Asianet Suvarna News Asianet Suvarna News

ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ ಇಮ್ರಾನ್‌ ಖಾನ್..!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಆದರೆ, ಪಾಕ್‌ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು ಇಮ್ರಾನ್‌ ಟೀಕಿಸಿದ್ದಾರೆ. 

imran khan lauds indian government foreign policy s jasishankar ash
Author
Bangalore, First Published Aug 14, 2022, 4:15 PM IST

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ರಷ್ಯಾದಿಂದ ತೈಲ ಖರೀದಿಸುವ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧವೂ ಇಮ್ರಾನ್‌ ಖಾನ್  ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಸ್ಲೋವಾಕಿಯಾದಲ್ಲಿ ನಡೆದ ಬ್ರಾಟಿಸ್ಲಾವಾ ಫೋರಂನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರ ಭಾಷಣದ ವಿಡಿಯೋ ಕ್ಲಿಪ್‌ ಅನ್ನು ಪ್ಲೇ ಮಾಡಿದರು ಮತ್ತು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವ ಅಮೆರಿಕದ ಒತ್ತಡಕ್ಕೆ ದೃಢವಾಗಿ ನಿಂತಿದ್ದಕ್ಕಾಗಿ ಜೈಶಂಕರ್‌ರನ್ನು ಶ್ಲಾಘಿಸಿದರು.

ಅಲ್ಲದೆ,  "ಪಾಕಿಸ್ತಾನದಂತೆ ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಮತ್ತು ನವದೆಹಲಿಯು ದೃಢವಾದ ನಿಲುವನ್ನು ತೆಗೆದುಕೊಂಡು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ತಮ್ಮ ವಿದೇಶಾಂಗ ನೀತಿಯನ್ನು ಮಾಡಲು ಸಾಧ್ಯವಾದರೆ, ಅವರು (ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಯಾಕೆ ಮಾಡಲು ಸಾಧ್ಯವಿಲ್ಲ’’ ಎಂದು ಸಭೆಯಲ್ಲಿ ಇಮ್ರಾನ್ ಖಾನ್ ಹೇಳಿದ್ದು, ಈ ವಿಡಿಯೋವನ್ನು ಹಲವಾರು ಮಾಧ್ಯಮಗಳು ಹಂಚಿಕೊಂಡಿವೆ.

ಪಾಕ್ ಪ್ರಧಾನಿ ಶೆಹಬಾಜ್ - ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ ವಾರ್

"ಅವರು (ಯುಎಸ್) ಭಾರತಕ್ಕೆ ರಷ್ಯಾದಿಂದ ತೈಲವನ್ನು ಖರೀದಿಸದಂತೆ ಆದೇಶಿಸಿದ್ದಾರೆ. ಭಾರತವು ಯುಎಸ್‌ನ ಕಾರ್ಯತಂತ್ರದ ಮಿತ್ರ, ಪಾಕಿಸ್ತಾನ ಅಲ್ಲ. ಆದರೂ, ರಷ್ಯಾದ ತೈಲವನ್ನು ಖರೀದಿಸಬೇಡಿ ಎಂದು ಯುಎಸ್ ಕೇಳಿದಾಗ ಭಾರತದ ವಿದೇಶಾಂಗ ಸಚಿವರು ಏನು ಹೇಳಿದರು ಎಂದು ನೋಡೋಣ." ಎಂದ ಇಮ್ರಾನ್ ಖಾನ್ ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ವಿಡಿಯೋ ಕ್ಲಿಪ್ ಅನ್ನು ಪ್ಲೇ ಮಾಡಿದರು.

"ಜೈಶಂಕರ್ ಅವರಿಗೆ ನೀವು ಯಾರು ಎಂದು ಹೇಳುತ್ತಿದ್ದಾರೆ? ಯುರೋಪ್ ರಷ್ಯಾದಿಂದ ಗ್ಯಾಸ್ ಖರೀದಿಸುತ್ತಿದೆ ಮತ್ತು ಜನರಿಗೆ ಅಗತ್ಯವಿರುವಂತೆ ನಾವು ಅದನ್ನು ಖರೀದಿಸುತ್ತೇವೆ ಎಂದೂ ಅವರು ಹೇಳಿದರು. ಇದು ಸ್ವತಂತ್ರ ದೇಶ ('ಯೇ ಹೋತಿ ಹೈ ಆಜಾದ್ ಹಕುಮತ್')" ಎಂದು ಪಾಕ್‌ ಮಾಜಿ ಪ್ರಧಾನಿ ಭಾರತವನ್ನು ಹೊಗಳಿದರು. ಅಲ್ಲದೆ, ರಷ್ಯಾದ ತೈಲವನ್ನು ಖರೀದಿಸುವ ಅಮೆರಿಕದ ಒತ್ತಡಕ್ಕೆ ಮಣಿದ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್‌ ಕಟುವಾಗಿ ಟೀಕಿಸಿದ್ದಾರೆ.

"ನಾವು ಅಗ್ಗದ ತೈಲವನ್ನು ಖರೀದಿಸುವ ಬಗ್ಗೆ ರಷ್ಯಾದೊಂದಿಗೆ ಮಾತನಾಡಿದ್ದೆವು. ಆದರೆ ಈ ಸರ್ಕಾರಕ್ಕೆ ಯುಎಸ್ ಒತ್ತಡವನ್ನು ತಡೆಯುವ ಧೈರ್ಯವಿಲ್ಲ. ಇಂಧನ ಬೆಲೆಗಳು ಗಗನಕ್ಕೇರುತ್ತಿವೆ, ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ನಾನು ಈ ಗುಲಾಮಗಿರಿಯ ವಿರುದ್ಧವಾಗಿದ್ದೇನೆ." ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಲಾಹೋರ್ ಜಲ್ಸಾದ ಸಂದರ್ಭದಲ್ಲಿ ಇಮ್ರಾನ್ ಖಾನ್‌ ಪ್ಲೇ ಮಾಡಿದ ವಿಡಿಯೋ ಜೂನ್ 3 ರಂದು ವಿದೇಶಾಂಗ ಸಚಿವ ಜೈಶಂಕರ್ ಅವರು ಮಾತಾಡಿದ ಕ್ಲಿಪ್ ಆಗಿತ್ತು, ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿದೆ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದಾಗ, "ರಷ್ಯಾದ ಅನಿಲವನ್ನು ಖರೀದಿಸುವುದು ಯುದ್ಧಕ್ಕೆ ಧನಸಹಾಯ ಮಾಡಿದಂತಲ್ಲವೇ’’? ಎಂದು ಮರು ಪ್ರಶ್ನೆ ಹಾಕಿದ್ದರು. 

ಸ್ಲೋವಾಕಿಯಾದಲ್ಲಿ ನಡೆದ GLOBSEC 2022 ಬ್ರಾಟಿಸ್ಲಾವಾ ಫೋರಮ್‌ನಲ್ಲಿ 'ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮಿತ್ರರಾಷ್ಟ್ರಗಳು' ಎಂಬ ವಿಷಯದ ಕುರಿತು ಮಾತನಾಡುವಾಗ ವಿಧೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

ಲಂಕಾ ಅಲ್ಲ ಇನ್ನೂ ಒಂದು ಡಜನ್ ದೇಶದಲ್ಲಿ ಆರ್ಥಿಕ ಜ್ವಾಲಾಮುಖಿ ಸ್ಫೋಟ!

ರಷ್ಯಾದಿಂದ ಭಾರತದ ತೈಲ ಆಮದುಗಳನ್ನು ಸಮರ್ಥಿಸುವಾಗ, ಉಕ್ರೇನ್ ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಎಂದು ಜೈಶಂಕರ್ ಹೇಳಿದ್ದರು. ಉಕ್ರೇನ್ ಯುದ್ಧದ ನಡುವೆ ಯುರೋಪ್ ರಷ್ಯಾದಿಂದ ಅನಿಲ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸುತ್ತಿರುವಾಗ ಭಾರತವನ್ನು ಮಾತ್ರ ಏಕೆ ಪ್ರಶ್ನಿಸಲಾಗುತ್ತಿದೆ ಎಂದೂ ಅವರು ಪ್ರಶ್ನಿಸಿದ್ದರು. 

ರಷ್ಯಾದಿಂದ ಭಾರತದ ತೈಲ ಆಮದುಗಳು ಉಕ್ರೇನ್ ಯುದ್ಧಕ್ಕೆ ಧನಸಹಾಯ ನೀಡುತ್ತಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, "ನೋಡಿ ನಾನು ವಾದ ಮಾಡಲು ಬಯಸುವುದಿಲ್ಲ. ಭಾರತವು ರಷ್ಯಾ ತೈಲವನ್ನು ಯುದ್ಧಕ್ಕೆ ಧನಸಹಾಯ ಮಾಡಿದರೆ.. ರಷ್ಯಾದಿಂದ ಅನಿಲ ಖರೀದಿ ಯುದ್ಧಕ್ಕೆ ಧನಸಹಾಯ ನೀಡುತ್ತಿಲ್ಲವೇ..? ಕೇವಲ ಭಾರತೀಯ ಹಣ ಮತ್ತು ಭಾರತಕ್ಕೆ ಬರುತ್ತಿರುವ ರಷ್ಯಾದ ತೈಲವು ಯುದ್ಧಕ್ಕೆ ಧನಸಹಾಯ ನೀಡುತ್ತಿದೆಯೇ ಹೊರತು ಯುರೋಪ್‌ಗೆ ಬರುವ ರಷ್ಯಾದ ಅನಿಲವು ಹಣಕಾಸು ನೆರವು ನೀಡುತ್ತಿಲ್ಲವೇ? ಸ್ವಲ್ಪ ಸಮಂಜಸವಾಗಿರಲಿ" ಎಂದು ಖಡಕ್ಕಾಗಿ ಉತ್ತರಿಸಿದ್ದರು. 

Follow Us:
Download App:
  • android
  • ios