ಜಲಪಾತವನ್ನೆಲ್ಲರೂ ನೋಡಿರ್ತಾರೆ, ಆದರೆ ಸೂರ್ಯಪ್ರಭೆಯ ಬೆಳಕಿರುವ, ಹೊಂಬಣ್ಣದ ಜಲಪಾತವನ್ನು ನೋಡಿದ್ದೀರಾ..? ಎತ್ತರದಿಂದ ಚಿನ್ನದ ಕಣಗಳೇ ಹಾರಿ ಬೀಳುತ್ತಿವೆಯೇನೋ ಎಂದೆನಿಸುವಷ್ಟು ಸುಂದರವಾಗಿ ಧುಮ್ಮಿಕ್ಕುವ ಜಲಪಾತ ನಿಮಗೆ ಗೊತ್ತಾ..?

ಕ್ಯಾಲಿಫೋರ್ನಿಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನದಲ್ಲಿ ಇಂಹದ್ದೊಂದು ಅಧ್ಬುತವಿದೆ. ಹಾರ್ಸೆಟೈಲ್ ಜಲಪಾತ ಚಳಿಗಾಲ ಮತ್ತು ವಸಂತಕಾಲದ ಆರಂಭದಲ್ಲಿ ಹರಿಯುವ ಜಲಪಾತವಾಗಿದೆ.

ಪರ್ವತಗಳು ಅಪಾಯದಲ್ಲಿವೆ; ಹೇಗೆ?

ವಸಂತಕಾಲದ ಸೂರ್ಯಾಸ್ತಮಾನವು ಜಲಪಾತವನ್ನು ಬೆಳಗಿಸುತ್ತದೆ, ಇದು ನೀರನ್ನು ಕಿತ್ತಳೆ ಮತ್ತು ಕೆಂಪು ಬಣ್ಣದಿಂದ ಹೊಳೆಯುವಂತೆ ಮಾಡುತ್ತದೆ. ಇಡೀ ಜಲಪಾತವೇ ಹೊಳೆಯುತ್ತಾ ಹರಿಯುತ್ತದೆ.

ಸುಮಾರು 10 ನಿಮಿಷಗಳ ಕಾಲ ನಡೆಯುವ ಈ ಸಂಜೆಯ ಚಮತ್ಕಾರವನ್ನು ಸಾಮಾನ್ಯವಾಗಿ "ಫೈರ್‌ಫಾಲ್" ಎಂದು ಕರೆಯಲಾಗುತ್ತದೆ. ಕಾರಣ ದೂರದಿಂದ ಕಂಡರೇ ಜ್ವಾಲಾಮುಖಿ ಹರಿದಂತೆಯೇ ಗೋಚರಿಸುತ್ತದೆ.

ಚಳಿಗಾಲದಲ್ಲಿ ಅರಳಿದ ಚೆರಿ ಹೂಗಳು: ಶಿಲಾಂಗ್ ಪಿಂಕ್ ಪಿಂಕ್

ಈ ಸುಂದರವಾದ ವಿದ್ಯಮಾನ ನೋಡಲು ಸಾಕಷ್ಟು ಹಿಮಪಾತ, ಹಿಮವನ್ನು ಕರಗಿಸಲು ಸಾಕಷ್ಟು ಬೆಚ್ಚಗಿನ ತಾಪಮಾನ ಬೇಕಾಗುತ್ತದೆ. ಇದರಿಂದಾಗಿ ಜಲಪಾತ ಸೃಷ್ಟಿಯಾಗಲು ಸಾಕಷ್ಟು ನೀರು, ಸ್ಪಷ್ಟ ಆಕಾಶ ಮತ್ತು ಸೂರ್ಯನ ಬೆಳಕು ಬಿದ್ದು ಬೆಳಗಲು ಸರಿಯಾದ ಕೋನದ ಅಗತ್ಯವೂ ಇದೆ.