'ತಿಂದುಂಡು ಮನೆಯಲ್ಲಿರಲು ಸಾಧ್ಯವಿಲ್ಲ' ತಾಲೀಬಾನಿಗಳಿಗೆ ದಿಟ್ಟೆಯ ಠಕ್ಕರ್
* ತಾಲೀಬಾನ್ ವಿರುದ್ಧ ತಿರುಗಿ ನಿಂತ ಹೆಣ್ಣು ಮಕ್ಕಳು
*ಶಿಕ್ಷಣಕ್ಕಾಗಿ ಆಗ್ರಹ, ಪ್ರತಿಭಟನೆ
* ನಾವು ಈ ಜನರೇಶನ್ ಮಕ್ಕಳು, ಶಿಕ್ಷಣ ನಮ್ಮ ಹಕ್ಕು
ಕಾಬೂಲ್(ಸೆ. 25) ಅಫ್ಘಾನಿಸ್ತಾನವನ್ನು ತಾಲೀಬಾನಿಗಳು ವಶಕ್ಕೆ ಪಡೆದುಕೊಂಡು ತಿಂಗಳುಗಳೆ ಕಳೆದಿವೆ. ಮಹಿಳೆಯರು ಮತ್ತು ಮಕ್ಕಳ ಸ್ಥಿತಿ ಚಿಂತಾಜನಕ ಎಂಬ ವರದಿಗಳು ಮೇಲಿಂದ ಮೇಲೆ ಬಂದಿವೆ. ಈ ನಡುವೆ ಅಲ್ಲಿನ ಸಚಿವರೊಬ್ಬರು ಮಹಿಳೆಯರು ಮಕ್ಕಳನ್ನು ಹೆರುತ್ತ ಮನೆಯಲ್ಲಿ ಇರಬೇಕು ಎಂಬ ಹೇಳಿಕೆಯನ್ನು ನೀಡಿದ್ದರು.
ತಾಲೀಬಾನ್ ಸರ್ಕಾರ ಮದರಸಾ ಮತ್ತು ಶಾಲೆಗಳನ್ನು ಮತ್ತೆ ಆರಂಭ ಮಾಡುತ್ತೇನೆ ಎಂದು ಹೇಳಿದೆ. ಆದರೆ ಹೆಣ್ಣು ಮಕ್ಕಳಿಗೆ ಮಾತ್ರ ಪ್ರವೇಶ ಇಲ್ಲ ಎನ್ನುತ್ತಿದೆ. ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಹೆಣ್ಣು ಮಕ್ಕಳು ಶಿಕ್ಷಣಕ್ಕಾಗಿ ಆಗ್ರಹ ಮಾಡುತ್ತಿರುವ ಭಾಷಣದ ದೃಶ್ಯಾವಳಿಗಳು ಜೋರಾಗಿಯೇ ಹರಿದಾಡಿವೆ.
ತಾಲೀಬಾನಿನಲ್ಲಿ ಎಂತೆಂಥ ಶಿಕ್ಷೆ
ನಮ್ಮ ರಾಷ್ಟ್ರವನ್ನು ಸರಿಯಾದ ದಾರಿಯಲ್ಲಿ ಸಾಗಿಸಲು ಇದೊಂದು ಅವಕಾಶ, ಅಲ್ಲಾ ನಮಗೆ ಎಲ್ಲ ಅವಕಾಶವನ್ನು ನೀಡಿದ್ದಾನೆ. ಮಹಿಳೆಯರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ತಾಲೀಬಾನಿಗಳು ಯಾರು? ಎಂದು ಪ್ರಶ್ನೆ ಮಾಡುತ್ತಾಳೆ.
ಇವತ್ತಿನ ಹೆಣ್ಣು ಮಕ್ಕಳು ಮುಂದಿನ ತಾಯಂದಿರು..ನಮಗೆ ಶಿಕ್ಷಣ ಇಲ್ಲ ಎಂದರೆ ಮಕ್ಕಳಿಗೆ ಏನನ್ನು ಹೇಳಿಕೊಡಲು ಸಾಧ್ಯ? ನಾನು ಹೊಸ ಜನರೇಶನ್ ಹುಡುಗಿ.. ನಾನು ಕೇವಲ ತಿಂದು ಮಲುಗುವುದಕ್ಕೆ ಹುಟ್ಟಿದವರಲ್ಲ. ನಾನು ಶಾಲೆಗೆ ಹೋಗಬೇಕು.. ಏನಾದರೂ ಸಾಧನೆ ಮಾಡಬೇಕು ಎಂದು ಆಕೆ ಹೇಳುತ್ತಾ ಹೋಗುತ್ತಾಳೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು 66 ಸಾವಿರ ವೀವ್ಸ್ ಪಡೆದುಕೊಂಡಿದೆ. ನೆಟ್ಟಿಗರು ಹುಡುಗಿಯ ಧೈರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. ಪರ್ವತದ ಎದುರು ನಿಂತ ಹುಡುಗಿಯೇ ಇಂಥ ಭಾಷಣ ಮಾಡಿ ಪರ್ವತಕ್ಕಿಂ ಎತ್ತರವಾಗಿರುವಂತೆ ಕಾಣುತ್ತಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.