ದೆಹಲಿ ಸಿಎಂ ಕೇಜ್ರಿವಾಲ್ ರೀತಿಯಲ್ಲಿ ಬ್ರಿಟನ್‌ಗೆ ಫ್ರೀ ಗಿಫ್ಟ್ ಘೋಷಣೆ ಮಾಡಿದ ರಿಷಿ ಸುನಕ್!
ಬ್ರಿಟನ್‌ನಲ್ಲಿ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೆ ದೊಡ್ಡ ಘೋಷಣೆ ಮಾಡಿದ್ದಾರೆ. ಬ್ರಿಟನ್‌ನಲ್ಲಿ ಪ್ರತಿ ಮನೆಯ ವಿದ್ಯುತ್ ಬಿಲ್‌ಗಳಲ್ಲಿ ಸುಮಾರು 244 ಪೌಂಡ್‌ನಷ್ಟು ಕಡಿತ ಮಾಡುವುದಾಗಿ ಭರವಸೆ ನೀಡಿದ್ದಾರೆ. ಭಾರತದಲ್ಲಿ ಆಮ್ ಆದ್ಮಿ ಸರ್ಕಾರ, ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ರಿಷಿ ಸುನಕ್ ಅವರ ಈ ಘೋಷಣೆ ಬ್ರಿಟನ್ ಚುನಾವಣೆಯಲ್ಲಿ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ.
ಲಂಡನ್ (ಆ.12): ಬ್ರಿಟನ್ ಪ್ರಧಾನಿ ಪದವಿಯ ರೇಸ್‌ನಲ್ಲಿರುವ ಭಾರತೀಯ ಮೂಲದ ರಿಷಿ ಸುನಕ್, ಚುನಾವಣೆ ಪ್ರಚಾರದ ವೇಳೆ ಆಮ್ ಆದ್ಮಿ ಪಕ್ಷದ ರೀತಿ ಘೋಷಣೆ ಮಾಡಿದ್ದಾರೆ. ತಾವು ಅಧಿಕಾರಕ್ಕೆ ಬಂದಲ್ಲಿ ಇಂಗ್ಲೆಂಡ್‌ನ ಪ್ರತಿ ಮನೆಯಲ್ಲಿ ಅಂದಾಜು 244 ಪೌಂಡ್‌ನಷ್ಟು ವಿದ್ಯುತ್ ಬಿಲ್ ಅನ್ನು ಕಡಿತ ಮಾಡುವುದಾಗಿ ತಿಳಿಸಿದ್ದಾರೆ. ವಿಶೇಷವೆಂದರೆ, ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಸರ್ಕಾರವು ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದೆ. ಬೋರಿಸ್ ಜಾನ್ಸನ್ ರಾಜೀನಾಮೆ ನಂತರ, ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಲ್ಲಿ ನಾಯಕತ್ವದ ಚುನಾವಣೆಗಳು ನಡೆಯುತ್ತಿವೆ. ಇದರಲ್ಲಿ ರಿಷಿ ಸುನಕ್ ಮತ್ತು ಲಿಜ್ ಟ್ರಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇತ್ತೀಚಿನ ಎಲ್ಲಾ ಸಮೀಕ್ಷೆಗಳಲ್ಲಿ ರಿಷಿ ಸುನಕ್ ಹಿಂದುಳಿದಿರುವಂತೆ ತೋರುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಘೋಷಣೆ ಬಹಳ ಮುಖ್ಯವಾಗುವ ರೀತಿಯಲ್ಲಿ ಕಂಡಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಇಂಧನ ಬಿಲ್ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ಬಗ್ಗೆ ರಿಷಿ ಸುನಕ್ ಮಾತನಾಡಿದ್ದಾರೆ. ಇದು ಪ್ರತಿ ಬಿಲ್‌ಗಳಲ್ಲಿ ಸುಮಾರು 244 ಪೌಂಡ್ ಉಳಿತಾಯವಾಗುತ್ತದೆ.
ಬ್ರಿಟನ್‌ನ ಜನರು ಹಿಂದೆಂದಿಗಿಂತಲೂ ಹೆಚ್ಚಿನ ಇಂಧನ ಬಿಲ್‌ಗಳನ್ನು ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇಂಧನ ಬಿಲ್‌ಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರು ಬಡತನ ರೇಖೆಗಿಂತ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಬ್ರಿಟನ್‌ನಲ್ಲಿ ಇಂಧನ ಬಿಕ್ಕಟ್ಟು: ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆಗೆ ಚುನಾವಣೆ ನಡೆಯುತ್ತಿರುವಾಗಲೇ ಈ ಬಿಕ್ಕಟ್ಟು ಎದುರಾಗಿದೆ. ಹೀಗಿರುವಾಗ ಈ ಬಿಕ್ಕಟ್ಟಿನಿಂದಾಗಿ ಇಬ್ಬರೂ ಅಭ್ಯರ್ಥಿಗಳ ಮೇಲೆ ಒತ್ತಡ ಬಂದಿದೆ. ಅದೇ ಸಮಯದಲ್ಲಿ, ಈ ವರ್ಷದ ಅಂತ್ಯದ ವೇಳೆಗೆ ಭಾರೀ ಕೈಗಾರಿಕೆಗಳು ಮತ್ತು ಕುಟುಂಬಗಳು ವಿದ್ಯುತ್ ಬ್ಲಾಕೌಟ್ ಅನ್ನು ಎದುರಿಸಲಿದೆಯೇ ಎನ್ನುವ ಅನುಮಾನಗಳು ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಿದೆ. ಯುಸ್ವಿಚ್ ವೆಬ್‌ಸೈಟ್‌ನ ಪ್ರಕಾರ, ಸುಮಾರು ಕಾಲು ಭಾಗದಷ್ಟು ಕುಟುಂಬಗಳು ಬಿಲ್‌ನಲ್ಲಿ 206 ಪೌಂಡ್‌ನಷ್ಟು ಬಾಕಿ ಉಳಿದಿವೆ. ಕೇವಲ ನಾಲ್ಕು ತಿಂಗಳಲ್ಲಿ ಈ ಮೊತ್ತ ಶೇ.10ರಷ್ಟು ಹೆಚ್ಚಾಗಿದೆ. ಸಿಎನ್ಎನ್ ವರದಿಯ ಪ್ರಕಾರ, ಜಾಗತಿಕ ನೈಸರ್ಗಿಕ ಅನಿಲ ಪೂರೈಕೆ ಬಿಕ್ಕಟ್ಟು ಇಂಗ್ಲೆಂಡ್‌ನಲ್ಲಿ ಸಗಟು ಬೆಲೆಗಳನ್ನು ದಾಖಲೆ ಮಟ್ಟಕ್ಕೆ ತಳ್ಳಿದೆ. ಇಷ್ಟೇ ಅಲ್ಲ, ಫೆಬ್ರವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಂತರ ಪರಿಸ್ಥಿತಿ ಹದಗೆಟ್ಟಿದೆ.
ನಾನು ಪ್ರಧಾನಿಯಾದ ಮೊದಲ ದಿನದಿಂದಲೇ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್
ಅತ್ಯಂತ ದುರ್ಬಲ ವರ್ಗದ ಜನರು ಮತ್ತು ಪಿಂಚಣಿದಾರರು ಕಲ್ಯಾಣ ವ್ಯವಸ್ಥೆಯ ಮೂಲಕ ತಮ್ಮ ಇಂಧನ ವೆಚ್ಚವನ್ನು ಪೂರೈಸಲು ಹಣವನ್ನು ಪಡೆಯುತ್ತಾರೆ ಎಂದು ಮಾಜಿ ಹಣಕಾಸು ಸಚಿವರು ಹೇಳಿದರು ಸರ್ಕಾರದಾದ್ಯಂತ ಉಳಿತಾಯವನ್ನು ಗುರುತಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಯೋಜನೆಗೆ ಪಾವತಿಸುವುದಾಗಿ ಸುನಕ್ ಹೇಳಿದರು. "ಇದರರ್ಥ ನಾವು ಸರ್ಕಾರದಲ್ಲಿ ಕೆಲವು ವಿಷಯಗಳನ್ನು ನಿಲ್ಲಿಸಬೇಕು'ಎಂದು ಹೇಳಿದ್ದಾರೆ.
ಬ್ರಿಟನ್ ಪ್ರಧಾನಿ ರೇಸ್: 5ನೇ ಸುತ್ತಲ್ಲೂ ರಿಷಿ ಸುನಕ್‌ಗೆ ಮುನ್ನಡೆ: ಗೆಲುವಿಗೆ ಇನ್ನೊಂದೇ ಹೆಜ್ಜೆ
ಟ್ರಸ್ ಅವರಿಂದ ತೆರಿಗೆ ಕಡಿತದ ಘೋಷಣೆ: "ಇಂಧನ ಬೆಲೆಗಳು ಏರಿಕೆಯಾಗುತ್ತಿರುವುದನ್ನು ಗಮನಿಸಿದರೆ, ನಾನು ಪರಿಚಯಿಸಿದ ಇಂಧನ ಲಾಭದ ಲೆವಿಯಿಂದ ಸರ್ಕಾರವು ಹೆಚ್ಚಿನ ಆದಾಯವನ್ನು ಪಡೆಯುವ ಸಾಧ್ಯತೆಯಿದೆ" ಎಂದು ಅವರು ಹಿಂದೆ ಹಣಕಾಸು ಮಂತ್ರಿಯಾಗಿ ಪರಿಚಯಿಸಿದ ತೈಲ ಮತ್ತು ಅನಿಲ ಉತ್ಪಾದಕರ ಲಾಭದ ಮೇಲೆ 25% ವಿಂಡ್‌ಫಾಲ್ ತೆರಿಗೆಯನ್ನು ಉಲ್ಲೇಖಿಸಿದ್ದಾರೆ. ಸುನಕ್ ಅವರ ಪ್ರತಿಸ್ಪರ್ಧಿ, ವಿದೇಶಾಂಗ ಸಚಿವೆ ಟ್ರಸ್, ಇಂಧನ ಬೆಂಬಲದ ಮೂಲಕ ಹಣವನ್ನು ಮರಳಿ ಪಡೆಯುವ ಬದಲು ಮನೆಗಳಿಗೆ ತೆರಿಗೆ ಕಡಿತವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ತಾನು ಪ್ರಧಾನಿಯಾದರೆ ಬೆಲೆಗಳನ್ನು ತಗ್ಗಿಸಲು ಇಂಧನ ಕಂಪನಿಗಳೊಂದಿಗೆ ಕೆಲಸ ಮಾಡುವುದಾಗಿ ಟ್ರಸ್ ಬುಧವಾರ ಹೇಳಿದ್ದಾರೆ. ತೆರಿಗೆ ಕಡಿತವು ಬಡವರಿಗಿಂತ ಶ್ರೀಮಂತರಿಗೆ ಅನುಕೂಲವಾಗುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ.