ನ್ಯೂಯಾರ್ಕ್(ನ.24): 2014ರಲ್ಲಿ ವಿಶ್ವದ ಯುವಜನರಲ್ಲಿ ಭಾರೀ ಟ್ರೆಂಡ್‌ ಉಂಟು ಮಾಡಿದ್ದ ಐಸ್‌ ಬಕೆಟ್‌ ಚಾಲೆಂಜ್‌ (ಅತ್ಯಂತ ತಣ್ಣನೆಯ ನೀರನ್ನು ಬಕೆಟ್‌ ಮೂಲದ ತಮ್ಮ ತಲೆ ಮೇಲೆ ಅಥವಾ ಇತರರ ತಲೆ ಮೇಲೆ ಹಾಕಿಕೊಳ್ಳುವುದು) ಎಂಬ ನಿಧಿ ಸಂಗ್ರಹ ಅಭಿಯಾನದ ಆಟ ಹುಟ್ಟು ಹಾಕಿದ್ದ ಪ್ಯಾಟ್ರಿಕ್‌ ಕ್ವಿನ್‌ (37) ನಿಧರಾಗಿದ್ದಾರೆ.

ಆರು ವರ್ಷಗಳ ಹಿಂದೆ ಕಳೆದು ಹೋಗಿದ್ದ ನಾಯಿ ಪೋಷಕರ ಮಡಿಲಿಗೆ, ಕ್ಯಾನ್ಸರ್‌ಗೆ ಹೊಸ ಚಿಕಿತ್ಸೆ

ಪ್ಯಾಟ್ರಿಕ್‌, ಎಎಲ್‌ಎಸ್‌ (ಅಮ್ಯೋಟ್ರೋಪಿಕ್‌ ಲ್ಯಾಟ್ರಲ್‌ ಸ್ಕೆಲಿರೋಸಿಸ್‌) ಎಂಬ ಮೆದುಳು ಹಾಗೂ ಬೆನ್ನುಹುರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನರ ರೋಗದಿಂದ ಬಳಲುತ್ತಿದ್ದ ಅವರು ಅದೇ ರೋಗಕ್ಕೆ ಬಲಿಯಾಗಿದ್ದಾರೆ.

ಬೈಡನ್ ಪತ್ನಿ ಪ್ರೊಫೆಸರ್ ಕೆಲಸ ಮುಂದುವರಿಸುತ್ತಾರೆ? ಬಿಡದ ಟ್ರಂಪ್ ಹಠ

2013ರಲ್ಲಿ ಈ ರೋಗಕ್ಕೆ ತುತ್ತಾಗಿದ್ದ ಅವರು, ಈ ರೋಗದಿಂದ ಬಳಲುತ್ತಿರುವವರಿಗೆ ನಿಧಿ ಸಂಗ್ರಹಿಸುವ ಸಲುವಾಗಿ ‘ಐಸ್‌ ಬಕೆಟ್‌ ಚಾಲೆಂಜ್‌’ ಎನ್ನುವ ವಿಶೇಷ ಪರಿಕಲ್ಪನೆ ಸೃಷ್ಟಿಮಾಡಿದ್ದರು. ಇದು ವಿಶ್ವಾದ್ಯಂತ 1650 ಕೋಟಿ ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು.