Asianet Suvarna News Asianet Suvarna News

ಟ್ರಂಪ್-ಇಮ್ರಾನ್ ಫೋನ್ ಮಾತು: ಕಾಶ್ಮೀರ ಕತೆ ಏನಾಯ್ತು?

ಟ್ರಂಪ್-ಇಮ್ರಾನ್  ದೂರವಾಣಿ ಸಂಭಾಷಣೆ| ಅಫ್ಘಾನಿಸ್ತಾನ, ಕಾಶ್ಮೀರ ವಿಚಾರ ಪಸ್ತಾಪ| ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ| 

Imran Khan Discusses Kashmir During Phone Call With Donald Trump
Author
Bengaluru, First Published Nov 22, 2019, 7:02 PM IST

ಇಸ್ಲಾಮಾಬಾದ್(ನ.22): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಪಾಕಿಸ್ತನ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಅಫ್ಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆಗಳು ಮತ್ತು ಕಾಶ್ಮೀರ ವಿಷಯ ಸೇರಿದಂತೆ ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳನ್ನು ಇಬ್ಬರೂ ನಾಯಕರು  ಚರ್ಚಿಸಿದ್ದಾರೆ ಎನ್ನಲಾಗಿದೆ.

ಭಾರತದ ಒಪ್ಪಿಗೆ ಇಲ್ಲದೇ ಮಧ್ಯಸ್ಥಿಕೆ ಇಲ್ಲ: ಇಮ್ರಾನ್ ಮುಸಿಡಿಗಿಷ್ಟು ಎಂದ ಟ್ರಂಪ್!

ಅಫ್ಘಾನಿಸ್ತಾನದಲ್ಲಿ ಇಬ್ಬರು ಪಾಶ್ಚಾತ್ಯ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿರುವ ಇಮ್ರಾನ್ ಖಾನ್, ಒತ್ತೆಯಾಳುಗಳು ಸುರಕ್ಷಿತವಾಗಿ ಬಿಡುಗಡೆಯಾಗಿರುವುದು ಪಾಕಿಸ್ತಾನಕ್ಕೆ ಸಂತೋಷದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಒತ್ತೆಯಾಳುಗಳ ಬಿಡುಗಡೆಗೆ ಪಾಕಿಸ್ತಾನ ತೆಗೆದುಕೊಂಡ ಕ್ರಮಗಳಿಗೆ ಇಮ್ರಾನ್ ಖಾನ್ ಅವರಿಗೆ ಹಾಗೂ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ಎನ್ನಲಾಗಿದೆ. 

J&K ನೋಡಿ ಸಾಹೇಬ್: ಟ್ರಂಪ್ ಭೇಟಿ ವೇಳೆ ಅಳಲಿರುವ ಖಾನ್ ಸಾಹೇಬ್!

ಬಂಧಿತರಾಗಿದ್ದ ತಮ್ಮ ಸಂಘಟನೆಯ ಸದಸ್ಯರ ಬಿಡುಗಡೆಗೆ ಪ್ರತಿಯಾಗಿ, ತಾಲಿಬಾನ್ ಉಗ್ರರು ಕಳೆದ ಮಂಗಳವಾರ ಅಮೆರಿಕದ ಕೆವಿನ್ ಕಿಂಗ್ ಮತ್ತು ಆಸ್ಟ್ರೇಲಿಯಾದ ಟಿಮೊತಿ ವೀಕ್ಸ್ ಅವರನ್ನು ಬಿಡುಗಡೆ ಮಾಡಿದ್ದರು.

Follow Us:
Download App:
  • android
  • ios