ ಇರೋದನ್ನು ತೋರಿಸಿದ್ದಳು.

ಆಕೆಯಲ್ಲಿದ್ದ ಉತ್ಸಾಹ ನಿಜವಾಗಿತ್ತು. ಅವಳ ಕೈಯಲ್ಲಿದ್ದ ಅಷ್ಟಮುಖಿಯಾಗಿದ್ದ ಹರಳು ಸಾಮಾನ್ಯ ಬೆಣಚು ಕಲ್ಲು ಆಗಿರಲಿಲ್ಲ ಎಂದು ಲೂಥರ್‌ ಬ್ರೌನ್‌ ಹೇಳಿದ್ದಾರೆ.ಡೈಮಂಡ್ ಡಿಸ್ಕವರಿ ಸೆಂಟರ್‌ನಲ್ಲಿರುವ ಪಾರ್ಕ್ ಸಿಬ್ಬಂದಿ ಆಸ್ಪೆನ್‌ಗೆ ಸಿಕ್ಕಿದ ಅಷ್ಟಮುಖಿ ರತ್ನ ವಜ್ರ ಎನ್ನುವುದನ್ನು ಖಚಿತಪಡಿಸಿದರು. ಸುಮಾರು 3 ಕ್ಯಾರಟ್‌ಗಳಷ್ಟು ತೂಕವಿದ್ದು, ಇದು ವರ್ಷದ ಎರಡನೇ ಅತಿ ದೊಡ್ಡ ಶೋಧವಾಗಿದ್ದಲ್ಲದೆ, ಬಹುಶಃ ಅತ್ಯಂತ ಸುಂದರ ವಜ್ರ ಎನಿಸಿದೆ. ಆಸ್ಪೆನ್ ತನ್ನ ಅದೃಷ್ಟದ ಹುಡುಕಾಟಕ್ಕೆ "ಆಸ್ಪೆನ್ ಡೈಮಂಡ್" ಎಂದು ಹೆಸರಿಟ್ಟಿದ್ದು, ಅದನ್ನು ತನ್ನ ಬಳಿಯೇ ಇರಿಸಿಕೊಳ್ಳಲು ತೀರ್ಮಾನ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

“ಆಸ್ಪೆನ್‌ಗೆ ಸಿಕ್ಕಿದ ವಜ್ರವು ಗೋಲ್ಡನ್-ಕಂದು ಬಣ್ಣ ಮತ್ತು ಹೊಳೆಯುವ ಹೊಳಪನ್ನು ಹೊಂದಿದೆ. ಇದು ಸಂಪೂರ್ಣ ಸ್ಫಟಿಕವಾಗಿದೆ, ಯಾವುದೇ ಮುರಿದ ಮುಖಗಳು ಮತ್ತು ಒಂದು ಬದಿಯಲ್ಲಿ ಸಣ್ಣ ಬಿರುಕು ಕೂಡ ಇದರಲಿಲ್ಲ. ಸಾಮಾನ್ಯವಾಗಿ ವಜ್ರಗಳು ರೂಪುಗೊಂಡಾಗ ಇಂಥವೆಲ್ಲ ಆಗುತ್ತದೆ. ಆದರೆ, ಆಸ್ಪೆನ್‌ಗೆ ಸಿಕ್ಕಿರುವ ವಜ್ರ ಬಹಳ ವಿಶೇಷವಾದದ್ದು”ಎಂದು ಸಹಾಯಕ ಉದ್ಯಾನವನದ ಅಧೀಕ್ಷಕ ವೇಮನ್ ಕಾಕ್ಸ್ ಹೇಳಿದರು. "ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಅತ್ಯಂತ ಸುಂದರವಾದ ವಜ್ರಗಳಲ್ಲಿ ಇದು ಖಂಡಿತವಾಗಿಯೂ ಒಂದಾಗಿದೆ." ಎಂದಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಪಾರ್ಕ್‌ಗೆ ಪದೇ ಪದೇ ಭೇಟಿ ನೀಡುವ ಡೇವಿಡ್‌ ಆಂಡರ್ಸನ್‌ ಅವರು 2023ರಲ್ಲಿ ಈ ಪಾರ್ಕ್‌ನಲ್ಲಿ ಕಂಡುಹಿಡಿದ ಅತೀದೊಡ್ಡ ವಜ್ರವನ್ನು ಪತ್ತೆ ಮಾಡಿದ್ದರು. 3.29 ಕ್ಯಾರಟ್‌ಗೆ ಡೈಮಂಡ್‌ಗೆ ಅವರು ಬಡ್‌ ಎಂದು ಹೆಸರು ನೀಡಿದ್ದರು. ಅದರರ್ಥ ಬಿಗ್‌ ಅಗ್ಲಿ ಡೈಮಂಡ್‌ ಎನ್ನುವುದಾಗಿದೆ.

ಬಟಾಣಿ ಗಾತ್ರದಲ್ಲಿರುವ ವಜ್ರವನ್ನುಇತ್ತೀಚೆಗೆ ಈ ಕ್ಷೇತ್ರದಲ್ಲಿ ಮಣ್ಣಿನ ಸವೆತವನ್ನು ಸುಧಾರಿಸಲು ಉತ್ಖನನ ಮಾಡಿದ ಪ್ರದೇಶದ ಬಳಿ ಕಂಡುಕೊಂಡಿದ್ದರು. ಅಂದಾಜು 37.5 ಎಕರೆ ಪ್ರದೇಶದಲ್ಲಿ ಇದನ್ನು ಮಾಡಲಾಗಿದೆ. ಈ ಉದ್ಯಾನವನವು ಸಾರ್ವಜನಿಕರಿಗೆ ತೆರೆದಿರುವ ವಿಶ್ವದ ಏಕೈಕ ವಜ್ರ ತಾಣವಾಗಿದೆ.

ಭಾರತಕ್ಕೆ ನೆರವು ನಿಲ್ಲಿಸಿ ಎಂದ ಯುಕೆ ಪತ್ರಕರ್ತೆ; ಕೊಹಿನೂರ್ ವಜ್ರ, 45 ಟ್ರಿಲಿಯನ್ ಡಾಲರ್ ವಾಪಸ್‌ ಕೊಡಿ ಎಂದ ನೆಟ್ಟಿಗರು

ಇದು 1972 ರಲ್ಲಿ ರಾಜ್ಯ ಉದ್ಯಾನವನವಾಗಿ ಪ್ರಾರಂಭವಾದಾಗಿನಿಂದ, ಕ್ರೇಟರ್ ಆಫ್ ಡೈಮಂಡ್ಸ್ 4.6 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಿದೆ, ಅವರು 35,000 ಕ್ಕೂ ಹೆಚ್ಚು ವಜ್ರಗಳನ್ನು ಪತ್ತೆ ಮಾಡಿದ್ದಾರೆ. ಉದ್ಯಾನದಲ್ಲಿ ಪತ್ತೆಯಾದ ಸುಮಾರು 99% ವಜ್ರಗಳು ಮೂರು ಬಣ್ಣಗಳ ವರ್ಗಗಳಲ್ಲಿ ಒಂದಾಗಿವೆ: ಬಿಳಿ (ಸ್ಪಷ್ಟ), ಕಂದು ಅಥವಾ ಹಳದಿ. ಕ್ರೇಟರ್ ಆಫ್ ಡೈಮಂಡ್ಸ್ ಅಧಿಕೃತ ಅಂಕಿಅಂಶಗಳ ಪ್ರಕಾರ, ಇಲ್ಲಿಯವರೆಗೆ ಕಂಡುಬಂದಿರುವ ನಿಖರವಾಗಿ 62% ವಜ್ರಗಳು ಬಿಳಿ, 20% ಕಂದು ಮತ್ತು ಸುಮಾರು 17% ಹಳದಿ. 1% ಕ್ಕಿಂತ ಸ್ವಲ್ಪ ಹೆಚ್ಚು "ಇತರ" ಎಂದು ವರ್ಗೀಕರಿಸಲಾಗಿದೆ.

Maha Vajiralongkorn: 38 ವಿಮಾನ, 300 ಕಾರ್, ವಿಶ್ವದ ದುಬಾರಿ ವಜ್ರ ಹೊಂದಿರುವಾತ ಯಾರು ಗೊತ್ತಾ?

ಉದ್ಯಾನವನದಲ್ಲಿ ಅಗೆದ ವಜ್ರಗಳು ಸರಾಸರಿ 1/5 ಕ್ಯಾರೆಟ್‌ನಷ್ಟಿರುತ್ತವೆ, ಆದರೆ ವರ್ಷಕ್ಕೆ ಸುಮಾರು 21 ವಜ್ರಗಳು 1 ಕ್ಯಾರೆಟ್ ಅಥವಾ ಅದಕ್ಕಿಂತ ಹೆಚ್ಚು ತೂಗುತ್ತವೆ. ಪ್ರತಿ ದಿನ ಸರಾಸರಿ ಒಂದರಿಂದ ಎರಡು ವಜ್ರಗಳು ಪಾರ್ಕ್ ಸಂದರ್ಶಕರಿಂದ ಕಂಡುಬರುತ್ತವೆ.