Asianet Suvarna News Asianet Suvarna News

ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ, ಥಾಯ್ಲೆಂಡ್ ಪ್ರಧಾನಿ!

ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕ ಭಾರಿ ಸಂಚಲನ ಸೃಷ್ಟಿಸಿದೆ. ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ. ಈ ಹೇಳಿಕೆ ಹಲವರ ಕಣ್ಣು ಕೆಂಪಾಗಿಸಿದೆ.
 

Hindu values of life establish peace in world says Thailand prime minister Srettha Thavisin ckm
Author
First Published Nov 24, 2023, 5:53 PM IST

ಬ್ಯಾಂಕಾಕ್(ನ.24) ಧಾರ್ಮಿಕ ಕಾರಣಗಳಿಂದ ವಿಶ್ವದಲ್ಲಿ ಯುದ್ಧಗಳು, ಹತ್ಯೆಗಳು ನಡೆಯುತ್ತಿದೆ. ಮೂಲಭೂತವಾದಿಗಳ ದಾಳಿ, ಧರ್ಮದ ಕಾರಣಕ್ಕಾಗಿ ಭಯೋತ್ಪಾದಕ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಧರ್ಮ ಸಂಘರ್ಷದ ನಡುವೆ ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ವಿಶ್ವ ಎದುರಿಸುವ ಅಶಾಂತಿಯ ವಾತಾವರಣ ನಿರ್ಮೂಲನೆಯಾಗಿ ಶಾಂತಿ ನೆಲಸಲು ಮಹತ್ವದ ಸಲಹೆ ನೀಡಿದ್ದಾರೆ. ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ.

ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಥಾಯ್ಲೆಂಡ್ ಪ್ರಧಾನಿ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದಾರೆ. ಹಿಂದೂ ಜೀವನ ಮೌಲ್ಯಗಳಾದ ಸತ್ಯ, ನ್ಯಾಯ, ಸಹಿಷ್ಣುತೆ , ಸಹಬಾಳ್ವೆ, ಅಹಿಂಸೆಗಂದ ಮಾತ್ರ ವಿಶ್ವದಲ್ಲಿ ಶಾಂತಿ ನಲೆಸಲಿದೆ. ಹಿಂದೂ ಸಮಾಜ ಅಭಿವೃದ್ಧಿಪರ ಹಾಗೂ ಪ್ರತಿಭಾನ್ವಿತರ ಒಕ್ಕೂಟವಾಗಿದೆ. ಕಾರ್ಯಕ್ರಮದ ಉದ್ಘಾಟನೆಗೆ ಸ್ರೆತ್ಥಾ ಥಾವಿಸನ್ ಆಗಮಿಸಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಪ್ರದಾನಿ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗಿತ್ತು.

ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!

ಥಾಯ್ಲೆಂಡ್‌ನಲ್ಲಿ ಹಿಂದೂ ಸಮ್ಮೇಳನವಾಗುತ್ತಿರುವುದೇ ಅತ್ಯಂತ ಹೆಮ್ಮೆಯ ವಿಚಾರ. ಹಿಂದೂ ಜೀವನ ಪದ್ಧತಿ, ಆದರ್ಶನ, ಜೀವನ ಮೌಲ್ಯಗಳ ಕುರತು ಚರ್ಚಿಸುವುದೇ ಅತ್ಯಂತ ಆನಂದ ಹಾಗೂ ಫಲಪ್ರದ ಕಾರ್ಯಕ್ರಮ. ವೇದ, ಉಪನಿಷತ್ತುಗಳ ಮೌಲ್ಯಗಳನ್ನ ಈಗಿನ ಪೀಳಿಗಿಗೆ ತಿಳಿ ಹೇಳಬೇಕಾದ ಅಗತ್ಯವಿದೆ. ಸಾವಿರಾರು ವರ್ಷಗಳ ಹಿಂದೆ ಹಿಂದೂ ಸಮಾಜ ಎಲ್ಲರವನ್ನು ಬೆಳೆಸಿ, ಎಲ್ಲರ ಜೊತೆ ಸಹಬಾಳ್ವೆ ನಡೆಸಿದೆ ಎಂದು ಥಾಯ್ಲೆಂಡ್ ಪ್ರಧಾನಿ ಹೇಳಿದ್ದಾರೆ.

ಬ್ಯಾಂಕಾಕ್‌ನಲ್ಲಿ ಆಯೋಜಿಸಿದ ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ 61 ದೇಶದ 2,200ಕ್ಕೂ ಹೆಚ್ಚು ವಿಧ್ವಾಂಸರು ಪಾಲ್ಗೊಂಡಿದ್ದರು. ಶಿಕ್ಷಣ, ಆರ್ಥಿಕತೆ, ಸಾಮಾಜಿಕ, ವಿಜ್ಞಾನ, ಅಭಿವೃದ್ಧಿ, ಮಾಧ್ಯಮ , ಸಂಸ್ಕೃತಿ, ಪರಂಪರೆ ಸೇರಿದಂತೆ ಹಲವು ಹಿಂದೂ ಜೀವನ ಪದ್ಧತಿಗಳ ಕುರಿತು ಕಾರ್ಯಕ್ರಮದಲ್ಲಿ ಸಂವಾದಗಳನ್ನು ನಡೆಸಲಾಗಿದೆ.

ಈ ಕಾರ್ಯಕ್ರಮದಲ್ಲಿ 25 ದೇಶದದ ಸಂಸದರು, ಸಚಿವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಅತೀ ಹೆಚ್ಚು ಪ್ರವಾಸಿಗರ ದಟ್ಟಣೆ ಹೊಂದಿರುವ ವಿಶ್ವದ ಟಾಪ್‌ ದ್ವೀಪವಿದು, ನಿಮಗೂ ಟ್ರಿಪ್ ಹೋಗೋ ಪ್ಲಾನ್ ಇದೆಯಾ?

ಭಾರತ ಹಾಗೂ ಥಾಯ್ಲೆಂಡ್ ನಡುವಿನ ಸಂಬಂಧ 2014ರಿಂದ ಮತ್ತೊಂದು ಮಜಲಿಗೆ ತಲುಪಿದೆ ಎಂದು ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದರು. ಭಾರತ ಹಾಗೂ ಥಾಯ್ಲೆಂಡ್ ನಡುವಿನ ದ್ವಿಪಕ್ಷೀಯ ಸಂಬಂಧಿಂದ ಉಭಯ ದೇಶಗಳ ವ್ಯಾಪಾರ ವಹಿವಾಟು ಅಭಿವೃದ್ಧಿಯಾಗಿದೆ ಎಂದಿದ್ದರು. ಇದಕ್ಕೆ ಪೂರಕವಾಗಿ ನ.10ರಿಂದ 2024ರ ಮೇ.10ರವರೆಗೆ ಥಾಯ್ಲೆಂಡ್‌ಗೆ ಭಾರತೀಯರು ವೀಸಾ ಇಲ್ಲದೆಯೇ ಪ್ರವೇಶಕ್ಕೆ ಅವಕಾಶ ಒದಗಿಸಲಾಗಿದೆ.

Follow Us:
Download App:
  • android
  • ios