ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯನದ ಈಗ ಮೂವಿ ನೋಡಿದರೆ ನೊಣವೊಂದು ಎಂಥ ಅನಾಹುತಗಳಿಗೆ ಕಾರಣವಾಗಬಹುದು ಎಂಬ ಕಲ್ಪನೆ ಇರುತ್ತೆ. ಅಂಥದ್ದೇ ಘಟನೆಯೊಂದರಲ್ಲಿ ಜೇಡವೊಂದು ಅಪಘಾತಕ್ಕೆ ಕಾರಣವಾಗಿದೆ.
ಪ್ರತಿ ದಿನ ನೂರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ವೇಗದ ಚಾಲನೆ, ಕುಡಿದು ಚಾಲನೆ, ಬ್ರೇಕ್ ಫೇಲ್, ಸ್ಕಿಡ್ ಹೀಗೆ ನಾನಾ ರೀತಿಯಲ್ಲಿ ರಸ್ತೆ ಅಪಘಾತಗಳು ನಡೆಯೋದು ನಿಮಗೆ ಗೊತ್ತು. ದಾರಿ ಮಧ್ಯೆ ಬರುವ ಪ್ರಾಣಿಗಳಿಂದ ಸವಾರರ ಪ್ರಾಣ ಹೋಗೋದಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ನೀವು ನಾಯಿ ಸೇರಿದಂತೆ ಸತ್ತು ಬಿದ್ದಿರುವ ಪ್ರಾಣಿಗಳನ್ನು ನೋಡ್ತಿರುತ್ತೀರಿ. ಬೆಕ್ಕು, ನಾಯಿ, ದನ, ಹಂದಿ ಕಾರಣಕ್ಕೆ ರಸ್ತೆ ಅಪಘಾತ ನಡೆಯೋದು ಮಾಮೂಲಿ. ರಸ್ತೆ ದಾಟುವ ಸಂದರ್ಭದಲ್ಲಿ ಅದೆಷ್ಟೋ ಕೀಟಗಳು ವಾಹನದ ಚಕ್ರದಡಿ ಬರುವುದಿದೆ. ಅವು ಬಂದಿದ್ದು, ಸತ್ತಿದ್ದು ಸವಾರನ ಅರಿವಿಗೆ ಬರೋದಿಲ್ಲ. ಆದ್ರೆ ಜೇಡದಿಂದಾಗಿ ರಸ್ತೆ ಅಪಘಾತ ಸಂಭವಿಸಿದೆ ಅಂದ್ರೆ ನೀವು ನಂಬ್ತೀರಾ?. ನಂಬ್ಲೇಬೇಕು. ಕ್ಯಾಲಿಫೋರ್ನಿಯಾದಲ್ಲಿ ಇಂಥಹದ್ದೊಂದು ಘಟನೆ ಬೆಳಕಿಗೆ ಬಂದಿದೆ.
ಕ್ಯಾಲಿಫೋರ್ನಿಯಾ (California) ದ ಡೆತ್ ವ್ಯಾಲಿ ನ್ಯಾಷನಲ್ ಪಾರ್ಕ್‌ನಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿದೆ. ಮನೆಯಲ್ಲಿ ಜೇಡ (Spider) ಕಟ್ಟೋದು ಸಾಮಾನ್ಯ. ಒಂದ್ಕಡೆ ತೆಗೆದ್ರೆ ಇನ್ನೊಂದು ಕಡೆ ಕಟ್ಟಿಕೊಳ್ಳುವ ಜೇಡ ಕಿರಿಕಿರಿಯುಂಟು ಮಾಡುತ್ತದೆ. ಅನೇಕ ಬಾರಿ ಈ ಬಲೆ ಮುಖ, ಕೈಗೆ ತಾಗೋದಿದೆ. ಆದ್ರೆ ಈ ಅಪಘಾತಕ್ಕೆ ಕಾರಣವಾಗಿರೋದು ನಮ್ಮ ಮನೆಯಲ್ಲಿ ಬಲೆ ಕಟ್ಟುವ ಜೇಡದಿಂದ ಅಲ್ಲ. ಈ ಜೇಡವನ್ನು ಟಾರಂಟುಲಾ ಎಂದು ಕರೆಯಲಾಗುತ್ತದೆ.
ರಾತ್ರಿ ಅಮ್ಮ ನೆನಪಾಗ್ತಾಳೆ!: ಬಿಗ್‌ಬಾಸ್ ಕಂಟೆಸ್ಟೆಂಟ್ ಭಾಗ್ಯಶ್ರೀ ಮಗನ ಮಾತು ವೈರಲ್
ಅಪಘಾತ (Accident) ಹೇಗಾಯ್ತು? ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ವಿಸ್ ದಂಪತಿ ಜೇಡವನ್ನು ತಪ್ಪಿಸಲು ಹೋಗಿದ್ದಾರೆ. ದಾರಿ ಮಧ್ಯೆ ಜೇಡ ಬಂದ ಕಾರಣ ಬ್ರೇಕ್ ಹಾಕಿದ್ದಾರೆ. ಆಗ ಅಪಘಾತ ಸಂಭವಿಸಿದೆ. ಬೈಕ್ ಸವಾರ ಬ್ರೇಕ್ ಹಾಕ್ತಿದ್ದಂತೆ ಕಂಟ್ರೋಲ್ ಕಳೆದುಕೊಂಡಿದ್ದು, ಮುಂದೆ ಹೋಗ್ತಿದ್ದ ವ್ಯಾನ್ ಗೆ ಡಿಕ್ಕಿ ಹೊಡೆದಿದ್ದಾನೆ. 24 ವರ್ಷದ ಮೋಟಾರ್ ಸೈಕಲ್ ಸವಾರ ಗಾಯಗೊಂಡಿದ್ದಾನೆ. ಆದ್ರೆ ಜೇಡಕ್ಕೆ ಯಾವುದೇ ತೊಂದರೆ ಆಗ್ಲಿಲ್ಲ. ಅದು ರಸ್ತೆ ಕ್ರಾಸ್ ಮಾಡಿ ಮರುಭೂಮಿಗೆ ಓಡಿದೆ ಎಂದು ಜನರು ಹೇಳಿದ್ದಾರೆ. ಗಾಯಾಳು ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಮಹಾರಾಷ್ಟ್ರ ಸ್ಟೈಲ್ ಸೀರೆಯುಟ್ಟು ಕಣ್ಣಲ್ಲೇ ಕಿಚ್ಚು ಹಚ್ಚಿದ ಭೂಮಿ ಶೆಟ್ಟಿ
ಈ ಪ್ರದೇಶದಲ್ಲಿ ನಿಧಾನವಾಗಿ ವಾಹನ ಚಲಾಯಿಸುವಂತೆ ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ. ಆಗಸ್ಟ್‌ನಲ್ಲಿ, ಹಿಲರಿ ಚಂಡಮಾರುತವು ಈ ಪ್ರದೇಶವನ್ನು ಅಪ್ಪಳಿಸಿ, ತೀವ್ರ ಪ್ರವಾಹವನ್ನು ಉಂಟುಮಾಡಿತು ಮತ್ತು ಉದ್ಯಾನದ ಹೆಚ್ಚಿನ ರಸ್ತೆಗಳನ್ನು ಮುಚ್ಚಿತು. ಈಗ್ಲೂ ಜೆಲ್ಲಿಕಲ್ಲುಗಳು ರಸ್ತೆಯಲ್ಲಿವೆ. ಅಲ್ಲದೆ ಅನೇಕ ಜೀವಿಗಳು ತಮ್ಮ ಸ್ಥಾನವನ್ನು ತಲುಪಿಲ್ಲ. ಅದ್ರಲ್ಲಿ ಟಾರಂಟುಲಾ ಕೂಡ ಒಂದು.
ಟಾರಂಟುಲಾ ಬಗ್ಗೆ ಇಲ್ಲಿದೆ ಮಾಹಿತಿ : ನೆಲದ ಮೇಲೆ ಟಾರಂಟುಲಾ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹಾಗಾಗಿ ಈ ಪ್ರಕರಣವನ್ನು ಅಪರೂಪದ ಪ್ರಕರಣ ಎನ್ನಲಾಗಿದೆ. ಉದ್ಯಾನವನದ ಅಧಿಕಾರಿಗಳ ಪ್ರಕಾರ, ಈ ಜೇಡಗಳು ತಮ್ಮ ಹೆಚ್ಚಿನ ಸಮಯವನ್ನು ನೆಲದಡಿಯಲ್ಲಿ ಕಳೆಯುತ್ತವೆ. ಎಂಟು ಕಾಲಿನ ಜೀವಿಗಳು ನಿಧಾನವಾಗಿ ಚಲಿಸುತ್ತವೆ ಮತ್ತು ಆಕ್ರಮಣಕಾರಿಯಲ್ಲ. ಅವು ಕಡಿದ್ರೆ ಅದು ವಿಷವಲ್ಲ. ಜೇನು ಹುಳ ಕಡಿದಾಗ ಆಗುವ ಸಣ್ಣ ನೋವು ಟಾರಂಟುಲಾ ಕಡಿದಾಗ ಆಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾರಂಟುಲಾಗಳು ಸರಾಸರಿ ಐದು ಇಂಚುಗಳಷ್ಟು ಉದ್ದವಿರುತ್ತವೆ. 44,500 ತಿಳಿದಿರುವ ಜೇಡಗಳ ಜಾತಿಗಳಲ್ಲಿ ಟಾರಂಟುಲಾಗಳು ಸುಮಾರು ಎರಡು ಪ್ರತಿಶತದಷ್ಟಿದೆ. ಟಾರಂಟುಲಾಗಳು ಜೇಡ ಪ್ರೇಮಿಗಳಲ್ಲಿ ಜನಪ್ರಿಯ ಸಾಕುಪ್ರಾಣಿಗಳಾಗಿವೆ. ಈ ಜೇಡವು ತನ್ನ ಬೇಟೆಗೆ ವಿಷಕಾರಿ ವಿಷವನ್ನು ಉತ್ಪಾದಿಸುತ್ತದೆ. ಕೀಟಗಳು, ಸಣ್ಣ ಕಪ್ಪೆಗಳು, ಹಲ್ಲಿಗಳು ಮತ್ತು ಇಲಿಗಳಿಗೆ ಇದು ವಿಷಕಾರಿಯಾಗಿರುತ್ತದೆ. ಆದ್ರೆ ಮನುಷ್ಯರು ಇದ್ರಿಂದ ಭಯಪಡುವ ಅಗತ್ಯವಿರೋದಿಲ್ಲ.
