ಇಯಾನ್ ಚಂಡಮಾರುತಕ್ಕೆ ಫ್ಲೋರಿಡಾ ತತ್ತರ: 25 ಲಕ್ಷ ಮನೆಗಳಿಗೆ ವಿದ್ಯುತ್ ಕಟ್
ಅಮೆರಿಕದ ಫ್ಲೋರಿಡಾ ರಾಜ್ಯದ ನೈಋುತ್ಯ ಭಾಗದ ಮೇಲೆ ಗುರುವಾರ ಇಯಾನ್ ಚಂಡಮಾರುತ ಅಪ್ಪಳಿಸಿದ್ದು ಭಾರೀ ಅನಾಹುತ ಸೃಷ್ಟಿಸಿದೆ. ಚಂಡಮಾರುತದಿಂದ ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಾವಿರಾರು ಮನೆಗಳ ಚಾವಣಿ ಹಾರಿ ಹೋಗಿದೆ.
ನ್ಯೂಯಾರ್ಕ್: ಅಮೆರಿಕದ ಫ್ಲೋರಿಡಾ ರಾಜ್ಯದ ನೈಋುತ್ಯ ಭಾಗದ ಮೇಲೆ ಗುರುವಾರ ಇಯಾನ್ ಚಂಡಮಾರುತ ಅಪ್ಪಳಿಸಿದ್ದು ಭಾರೀ ಅನಾಹುತ ಸೃಷ್ಟಿಸಿದೆ. ಚಂಡಮಾರುತದಿಂದ ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಾವಿರಾರು ಮನೆಗಳ ಚಾವಣಿ ಹಾರಿ ಹೋಗಿದೆ.
ಜೊತೆಗೆ ಗಾಳಿಯ ಹೊಡೆತಕ್ಕೆ ಸಾವಿರಾರು ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಸುಮಾರು 25 ಲಕ್ಷ ಜನರಿಗೆ ವಿದ್ಯುತ್ ಪೂರೈಕೆ ಬಂದ್ ಮಾಡಲಾಗಿದೆ. ಭಾರೀ ಪ್ರವಾಹದಿಂದಾಗಿ ಸಾವಿರಾರು ಮನೆಗಳು, ಕಟ್ಟಡಗಳು ನೀರಿನಲ್ಲಿ ಮುಳುಗಿ ಹೋಗಿವೆ. ಹಲವು ಆಸ್ಪತ್ರೆಗಳ ಐಸಿಯು ಕೊಠಡಿಗೂ ನೀರು ನುಗ್ಗಿದ್ದು, ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇದು ಇತಿಹಾಸದಲ್ಲೇ ಅಮೆರಿಕಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುಗಳ ಪೈಕಿ ಒಂದಾಗಿದೆ.
ಬುಧವಾರ ಇಯಾನ್ ಚಂಡಮಾರುತ ಕ್ಯೂಬಾ ದೇಶಕ್ಕೆ ಅಪ್ಪಳಿಸಿದ್ದ ಪರಿಣಾಮ 1.13 ಕೋಟಿ ಜನರು ಕಗ್ಗತ್ತಲೆಯಲ್ಲಿ ಕಳೆಯುವಂತಾಗಿತ್ತು.