Hurricane Ian Latest News: ಹರಿಕೇನ್‌ ಚಂಡಮಾರುತ ಕ್ಯೂಬಾ ಮತ್ತು ಅಮೆರಿಕಾದ ಫ್ಲೋರಿಡಾವನ್ನು ಸಂಪೂರ್ಣವಾಗಿ ಆವರಿಸಿದ್ದು, ದಾಖಲೆ ಮಟ್ಟದ ಚಂಡಮಾರುತಕ್ಕೆ ಎರಡೂ ದೇಶಗಳು ತತ್ತರಿಸಿವೆ. ಫ್ಲೋರಿಡಾದಲ್ಲಿ ಲೈವ್‌ ವರದಿ ಮಾಡುತ್ತಿದ್ದ ವರದಿಗಾರನೊಬ್ಬ ಗಾಳಿಯಲ್ಲಿ ಹಾರಿದ್ದರೆ, ಶಾರ್ಕ್‌ಗಳು ಸಮುದ್ರ ತೊರೆದು ನಗರದ ರಸ್ತೆಗಳಲ್ಲಿ ಈಜಾಡುತ್ತಿವೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

ಫ್ಲೋರಿಡಾ: ಅಮೆರಿಕಾ ಮತ್ತು ಕ್ಯೂಬಾ (America and Cuba) ಭಾಗಗಳಲ್ಲಿ ಇಯಾನ್‌ ಎಂಬ ಚಂಡಮಾರುತ (Hurricane Ian) ಆರ್ಭಟ ಆರಂಭಿಸಿದೆ. ಇಲ್ಲಿನ ಫ್ಲೋರಿಡಾದ ಕರಾವಳಿಯಲ್ಲಿ ಚಂಡಮಾರುತ್ತದ ಅಬ್ಬರಕ್ಕೆ ಗಾಳಿಯಲ್ಲಿ ಖಾಸಗಿ ವಾಹಿನಿ ವರದಿಗಾರನೊಬ್ಬ ಹಾರಿದ್ದಾನೆ, ರಸ್ತೆಯ ಮೇಲೆಲ್ಲಾ ಶಾರ್ಕ್‌ಗಳು ಬಂದಿವೆ. ಅಮೆರಿಕಾದಲ್ಲಿ ಹಿಂದೆಂದೂ ಇಂತಾ ರಭಸವಾದ ಚಂಡಮಾರುತ ಸಂಭವಿಸಿರಿಲಿಲ್ಲ ಎಂದೂ ವರದಿಗಳು ಹೇಳಿವೆ. ಮತ್ತು ವರದಿಗಾರ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶಾರ್ಕ್‌ಗಳು ಸಮುದ್ರದ ನೀರಿನ ಜೊತೆ ರಸ್ತೆಗಳಿಗೆ ಬಂದಿವೆ. ಬಿರುಗಾಳಿ ಮರ ಗಿಡಗಳನ್ನು, ರಸ್ತೆಯಲ್ಲಿನ ಸೈನ್‌ ಬೋರ್ಡ್‌ಗಳನ್ನು ಹಾರಿಸಿಕೊಂಡು ಹೋದರೂ ವರದಿಗಾರ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಬಿರುಗಾಳಿಯನ್ನು ಎದುರಿಸಿದ್ದಾನೆ. 

ಬಿಎನ್‌ಓ ನ್ಯೂಸ್‌ನ ಹವಾಮಾನ ವರದಿಗಾರ ಜಿಮ್‌ ಕ್ಯಾಂಟೋರ್‌ ಎಂಬಾತನೇ ವಿಡಿಯೋದಲ್ಲಿ ಚಂಡಮಾರುತವನ್ನು ಎದುರಿಸಿ ನಿಂತ ವ್ಯಕ್ತಿ. ಈ ವಿಡಿಯೋವನ್ನು ಬಿಎನ್‌ಓ ನ್ಯೂಸ್‌ ಟ್ವೀಟ್‌ ಮಾಡಿದ್ದು ಭಾರೀ ವೈರಲ್‌ ಆಗಿದೆ. 

Scroll to load tweet…

Scroll to load tweet…

ನಾಲ್ಕನೇ ಕೆಟಗರಿಯ ಚಂಡಮಾರುತ ಫ್ಲೋರಿಡಾದಲ್ಲಿ ದಾಖಲಾಗಿದ್ದು, ಗಂಟೆಗೆ 241 ಕಿಲೋಮೀಟರ್‌ ವೇಗದಲ್ಲಿ ಗಾಳಿ ಚಲಿಸುತ್ತಿದೆ ಎಂದು ಅಮೆರಿಕಾ ಹವಾಮಾನ ಇಲಾಖೆ ತಿಳಿಸಿದೆ. ಸುಮಾರು 18 ಲಕ್ಷಕ್ಕಿಂತಲೂ ಅಧಿಕ ಮಂದಿ ಫ್ಲೋರಿಡಾದಲ್ಲಿ ಸಿಲುಕಿಕೊಂಡಿದ್ದು, ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ ಎಂದು ಪವರ್‌ ಔಟೇಜ್‌ ಡಾಟ್‌ ಯುಎಸ್‌ ವರದಿ ಮಾಡಿದೆ. ಮೂರು ದೇಶಗಳ ವಿದ್ಯುತ್‌ ಸಂಪರ್ಕ ಸಂಪೂರ್ಣವಾಗಿ ಹರಿಕೇನ್‌ ಇಯಾನ್‌ ಹೊಡೆತಕ್ಕೆ ಕಡಿತಗೊಂಡಿದೆ ಎಂದು ಎಪಿ ವರದಿ ಮಾಡಿದೆ. 

ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ಸಿಡಿಲಿನ ಹೊಡೆತಕ್ಕೆ ನಾಶವಾಗಿವೆ ಮತ್ತು ಕೆಲ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಂಡಿದ್ದು ಆಕಾಶದಲ್ಲಿ ಬೆಳಕು ಕಾಣಿಸಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

Scroll to load tweet…

ಚಂಡಮಾರುತ ಫ್ಲೋರಿಡಾದಲ್ಲಿ ನೆಲಕ್ಕಪ್ಪಳಿಸುವ ಮುನ್ನ ಕ್ಯೂಬಾದಲ್ಲಿ ತಾಂಡವ ಸೃಷ್ಟಿಸಿತ್ತು. ಇಬ್ಬರು ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಕ್ಯೂಬಾದಲ್ಲೂ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು 11 ಲಕ್ಷಕ್ಕೂ ಅಧಿಕ ಮಂದಿ ವಿದ್ಯುತ್‌ ಇಲ್ಲದೇ ಪರಿತಪಿಸುತ್ತಿದ್ದಾರೆ. ಅಮೆರಿಕಾ ಕೋಸ್ಟಲ್‌ ಗಾರ್ಡ್ಸ್‌ ಪ್ರಕಾರ 20 ಕ್ಯೂಬಾ ನಿರಾಶ್ರಿತರು ಫ್ಲೋರಿಡಾ ಕರಾವಳಿಗೆ ತೇಲಿಕೊಂಡು ಬಂದಿದ್ದು, ಈಗ ಅವರು ಕಾಣೆಯಾಗಿದ್ದಾರೆ. ಅವರ ಬೋಟ್‌ ಫ್ಲೋರಿಡಾ ಕರಾವಳಿ ಗಡಿಭಾಗಕ್ಕೆ ಅಪ್ಪಳಿಸಿದೆ. 

ಇದನ್ನೂ ಓದಿ: ಎರಡೆರಡು ಚಂಡಮಾರುತಗಳ ಅಬ್ಬರಕ್ಕೆ ತತ್ತರಿಸಿದೆ ಅಮೆರಿಕಾ..!

ಫ್ಲೋರಿಡಾ ತುಂಬೆಲ್ಲಾ ನೆರೆ ಪರಿಸ್ಥಿತಿ ಸೃಷ್ಟಿಯಾಗಿತ್ತು, ಅಮೆರಿಕಾ ಒಕ್ಕೂಟ ಸರ್ಕಾರ ಸುಮಾರು 300 ಆಂಬುಲೆನ್ಸ್‌ಗಳನ್ನು, ವೈದ್ಯಕೀಯ ಕಿಟ್‌ಗಳನ್ನು ಮತ್ತು 37 ಲಕ್ಷ ಊಟ ಮತ್ತು 35 ಲಕ್ಷ ಲೀಟರ್‌ ನೀರನ್ನು ಕಳಿಸಿಕೊಟ್ಟಿದೆ. ಆದರೆ ನೆರೆ ಮತ್ತು ಚಂಡಮಾರುತ ಕಡಿಮೆಯಾದ ನಂತರ ಇದನ್ನು ಪೀಡಿತರಿಗೆ ತಲುಪಿಸಲು ಸಾಧ್ಯ. ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯೆ ನೀಡಿದ್ದು, "ಫ್ಲೋರಿಡಾವನ್ನು ಸಂಪೂರ್ಣ ಶುಚಿಗೊಳಿಸಲು ಮತ್ತು ಮುಂಚಿನ ಪರಿಸ್ಥಿತಿಗೆ ಹಿಂತಿರುಗಿಸುವಂತೆ ಮಾಡಲು ಸರ್ಕಾರ ಎಲ್ಲ ರೀತಿಯ ಸಹಾಯವನ್ನೂ ಮಾಡಲಿದೆ. ಮತ್ತೆ ಫ್ಲೋರಿಡಾ ಹಿಂದಿನಂತೆ ಸದೃಢವಾಗಿ ನಿಲ್ಲಲು ಸರ್ಕಾರ ಜೊತೆಗಿದೆ," ಎಂದು ಆಶ್ವಾಸನೆ ನೀಡಿದ್ದಾರೆ. 

ಇದನ್ನೂ ಓದಿ: ಭೀಕರ ಚಂಡಮಾರುತ ಬರುತ್ತೆ ಎಂದ್ರೂ ಜನಕ್ಕೆ ಡೋಂಟ್ ಕೇರ್, ಸೆಲ್ಫೀಯಲ್ಲೇ ಬ್ಯುಸಿ