Asianet Suvarna News Asianet Suvarna News

ವಿಶ್ವದ ಅತೀ ಹಿರಿಯ ಮೊಸಳೆ ಹೆನ್ರಿ : 700 ಕೆಜಿ ತೂಗುವ ಈತನಿಗೆ 10 ಸಾವಿರ ಮಕ್ಕಳು, 6 ಜನ ಪತ್ನಿಯರು

ಈ ಮೊಸಳೆಯ ಹೆಸರು ಹೆನ್ರಿ, 1900ರ ಡಿಸೆಂಬರ್ 16 ರಂದು ಜನಿಸಿದ ಈ ಮೊಸಳೆ ವಿಶ್ವದ ಅತೀ ಹಿರಿಯ ಮೊಸಳೆಯಂತೆ 700 ಕೇಜಿ ತೂಗುವ ಈ ಮೊಸಳೆ 16 ಪೀಟ್‌ ಉದ್ದವಿದೆ.

henry The worlds oldest crocodile has 6 wives and 10 thousand children akb
Author
First Published Sep 5, 2024, 1:10 PM IST | Last Updated Sep 5, 2024, 1:10 PM IST

ಇದುವರೆಗೆ ವಿಶ್ವದ ಅತೀ ಹಿರಿಯ ನಾಯಿ, ಬೆಕ್ಕು, ಅತೀ ಹಿರಿಯ ವ್ಯಕ್ತಿ ಅತೀ ಹಿರಿಯ ಮಹಿಳೆ ಮುಂತಾದವರ ಸ್ಟೋರಿಗಳನ್ನು ನೀವು ಕೇಳಿರಬಹುದು. ಆದರೆ ಇದು ವಿಶ್ವದ ಅತೀ ಹಿರಿಯ ಮೊಸಳೆಯ ಕತೆ. ಆಂಗ್ಲ ಮಾಧ್ಯಮವೊಂದರ ಪ್ರಕಾರ, ಈ ಮೊಸಳೆಯ ಹೆಸರು ಹೆನ್ರಿ, 1900ರ ಡಿಸೆಂಬರ್ 16 ರಂದು ಜನಿಸಿದ ಈ ಮೊಸಳೆ ವಿಶ್ವದ ಅತೀ ಹಿರಿಯ ಮೊಸಳೆಯಂತೆ 700 ಕೇಜಿ ತೂಗುವ ಈ ಮೊಸಳೆ 16 ಪೀಟ್‌ ಉದ್ದವಿದದೆ. ಇದಕ್ಕೆ 6 ಜನ ಹೆಂಡತಿಯರು ಇದ್ದು, ಒಟ್ಟು 10 ಸಾವಿರ ಮರಿಗಳಿಗೆ ಇದು ತಂದೆಯಾಗಿದೆ ಎಂದು ಇಂಗ್ಲೀಷ್ ದೈನಿಕವೊಂದು ವರದಿ ಮಾಡಿದೆ. 

ದಕ್ಷಿಣ ಆಫ್ರಿಕಾದ ವಿಶ್ವ ಪರಂಪರಿಕ ತಾಣವೆನಿಸಿರುವ ಬೊಟ್ಸಾವನಾದ ಒಕವಂಗೊ ಡೆಲ್ಟಾದಲ್ಲಿ ಈ ಮೊಸಳೆ ವಾಸಿಸುತ್ತದೆ. ಮಿನಿ ಬಸ್ನ ತೂಕವನ್ನು ಇದು ಹೊಂದಿರುವುದರಿಂದ ಇದನ್ನು ವಿಶ್ವದ ಅತೀ ತೂಕದ ದೈತ್ಯ ಮೊಸಳೆ ಎಂದು ಕೂಡ ಗುರುತಿಸಲಾಗಿದೆ. ಇದು ವಿಶಿಷ್ಟವಾದ ಕೋರೆಹಲ್ಲುಗಳು ಬೃಹತ್ ಆದ ಹಲ್ಲಿನ ಸೆಟ್‌ನ್ನು ಹೊಂದಿದೆ.

ಕೊಳದಲ್ಲಿದ್ದ ಮರಿ ಆನೆ ಮೇಲೆ ದಾಳಿಗೆ ಬಂದ ದೈತ್ಯ ಮೊಸಳೆ, ಹೋರಾಡಿ ರಕ್ಷಿಸಿದ ತಾಯಿ ಆನೆ!

1900ರ ದಶಕದ ವೇಳೆ ಸ್ಥಳೀಯ ಬೊಟ್ಸ್ವಾನದ ಬುಡಕಟ್ಟು ನಿವಾಸಿಗಳು ಈ ಮೊಸಳೆ ಹೆನ್ರಿ ತಮ್ಮ ಮಕ್ಕಳನ್ನು ಬೇಟೆಯಾಡುತ್ತದೆ ಎಂದು ಭಯಪಟ್ಟಿದ್ದರು. ಈ ಮೊಸಳೆಯ ಭಯ ಹೆಚ್ಚಾಗುತ್ತಿದ್ದಂತೆ ಬುಡಕಟ್ಟು ಸಮುದಾಯದವರು ಸರ್ ಹೆನ್ರಿ ನ್ಯೂಮನ್ ಅವರ ಬಳಿ ಇದಕ್ಕೊಂದು ಪರಿಹಾರ ಕಂಡು ಹಿಡಿಯಲು ಮನವಿ ಮಾಡಿದ್ದರು. ಇದಾದ ನಂತರ ಹೆನ್ರಿ ಅವರು ಈ ಮೊಸಳೆಯನ್ನು ಸೆರೆ ಹಿಡಿಯಲು ನಿರ್ಧರಿಸಿದರು. ಮುಂದೆ ಆ ಮೊಸಳೆಗೆ ಸರ್ ಹೆನ್ರಿ ಅವರ ಹೆಸರನ್ನೇ ಇಡಲಾಯ್ತು. ಹಾಗೂ ಅದರ ಜೀವಮಾನ ಪೂರ್ತಿ ಆಶ್ರಯ ನೀಡಲಾಯ್ತು.

ಕಳೆದ ಮೂರು ದಶಕಗಳಿಂದ ಈ ಹೆನ್ರಿ ದಕ್ಷಿಣ ಆಫ್ರಿಕಾದ ಸ್ಟಾಟ್‌ಬರ್ಗ್‌ನಲ್ಲಿರುವ ಕ್ರೊಕೋವರ್ಲ್ಡ್‌ ಕನ್ಸರ್ವೇಷನ್ ಸೆಂಟರ್‌ನಲ್ಲಿ ವಾಸ ಮಾಡುತ್ತಿದೆ. ಹಾಗೂ ತನ್ನ ಭಾರಿ ಗಾತ್ರ ಹಾಗೂ ವಯಸ್ಸಿನ ಕಾರಣಕ್ಕೆ ಇದು ಪ್ರತಿದಿನವೂ ಈ ಝೂನಲ್ಲಿ ವೀಕ್ಷಕರನ್ನು ಸೆಳೆಯುತ್ತಿದೆ. ನೀಲೆ ಕ್ರೊಕೊಡೈಲ್ ಕುಟುಂಬಕ್ಕೆ ಈ ಮೊಸಳೆ  ಸೇರಿದೆ.  ಈ ನೀಲೆ ಕ್ರೊಕೊಡೈಲ್ ಪ್ರಭೇದವೂ ಒಟ್ಟು ಆಫ್ರಿಕಾದ ಉಪ ಸಹರಾ ವಲಯದ 26 ದೇಶಗಳಲ್ಲಿ ಕಂಡು ಬರುತ್ತದೆ. ಈ ಮೊಸಳೆಗಳು ಸರೋವರಗಳು, ನದಿಗಳು, ಜೌಗು ಪ್ರದೇಶಗಳಂತಹ ವೈವಿಧ್ಯಮಯ ಜಲಚರ ಪರಿಸರದಲ್ಲಿ ವಾಸಿಸುತ್ತವೆ. 

ಊರಲ್ಲಿ ಮೊಸಳೆ ಬಂದಿದ್ದಕ್ಕೆ ಭಯದಿಂದ ಎಲ್ಲರೂ ಓಡ್ತಿದ್ರು… ಇವನು ಫುಟ್‌ಬಾಲ್‌ನಂತೆ ಒದ್ದ! ಮುಂದೇನಾಯ್ತು? 

Latest Videos
Follow Us:
Download App:
  • android
  • ios