ಬೀಜಿಂಗ್[ಡಿ.07]: ಗಂಡ ಹೆಂಡತಿ ನಡುವಿನ ಪ್ರೀತಿ ವ್ಯಕ್ತಪಡಿಸುವ ಸುಂದರವಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತುಂಬು ಗರ್ಭಿಣಿಯಾಗಿದ್ದ ಪತ್ನಿಗೆ, ತಾನೇ 'ಕುರ್ಚಿ'ಯಾಗಿ ಆಸರೆಯಾದ ಗಂಡನ ವಿಡಿಯೋ ಇದು.

ಯಾದಗಿರಿ: ಚಲಿಸುತ್ತಿರುವ ಬಸ್‌ನಲ್ಲಿಯೇ ನಡೆಯಿತು ಹೆರಿಗೆ..!

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪತಿಯೊಬ್ಬ ತನ್ನ ಗರ್ಭಿಣಿ ಹೆಂಡತಿಯೊಂದಿಗೆ ಆಕೆಯ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಿದ್ದಾನೆ. ಇಬ್ಬರೂ ಬಹಳಷ್ಟು ಸಮಯ ತಮ್ಮ ಸರದಿಗೆ ಕಾದು ನಿಂತಿದ್ದಾರೆ. ಆದರೆ ಕೆಲ ಸಮಯದ ಬಳಿಕ ತುಂಬು ಗರ್ಭಿಣಿಯಾಗಿದ್ದ ಪತ್ನಿಗೆ ಕಾಲು ನೋವು ಶುರುವಾಗಿದೆ. ಈ ವೇಳೆ ಗಂಡ ಲ್ಲಿ ಕುಳಿತುಕೊಂಡಿದ್ದವರ ಬಳಿ ಸೀಟು ಬಿಟ್ಟುಕೊಡುವಂತೆ ಕೇಳಿಕೊಂಡಿದ್ದಾನೆ, ಆದರೆ ಅವರು ನಿರಾಕರಿಸಿದ್ದಾರೆ.

ಹೀಗಿರುವಾಗ ತನ್ನ ಪತ್ನಿಯ ನೋವು ನೋಡಲಾಗದ ಪತಿ ತಾನೇ 'ಕುರ್ಚಿ'ಯಂತೆ ಕುಳಿತು, ಪತ್ನಿಯನ್ನು ತನ್ನ ಬೆನ್ನ ಮೇಲೆ ಕುಳಿತುಕೊಳ್ಳುವಂತೆ ತಿಳಿಸಿದ್ದಾನೆ. ಪತ್ನಿಗೆ ಆಸರೆಯಾದ ಈ ಪತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ.

ಮಕ್ಕಳನ್ನು ಹಡೆದ ಹೆಣ್ಮಕ್ಕಳ ಮೆದುಳು ಶಾರ್ಪ್ ಆಗುತ್ತಂತೆ!

ವರದಿಗಳನ್ವಯ ಈ ಘಟನೆ ಈಶಾನ್ಯ ಚೀನಾದ ಹೇಯಿಲೋಂಗ್ಜಿಯಾಂಗ್ ನಲ್ಲಿ ನಡೆದಿದೆ ಎನ್ನಲಾಗಿದೆ. ಇಲ್ಲಿನ ಪೊಲೀಸರು ಶಾರ್ಟ್ ವಿಡಿಯೋ ಆ್ಯಪ್ Douyin ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿ 70ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಈ ದೃಶ್ಯ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.