ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಬ್ಯಾಚುಲರ್ ಸ್ಟಾರ್ ಖ್ಯಾತಿಯ ಟಿವಿ ನಟಿ ಅನ್ನೋದು ದೃಢವಾಗಿದೆ. ಈ ಮೂಲಕ ಸುದೀರ್ಘ ದಿನಗಳಿಂದ ಪೊಲೀಸರು ತೀವ್ರ ತಲೆಕೆಡಿಸಿಕೊಂಡಿದ್ದ ಪ್ರಕರಣದಲ್ಲಿ ಮಹತ್ವದ ಸುಳಿವೊಂದು ಪತ್ತೆಯಾಗಿದೆ.

ಸ್ಪೇನ್ (ಏ.06) ಕೊಳದ ಬಳಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಮೃತದೇಹ ಯಾರದ್ದು ಅನ್ನೋದು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುದೀರ್ಘ ದಿನಗಳ ಬಳಿಕ ಇದೀಗ ವರದಿ ಬಂದಿದ್ದು, ಈ ಮೃತದೇಹ ಬ್ಯಾಚುಲರ್ ಸ್ಟಾರ್ ಖ್ಯಾತಿಯ ರಿಯಾಲಿಟಿ ಶೋ ನಟಿ ಅನ್ನಾಬೆಲ್ಲಾ ಲೋವಾಸ್ ಅನ್ನೋದು ದೃಢಪಟ್ಟಿದೆ. ಹಂಗೇರಿಯನ್ ರಿಯಾಲಿಟಿ ಶೋ ಸ್ಟಾರ್ ಮೃತಪಟ್ಟು 2 ವರ್ಷದ ಬಳಿಕ ಖಚಿತಗೊಂಡಿದೆ. ನಟಿಯ ಹಲ್ಲಿನ ಆಧಾರದಲ್ಲಿ ಈ ಮೃತದೇಹದ ಕುರುತು ಪತ್ತೆ ಹಚ್ಚಲಾಗಿದೆ. ಈ ಪ್ರಕರಣ ಹಲವು ತಿರುವು ಪಡೆದುಕೊಂಡು ಇದೀಗ ಮಹತ್ವದ ಘಟ್ಟ ತಲುಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಪತ್ತೆಯಾಗಿದ್ದ ನಟಿ

32 ವರ್ಷದ ಹಂಗೇರಿಯನ್ ಸ್ಟಾರ್ ಅನ್ನಾಬೆಲ್ಲಾ ಲೋವಾಸ್ 2024ರ ನವೆಂಬರ್ ತಿಂಗಳಲ್ಲಿ ಸ್ಪೇನ್‌ನ ಗ್ರನ್ ಕನರಿಯಾದಿಂದ ದಿಢೀರ್ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಹುಡುಕಾಟ ಆರಂಭಿಸಿದ್ದರು. ಕೆಲ ದಿನಗಳ ಬಳಿಕ ಅನ್ನಾಬೆಲ್ಲಾ ಲೋವಾಸ್ ಜೀವಂತವಾಗಿ ಪತ್ತೆಯಾಗಿದ್ದರು. ಇತ್ತ ಪೊಲೀಸರು ನಿಟ್ಟುಸಿರು ಬಿಟ್ಟಿದ್ದರು. ಇದಾದ ಕೆಲವೇ ತಿಂಗಳಲ್ಲಿ ಅನ್ನಾಬೆಲ್ಲಾ ಮತ್ತೆ ನಾಪತ್ತೆಯಾಗಿದ್ದರು.

ಮಾರ್ಚ್ 6, 2025

ಅನ್ನಾಬೆಲ್ಲಾಗಾಗಿ ಪೊಲೀಸರು ಸತತ ಕಾರ್ಯಾಚರಣೆ ಮಾಡಿದ್ದರು. ಇದರ ನಡುವೆ ಮಾರ್ಚ್ 6, 2025ರಂದು ನೈಸರ್ಗಿಕ ಕೊಳದ ಬಳಿ ಅರೆ ನಗ್ನ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ನತೆಯಾಗಿತ್ತು. ಅರ್ಧ ದೇಹ ನೀರಿನಲ್ಲಿ ಮತ್ತರ್ಧ ದೇಹ ಹೊರಭಾಗದಲ್ಲಿತ್ತು. ಆದರೆ ಮೃತಪಟ್ಟು ಹಲವು ದಿನಗಳಾಗಿದ್ದ ಕಾರಣ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಡ್ರೋನ್ ಮೂಲಕ ಹತ್ತಿರದ ಎಲ್ಲಾ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಯಾವುದೇ ಸುಳಿವು ಸಿಗಲಿಲ್ಲ.

ಮೃತದೇಹ ಪರಿಸ್ಥಿತಿಯಿಂದ ಡಿಎನ್ಎ ಮೂಲಕ ಗುರುತು ಪತ್ತೆ ಹಚ್ಚುವ ಕಾರ್ಯಕ್ಕೂ ತೀವ್ರ ಹಿನ್ನಡೆಯಾಗಿತ್ತು. ಕೊನೆಗೆ ಮೃತದೇಹ ಹಲ್ಲುಗಳ ಪರೀಕ್ಷೆ ನಡೆಸಲಾಗಿದೆ. ಬಳಿಕ ವರದಿಗಳನ್ನು ಸ್ಪೇನ್ ಪೊಲೀಸರು ಹಂಗೇರಿಯಾಗೆ ಕಳುಹಿಸಿಕೊಟ್ಟಿದ್ದರು. ಹಂಗೇರಿಯಾದಲ್ಲಿ ಹಲವು ದಂತ ವೈದ್ಯರ ಕ್ಲಿನಿಕ್, ಆಸ್ಪತ್ರೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟಿ ಅನ್ನಾಬೆಲ್ಲಾ ಲೊವಾಸ್ ದಂತ ವೈದ್ಯಕೀಯ ವರದಿ ಮ್ಯಾಚ್ ಆಗಿದೆ. ಈ ಮೂಲಕ ಪರೀಕ್ಷೆಗಳ ಮೂಲಕ ಅನ್ನಾಬೆಲ್ಲಾ ಲೋವಾಸ್ ಅವರದ್ದೇ ಹಲ್ಲುಗಳು ಅನ್ನೋದು ಖಚಿತವಾಗಿದೆ. ಸುದೀರ್ಘ ದಿನಗಳ ತನಿಖೆ ಮಹತ್ವದ ಘಟ್ಟ ತಲುಪಿದೆ.