ಹಾಲೆಂಡ್‌ಗೂ ಆಗುತ್ತಾ ಫ್ರಾನ್ಸ್‌ಗಾದ ಗತಿ: ಅರಬ್‌ ವಲಸಿಗರ ವಿವಾದಕ್ಕೆ ಹಾಲೆಂಡ್‌ ಸರ್ಕಾರವೇ ಬಲಿ!

ವಲಸಿಗರ ವಿವಾದ ಇದೀಗ ಯುರೋಪ್‌ನ (Europe) ಪುಟ್ಟದೇಶ ನೆದರ್ಲೆಂಡ್‌ನಲ್ಲಿ ಸರ್ಕಾರದ ಪತನಕ್ಕೆ ಕಾರಣವಾಗಿದೆ. ಯುದ್ಧ ಹಾಗೂ ಆಂತರಿಕ ಸಂಘರ್ಷಪೀಡಿತ ಅರಬ್‌ ದೇಶಗಳಿಂದ ಬರುವ ಸಂತ್ರಸ್ತ ವಲಸಿಗರನ್ನು ಭೇಟಿಯಾಗಲು ಬರುವ ಅವರ ಕುಟುಂಬದ ಸದಸ್ಯರಿಗೆ ಮಿತಿ ಹೇರಬೇಕು ಎಂಬ ವಿಷಯದಲ್ಲಿ ಎದ್ದ ಭಿನ್ನಾಭಿಪ್ರಾಯವು ನಾಲ್ಕು ಪಕ್ಷಗಳ ಮೈತ್ರಿ ಸರ್ಕಾರವನ್ನು ಪತನಗೊಳಿಸಿದೆ.

Holland Prime Minister Mark Rutte resigns as Allys opposing governments limits for visits to relatives of Arab migrants akb

ಆ್ಯಮ್‌ಸ್ಟರ್‌ಡಾಮ್‌: ವಲಸಿಗರ ವಿವಾದ ಇದೀಗ ಯುರೋಪ್‌ನ (Europe) ಪುಟ್ಟದೇಶ ನೆದರ್ಲೆಂಡ್‌ನಲ್ಲಿ ಸರ್ಕಾರದ ಪತನಕ್ಕೆ ಕಾರಣವಾಗಿದೆ. ಯುದ್ಧ ಹಾಗೂ ಆಂತರಿಕ ಸಂಘರ್ಷಪೀಡಿತ ಅರಬ್‌ ದೇಶಗಳಿಂದ ಬರುವ ಸಂತ್ರಸ್ತ ವಲಸಿಗರನ್ನು ಭೇಟಿಯಾಗಲು ಬರುವ ಅವರ ಕುಟುಂಬದ ಸದಸ್ಯರಿಗೆ ಮಿತಿ ಹೇರಬೇಕು ಎಂಬ ವಿಷಯದಲ್ಲಿ ಎದ್ದ ಭಿನ್ನಾಭಿಪ್ರಾಯವು ನಾಲ್ಕು ಪಕ್ಷಗಳ ಮೈತ್ರಿ ಸರ್ಕಾರವನ್ನು ಪತನಗೊಳಿಸಿದೆ. ನೆದರ್ಲೆಂಡ್‌ ಪ್ರಧಾನಿ ಮಾರ್ಕ್ ರುಟ್ಟೆ (Dutch Prime Minister Mark Rutte) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಯುರೋಪ್‌ ದೇಶಗಳಲ್ಲಿ ಇತ್ತೀಚಿನ ವಿಷಯಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಹೊರಹೊಮ್ಮಿರುವ ಅಕ್ರಮ ವಲಸಿಗರ ವಿಷಯ, ಇನ್ನು 6 ತಿಂಗಳಲ್ಲಿ ನೆದರ್ಲೆಂಡ್‌ ಸಂಸತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಏನಿದು ವಿವಾದ?:

ನೆದರ್ಲೆಂಡ್‌ನಲ್ಲಿ ಪ್ರಧಾನಿ ಮಾರ್ಕ್ ರುಟ್ಟೆಅವರ ಪೀಪಲ್ಸ್‌ ಪಾರ್ಟಿ (People's Party) ಫಾರ್‌ ಫ್ರೀಡಂ ಪಕ್ಷವು ಇತರೆ ಮೂರು ಪಕ್ಷಗಳ ಜೊತೆ ಸೇರಿ 18 ತಿಂಗಳ ಹಿಂದೆ ಸರ್ಕಾರ ರಚಿಸಿತ್ತು. ಉಳಿದ 3 ಪಕ್ಷಗಳಿಗೆ ಹೋಲಿಸಿದರೆ ರುಟ್ಟೆಅವರ ಪಕ್ಷ ಬಲಪಂಥೀಯ ನಿಲುವು ಹೊಂದಿದೆ. 1.8 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈಗಾಗಲೇ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ವಲಸಿಗರಿಗೆ ಆಶ್ರಯ ನೀಡುವ ಪ್ರಮಾಣ ಇಳಿಕೆ ಮಾಡಬೇಕು. ಜೊತೆಗೆ ಈಗಾಗಲೇ ವಲಸೆ (immigrants) ಬಂದಿರುವವರನ್ನು ಭೇಟಿ ಮಾಡಲು ವಿದೇಶಗಳಿಂದ ಬರುವ ಅವರ ಕುಟುಂಬ ಸದಸ್ಯರಿಗೆ ಮಾಸಿಕ 200ರ ಮಿತಿ ಹಾಕಬೇಕು ಎಂಬುದು ಪಕ್ಷದ ನಿಲುವು.

ಪ್ರಣಯ ರಾಷ್ಟ್ರದಲ್ಲೀಗ ಅಕ್ಷರಶಃ ಅಗ್ನಿಪ್ರಳಯ! ಸತತ 6ನೇ ದಿನವೂ ಹೊತ್ತಿಯುರಿಯುತ್ತಿದೆ ಫ್ರಾನ್ಸ್!

ಈ ವಿಷಯ ಕಳೆದ 9 ತಿಂಗಳಿನಿಂದ ಆಡಳಿತಾರೂಢ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ರುಟ್ಟೆಅವರ ಪಕ್ಷದ ವಾದಕ್ಕೆ ಸರ್ಕಾರದ ಮೈತ್ರಿ ಪಕ್ಷಗಳಾದ ಡಿ66, ಕ್ರಿಶ್ಚಿಯನ್‌ ಯೂನಿಯನ್‌ ಮತ್ತು ಸೆಂಟರ್‌-ರೈಟ್‌ ಕ್ರಿಶ್ಚಿಯನ್‌ ಡೆಮಾಕ್ರೆಟಿಕ್‌ ಅಪೀಲ್‌ ಪಕ್ಷಗಳ ವಿರೋಧವಿದೆ. ವಲಸಿಗರು ಮತ್ತು ಅವರ ಬಂಧುಗಳ ಆಗಮನಕ್ಕೆ ಹೇರುವ ಯಾವುದೇ ಮಿತಿಯನ್ನು ತಾವು ಒಪ್ಪುವುದಿಲ್ಲ ಎಂದು ಈ ಪಕ್ಷಗಳು ಸ್ಪಷ್ಟಪಡಿಸಿದ್ದವು. ಈ ವಿಷಯದಲ್ಲಿ 9 ತಿಂಗಳಿನಿಂದ ನಡೆದ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾರ್ಕ್ ರುಟ್ಟೆ ನಿರ್ಧರಿಸಿದ್ದಾರೆ. ಇದರೊಂದಿಗೆ ಮೈತ್ರಿ ಸರ್ಕಾರ ಪತನಗೊಂಡಿದೆ.

ಯಾರು ವಲಸಿಗರು?

ಆಫ್ಘಾನಿಸ್ತಾನ, ಸಿರಿಯಾ, ಟರ್ಕಿ, ನೈಜೀರಿಯಾದಂಥ ಇಸ್ಲಾಮಿಕ್‌ ದೇಶಗಳು ಹಾಗೂ ಹಿಂದಿನ ಸೋವಿಯತ್‌ ಒಕ್ಕೂಟದ ದೇಶಗಳಿಂದ ಹೆಚ್ಚಿನ ಪ್ರಮಾಣದ ಜನರು ನೆದರ್ಲೆಂಡ್‌ಗೆ ವಲಸೆ ಬರುತ್ತಾರೆ. ಉಳಿದಂತೆ ಭಾರತ ಸೇರಿದಂತೆ 90ಕ್ಕೂ ಹೆಚ್ಚು ದೇಶಗಳ ಜನರು ಆಶ್ರಯ ಕೋರಿ ನೆದರ್ಲೆಂಡ್‌ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ 23 ಲಕ್ಷಕ್ಕೂ ಹೆಚ್ಚು ವಲಸಿಗರು ಸಕ್ರಮವಾಗಿ ವಲಸೆ ಬಂದು ನೆದರ್ಲೆಂಡ್‌ನಲ್ಲಿ ನೆಲೆಸಿದ್ದಾರೆ.


ಫ್ರಾನ್ಸ್‌ನಲ್ಲಿ ಸತತ 6ನೇ ದಿನವೂ ಭಾರಿ ಹಿಂಸಾಚಾರ: 300ಕ್ಕೂ ಹೆಚ್ಚು ವಾಹನ, 35ಕ್ಕೂ ಹೆಚ್ಚು ಕಟ್ಟಡಗಳಿಗೆ ಬೆಂಕಿ

Latest Videos
Follow Us:
Download App:
  • android
  • ios