Asianet Suvarna News Asianet Suvarna News

1788 ರೂಂಗಳ ಬ್ರೂನೈ ಪ್ಯಾಲೇಸ್‌ನಲ್ಲಿ ಮೋದಿಗೆ ಆತಿಥ್ಯ..!

ಬ್ರೂನೈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿ ಅವರಿಗೆ ದೊರೆ ಸುಲ್ತಾನ್ ಹಸನಲ್ ಬೊಲ್ತಿಯಾ ಅವರು 1788 ಕೊಠಡಿಗಳನ್ನು ಹೊಂದಿರುವ ಚಿನ್ನದ ಗುಮ್ಮಟದಿಂದ ಕೂಡಿರುವ ತಮ್ಮ ಹಸನಲ್ ಬೊಲ್ತಿಯಾ ವೈಭವೋಪೇತ ಅರಮನೆಯಲ್ಲಿ ಆತಿಥ್ಯ ನೀಡಿದ್ದಾರೆ. ಇದು ವಿಶ್ವದ ಅತಿದೊಡ್ಡ ವಸತಿ ಅರಮನೆಯಾಗಿದ್ದು, ಗಿನ್ನೆಸ್ ದಾಖಲೆಯಲ್ಲೂ ಸ್ಥಾನ ಪಡೆದಿದೆ. 

Hospitality for Indian PM Narendra Modi at Brunei Palace grg
Author
First Published Sep 4, 2024, 8:58 AM IST | Last Updated Sep 4, 2024, 8:58 AM IST

ಬಂದರ್‌ಸೆರಿ ಬೇಗವಾನ್(ಬ್ರೂನೈ)(ಸೆ. 04): ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಬ್ರೂನೈ ಪ್ರವಾಸ ಆರಂಭಿ ಸಿದ್ದು, 7000 ಐಷಾರಾಮಿ ಕಾರುಗಳನ್ನು ಹೊಂದುವ ಮೂಲಕ ಗಿನ್ನೆಸ್ ದಾಖಲೆ ಸ್ಥಾಪಿಸಿರುವ ಅಲ್ಲಿನ ದೊರೆಯಿಂದ ರಾಜಾತಿಥ್ಯ ದೊರೆತಿದೆ. 

ಬ್ರೂನೈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿ ಅವರಿಗೆ ದೊರೆ ಸುಲ್ತಾನ್ ಹಸನಲ್ ಬೊಲ್ತಿಯಾ ಅವರು 1788 ಕೊಠಡಿಗಳನ್ನು ಹೊಂದಿರುವ ಚಿನ್ನದ ಗುಮ್ಮಟದಿಂದ ಕೂಡಿರುವ ತಮ್ಮ ಹಸನಲ್ ಬೊಲ್ತಿಯಾ ವೈಭವೋಪೇತ ಅರಮನೆಯಲ್ಲಿ ಆತಿಥ್ಯ ನೀಡಿದ್ದಾರೆ. ಇದು ವಿಶ್ವದ ಅತಿದೊಡ್ಡ ವಸತಿ ಅರಮನೆಯಾಗಿದ್ದು, ಗಿನ್ನೆಸ್ ದಾಖಲೆಯಲ್ಲೂ ಸ್ಥಾನ ಪಡೆದಿದೆ. ಮೋದಿ ಅವರು ಬಂದಿಳಿಯುತ್ತಿದ್ದಂತೆಯೇ ಅವರನ್ನು ಬ್ರೂನೈ ರಾಜಕುಮಾರಅಲ್-ಮುತ್ತದಿ ಬಿಲ್ಲಾಹ್ ವಿಮಾನ ನಿಲ್ದಾಣಕ್ಕೇ ಬಂದು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಈ ವೇಳೆ ನಿಲ್ದಾಣದಲ್ಲಿ ಭಾರತೀಯ ಸಮುದಾಯದವರೂ ಮೋದಿ ಅವರನ್ನು ಸ್ವಾಗತಿಸಿದರು. ದ್ವಿಪಕ್ಷೀಯ ಭೇಟಿಗಾಗಿ ಬ್ರೂನೈಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ದಾಖಲೆಗೂ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.

'ದೇಶದ ಕೀರ್ತಿ ಹೆಚ್ಚಿಸಿದ್ದೀರ..': ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಫೋನ್‌ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ಐಷಾರಾಮಿ ಅರಸ: 

ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದ ಬೂನೈ ಯುವರಾಜ ಮತ್ತು ಅವರ ತಂದೆ ಸುಲ್ತಾನ್ ಹಸನಲ್ ಬೊಲ್ತಿಯಾ ಐಷಾರಾಮಿ ಜೀವನ, ಭಾರೀ ಸಂಪತ್ತಿನ ಮೂಲಕ ಜಗದ್ವಿಖ್ಯಾತಿ ಹೊಂದಿದ್ದಾರೆ. ಬ್ರಿಟನ್‌ನ ದಿವಂಗತ ರಾಣಿ 2ನೇ ಎಲಿಜಬೆತ್ ನಂತರ ವಿಶ್ವದ ಎರಡನೇ ಅತಿ ದೀರ್ಘಾವಧಿ ದೊರೆ ಎಂಬ ದಾಖಲೆ ಬೊಲ್ಕಿಯಾ ಅವರಿಗಿದೆ. ಬೊಲ್ಕಿಯಾ ಬಳಿ 41500 ಕೋಟಿ ರು. ಮೌಲ್ಯದ ವಿವಿಧ ಕಂಪನಿಯ 7000 ಐಷಾರಾಮಿ ಕಾರುಗಳಿವೆ. ಇದು ಗಿನ್ನೆಸ್ ದಾಖಲೆ ಕೂಡಾ ಹೌದು. ಇದರಲ್ಲಿ 2007ರಲ್ಲಿ ತಮ್ಮ ಪುತ್ರಿ ವಿವಾಹಕ್ಕೆಂದೇ ವಿಶೇಷವಾಗಿ ಸಿದ್ದಪಡಿಸಲಾದ ಚಿನ್ನಲೇಪಿತ ಕಾರು ಸೇರಿದಂತೆ 600 ರೋಲ್ ರಾಯ್ ಕಾರು ಸೇರಿದೆ. ಇದಲ್ಲದೆ 664 ಕೋಟಿ ರು. ಮೌಲ್ಯದ ಬೆಂಟ್ಲಿ ಡಾಮಿನೇಟರ್ ಎಸ್ ಯುವಿ ಕಾರು ಸೇರಿದಂತೆ ಇದೇ ಕಂಪನಿಯ 380 ಕಾರುಗಳು, 450 ಫೆರಾರಿ, ಪೋರ್ಷ, ಲ್ಯಾಂಬೋರ್ಗಿನಿ, ಮೇಬ್ಯಾಕ್ಸ್, ಜಾಗ್ವಾರ್, ಬಿಎಂಡಬ್ಲ್ಯು, ಮತ್ತು ಮೆಕ್ಲಾರೆನ್ ಕಂಪನಿಯ ಕಾರುಗಳು ಕೂಡಾ ಇವೆ. ವಿಶ್ವದ ಅತಿದೊಡ್ಡ ಅರಮನೆ: ಇನ್ನು ಪ್ರಧಾನಿ ಮೋದಿಗೆ ಬ್ರೂನೈ ದೊರೆ ಆತಿಥ್ಯ ನೀಡಿದ ಅರಮನೆ ವಿಶ್ವದಲ್ಲೇ ಅತಿದೊಡ್ಡ ಅರಮನೆ ಎಂಬ ಹಿರಿಮೆ ಹೊಂದಿದೆ. 'ಪ್ಯಾಲೇಸ್ ಆಫ್ ದಿ ಲೈಟ್ ಆಫ್ ಫೇಯ್' ಎಂದೇ ಪ್ರಸಿದ್ದಿಯಾಗಿರುವ ಇಸ್ತಾನಾ ನೂರುಲ್ ಇಮಾನ್ ಅರಮನೆ ಬೂನ್‌ನ ರಾಜಧಾನಿ ಬಂದರ್ ಸೇರಿ ಬೇಗವಾನ್‌ನಲ್ಲಿದೆ.

ಬೂನೈ ಸ್ವಾತಂತ್ರ್ಯ ಪಡೆಯುವುದಕ್ಕೂ ಮುನ್ನ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರು 1981ರಲ್ಲಿ 11,754 ಕೋಟಿ ರು. ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ಅರಮನೆ 2 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಇದರಲ್ಲಿ ಕೇಂದ್ರದಲ್ಲಿರುವ ಗುಮ್ಮಟವನ್ನು 22 22 52, ಚಿನ್ನದಿಂದ ನಿರ್ಮಿಸಲಾಗಿದೆ. ಇದರಲ್ಲಿ 1788 ಕೊಠಡಿಗಳು, 257 ಸ್ನಾನಗೃಹಗಳು ಮತ್ತು 38 ರೀತಿಯ ಅಮೃತಶಿಲೆಯಿಂದ ಮಾಡಿದ 44 ಮೆಟ್ಟಿಲುಗಳು, 5000 ಅತಿಥಿಗಳಿಗೆ ಔತಣಕೂಟ ಏರ್ಪಡಿಸುವ ವಿಶಾಲವಾದ ಜಾಗ, 110 ಕಾರುಗಳನ್ನು ಪಾರ್ಕ್ ಮಾಡುವ ಪಾರ್ಕಿಂಗ್ ವ್ಯವಸ್ಥೆ, 5 ಈಜುಕೊಳಗಳು, 200 ಕುದುರೆಗಳು ಹಾಗೂ 1500 ಮಂದಿ ನಮಾಜ್ ಮಾಡುವಂತಹ ಮಸೀದಿ ಇದೆ. ವಿಶ್ವದ ಅತಿದೊಡ್ಡವಸತಿ ಆರಮನೆಯಾಗಿದ್ದು, ಗಿನ್ನೆಸ್ ದಾಖಲೆಗೆ ಸೇರಿದೆ.

ಯಾರು ಈ ಅರಸ? 

ಬ್ರಿಟನ್‌ 2ನೇ ಎಲಿಜಬೆತ್ ಬಳಿಕ ವಿಶ್ವದ 2ನೇ ಸುದೀರ್ಘ ದೊರೆ ಬೊಲ್ಕಿಯ ■ ₹41500 5 7000 ಐಷಾರಾಮಿ ಕಾರು ಹೊಂದಿದ್ದಾರೆ • ಇದರಲ್ಲಿ 600 ರೋಲ್ಸ್ ರಾಯ್ಸ್, ಪುತ್ರಿ ವಿವಾಹಕ್ಕೆ ಚಿನ್ನದ ಕಾರು ಮಾಡಿಸಿದ್ದ ಈತ . ಈ ರಾಜನ ವಾಸ ₹11754 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ಯಾಲೇಸಲ್ಲಿ # 2 ಲಕ್ಷ ಚದರ ಮೀಟ‌ರ್ ವಿಸ್ತೀರ್ಣದ ಈ ಅರಮನೆಯ ಗುಮ್ಮಟವನ್ನು 22 ಕ್ಯಾರಟ್ ಚಿನ್ನದಿಂದ ನಿರ್ಮಿಸಲಾಗಿದೆ • 1788 ಕೊಠಡಿಗಳು, 257 ಸ್ನಾನಗೃಹ ಗಳು, 5 ಸ್ವಿಮ್ಮಿಂಗ್ ಪೂಲ್ ಇವೆ. 1500 ಜನರ ನಮಾಜ್‌ಗೆ ಸ್ಥಳವಿದೆ

Latest Videos
Follow Us:
Download App:
  • android
  • ios