ವೈರಲ್ ಆಯ್ತು ಬೆಂಕಿ ಜಲಪಾತದ ವಿಡಿಯೋ| ಆತಂಕಗೊಂಡ ಜನರನ್ನು ನಿರಾಳರನ್ನಾಗಿಸಿದ ವರದಿಗಳು| ಈ ಜಲಪಾತದ ಹಿಂದಿನ ವಾಸ್ತವವೇನು? ಇಲ್ಲಿದೆ ವಿವರ

ಕ್ಯಾಲಿಫೋರ್ನಿಯಾ[ಜ.21]: ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ 'ಬೆಂಕಿಯ ಜಲಪಾತ' ಬಂಡೆಯಂಚಿನಿಂದ ಕೆಳಗೆ ಹರಿಯುತ್ತಿರುವ ದೃಶ್ಯಗಳಿವೆ. ಈ ವಿಡಿಯೋವನ್ನು ಭಾನುವಾರ ಟ್ವಿಟ್ ಮಾಡಲಾಗಿದ್ದು, ಭಾರೀ ವೈರಲ್ ಆಗಿದೆ. ಆದರೀಗ ಈ ವಿಡಿಯೋ ಕುರಿತು ಹಲವಾರು ಸವಾಲುಗಳು ಎದ್ದಿವೆ. ಇದು ನಿಜಾನಾ? 'ಬೆಂಕಿ ಜಲಪಾತ' ನಿಜಕ್ಕೂ ಇದೆಯಾ? ಇಲ್ಲಿದೆ ವಿವರ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಡಿಯೋದಲ್ಲಿರುವ ದೃಶ್ಯಗಳು ಕ್ಯಾಲಿಫೋರ್ನಿಯಾದ Yosemite National Parkನಲ್ಲಿರುವ ಜಲಪಾತದ್ದಾಗಿದೆ. ಇದನ್ನು ಹಾರ್ಸ್ ಟೈಲ್ ವಾಟರ್ ಫಾಲ್ ಎಂದು ಕರೆಯಲಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿರುವ ಈ ಜಲಪಾತ ಪ್ರತಿವರ್ಷ, ಫೆಬ್ರವರಿಯ ಎರಡು ವಾರ ಕಿತ್ತಳೆ ಹಾಗೂ ಕೆಂಪು ಬಣ್ಣಕ್ಕೆ ತಿರುಗುತ್ತದೆ. ವರದಿಗಳನ್ವಯ ಯಾವಾಗ ಸೂರ್ಯನ ಕಿರಣಗಳು ಸರಿಯಾಗಿ ಜಲಪಾತದ ಮೇಲೆ ಬೀಳುತ್ತದೋ ಆ ಸಂದರ್ಭದಲ್ಲಿ ಜಲಪಾತ ಹೀಗೆ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಇದೇ ಕಾರಣದಿಂದ ನೀರಿನ ಜಲಪಾತ, ಜ್ವಾಲಾಮುಖಿಯಿಂದ ಹೊರ ಬೀಳುತ್ತಿರುವ ಬೆಂಕಿಯಂತೆ ಭಾಸವಾಗುತ್ತದೆ.

Scroll to load tweet…

ಫೆಬ್ರವರಿಯಲ್ಲಿ ಕೇವಲ 2 ವಾರವಷ್ಟೇ ಈ ಜಲಪಾತ ಕಿತ್ತಳೆ ಹಾಗೂ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಇದು ಕೇವಲ ಕೆಲ ನಿಮಿಷಗಳವರೆಗೆ ಇರುತ್ತದೆ. ಸಂಜೆ ವೇಳೆ ಆಕಾಶ ಶುಭ್ರವಾಗಿದ್ದರಷ್ಟೇ ಇಂತಹ ಮನಮೋಹಕ ದೃಶ್ಯ ಕಾಣಲು ಸಿಗುತ್ತದೆ ಎಂಬುವುದು ಇಲ್ಲಿನ ಸಿಬ್ಬಂದಿಯ ಮಾತಾಗಿದೆ.